
ಪೊಲೀಸರ ಮೇಲೆ ಹಲ್ಲೆ ನಡೆಸಿದ ನೈಜೀರಿಯಾ ಪ್ರಜೆ ಕೆವಿನ್ ಜೇಮ್ಸ್ ಸೆರೆ
ಬೆಂಗಳೂರು: ಪೊಲೀಸರ ಮೇಲೆ ಹಲ್ಲೆ ನಡೆಸಿದ ನೈಜೀರಿಯಾ ದೇಶದ ಪ್ರಜೆ ಕೆವಿನ್ ಜೇಮ್ಸ್ ಎಂಬಾತನನ್ನು ಮಾದನಾಯಕನ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೆವಿನ್ ಜೇಮ್ಸ್ ವಿರುದ್ಧ ಎನ್‌ಡಿಪಿಎಸ್ ಹಾಗೂ ಕೊಲೆ ಯತ್ನ ಆರೋಪದ ಅಡಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು.
ನ್ಯಾಯಾಲಯದ ಸೂಚನೆ ಮೇರೆಗೆ ಆರೋಪಿಯನ್ನು ನೆಲಮಂಗಲ ಸಮೀಪದ ಸೊಂಡೆಕೊಪ್ಪ ಬಳಿಯಿರುವ ವಿದೇಶಿಯರ ವಲಸಿಗರ ಕೇಂದ್ರದಲ್ಲಿ ಇರಿಸಲಾಗಿತ್ತು. ಎರಡು ದಿನಗಳ ಹಿಂದೆ ಜೇಮ್ಸ್ ಗಲಾಟೆ ನಡೆಸಿದ್ದಾನೆ ಎಂದು ಮೂಲಗಳು ಹೇಳಿವೆ.
‘ನನಗೆ ಜಾಮೀನು ಮಂಜೂರಾಗಿದೆ. ನನ್ನನ್ನು ಬಿಡಿ ಎಂದು ಹೇಳಿ ಎಎಸ್‌ಐ, ಕಾನ್‌ಸ್ಟೆಬಲ್‌ಗಳ ಮೇಲೆ ಹಲ್ಲೆ ನಡೆಸಿದ್ದಾನೆ’ ಎಂದು ಮೂಲಗಳು ಹೇಳಿವೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.