ಈ ರಾಶಿಯವರ ಅದೃಷ್ಟದಾಟ ಶುರು : ಒಲಿಯುವಳು ಲಕ್ಷ್ಮೀ, ಅಷ್ಟೈಶ್ವರ್ಯ ಹರಿದು ಬರುವುದು

ಈ ರಾಶಿಯವರ ಅದೃಷ್ಟದಾಟ ಶುರು : ಒಲಿಯುವಳು ಲಕ್ಷ್ಮೀ, ಅಷ್ಟೈಶ್ವರ್ಯ ಹರಿದು ಬರುವುದು

ಈ ರಾಶಿಯವರ ಅದೃಷ್ಟದಾಟ ಶುರು : ಒಲಿಯುವಳು ಲಕ್ಷ್ಮೀ, ಅಷ್ಟೈಶ್ವರ್ಯ ಹರಿದು ಬರುವುದು

Mars Transit 2026 : ಅಕ್ಟೋಬರ್ 17, 2026 ರಂದು ಮಧ್ಯಾಹ್ನ 12.56ಕ್ಕೆ, ಮಂಗಳ ಆಶ್ಲೇಷ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ. ಮಂಗಳನ ನಕ್ಷತ್ರ ಬದಲಾವಣೆಗೆ ಜ್ಯೋತಿಷ್ಯದಲ್ಲಿ ವಿಶೇಷ ಮಹತ್ವ ಇದೆ. ಮಂಗಳ ಧೈರ್ಯ, ಶೌರ್ಯ, ರಿಯಲ್ ಎಸ್ಟೇಟ್, ತಾಂತ್ರಿಕ ಕ್ಷೇತ್ರ, ಸ್ಪರ್ಧೆ ಮತ್ತು ಆಕ್ರಮಣಕಾರಿ ನಿರ್ಧಾರಗಳನ್ನು ಪ್ರತಿನಿಧಿಸುತ್ತಾನೆ. ಆಶ್ಲೇಷಾ ನಕ್ಷತ್ರ ತಂತ್ರ, ರಹಸ್ಯ, ಮಾನಸಿಕ ಬುದ್ಧಿವಂತಿಕೆ ಮತ್ತು ಸಂದರ್ಭಗಳನ್ನು ಒಬ್ಬರ ಪರವಾಗಿ ತಿರುಗಿಸುವ ಸಾಮರ್ಥ್ಯದೊಂದಿಗೆ ಸಂಬಂಧ ಹೊಂದಿದೆ.

ಆಶ್ಲೇಷಾ ನಕ್ಷತ್ರಕ್ಕೆ ಮಂಗಳನ ಪ್ರವೇಶದ ಮಹತ್ವ (Mars Star Transit) :

ವೈದಿಕ ಜ್ಯೋತಿಷ್ಯದಲ್ಲಿ, ಮಂಗಳ ಗ್ರಹವನ್ನು ಅಗ್ನಿ ಅಂಶ ಮತ್ತು ಶಕ್ತಿಯೊಂದಿಗೆ ಸಂಬಂಧ ಹೊಂದಿರುವ ಗ್ರಹ ಎಂದು ಕರೆಯಲಾಗುತ್ತದೆ. ಇದು ವ್ಯಕ್ತಿಯ ಇಚ್ಛಾಶಕ್ತಿ, ಸ್ಪರ್ಧಾತ್ಮಕ ಮನೋಭಾವ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಸವಾಲು ಎದುರಿಸುವ ವಿಧಾನದ ಮೇಲೆ ಪರಿಣಾಮ ಬೀರುತ್ತದೆ. ಆಶ್ಲೇಷ ನಕ್ಷತ್ರದ ಅಧಿಪತಿ ಬುಧ. ಬುಧ ಬುದ್ಧಿವಂತಿಕೆ, ಸಂವಹನ, ವ್ಯಾಪಾರ, ಲೆಕ್ಕಾಚಾರ ಮತ್ತು ಕಾರ್ಯತಂತ್ರದ ಅಂಶ.

ಮಂಗಳ ಮತ್ತು ಬುಧ ಗ್ರಹದ ಸ್ವಭಾವ ಬೇರೆ ಬೇರೆ. ಮಂಗಳ ತಕ್ಷಣದ ಕ್ರಿಯೆಗೆ ಪ್ರೇರಣೆ ನೀಡಿದರೆ, ಬುಧ ಆಲೋಚನೆ ಮತ್ತು ವಿಶ್ಲೇಷಣೆಯ ಮೂಲಕ ಮುಂದುವರಿಯಲು ಸೂಚಿಸುವವ. ಕೇವಲ ಕಠಿಣ ಪರಿಶ್ರಮದ ಬದಲಿಗೆ ಸರಿಯಾದ ತಂತ್ರ ರೂಪಿಸಿ ಮುಂದುವರಿಯಲು ಬಯಸುವವರಿಗೆ ಆಶ್ಲೇಷ ನಕ್ಷತ್ರದಲ್ಲಿ ಮಂಗಳ ಗ್ರಹ ಸಂಚಾರ ಲಾಭದಾಯಕವಾಗಿರುವುದು. ವ್ಯವಹಾರ, ಮಾರ್ಕೆಟಿಂಗ್, ತಾಂತ್ರಿಕ ಕೆಲಸ, ಸಂಶೋಧನೆ, ನಿರ್ವಹಣೆ ಮತ್ತು ಸ್ಪರ್ಧಾತ್ಮಕ ಕ್ಷೇತ್ರಗಳಿಗೆ ಸಂಬಂಧಿಸಿದವರು ಕೆಲಸದ ವಿಧಾನವನ್ನು ಬದಲಾಯಿಸಲು ಅವಕಾಶ ಪಡೆಯಬಹುದು.

ಈ ಸಂಚಾರದ ಫಲ ಎಲ್ಲಾ ರಾಶಿಯವರಿಗೂ ಒಂದೇ ರೀತಿ ಆಗಿರುವುದಿಲ್ಲ. ಆಶ್ಲೇಷ ನಕ್ಷತ್ರಕ್ಕೆ ಮಂಗಳ ಗ್ರಹ ಪ್ರವೇಶಿಸುವುದರಿಂದ ಕೆಲವು ರಾಶಿಯವರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಆದರೂ ಕೆಲವೊಂದು ವಿಚಾರಗಳಲ್ಲಿ ಜಾಗರೂಕರಾಗಿರಬೇಕು.

ವೃಷಭ ರಾಶಿಯವರಿಗೆ ಮಂಗಳ ಗ್ರಹದ ಈ ಸಂಚಾರವು ಶೌರ್ಯ ಮತ್ತು ಪ್ರಯತ್ನಗಳ ದೃಷ್ಟಿಯಿಂದ ಮಹತ್ವದ್ದಾಗಿದೆ. ಮಂಗಳ ನಿಮ್ಮ ರಾಶಿಯ ಮೂರನೇ ಮನೆಯಲ್ಲಿ ಸಂಚರಿಸುತ್ತಾನೆ. ಮೂರನೇ ಮನೆ ಎಂದರೆ ಧೈರ್ಯ, ಪ್ರಯತ್ನ, ಸಂವಹನ, ಸ್ವಂತವಾಗಿ ಯಶಸ್ಸು ಸಾಧಿಸುವುದರೊಂದಿಗೆ ಸಂಬಂಧ ಹೊಂದಿದೆ.

ವೃಷಭ ರಾಶಿಯವರು ಅಸಾಧ್ಯವೆಂದು ಕೈ ಬಿಟ್ಟಿರುವ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಬಹುದು. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವುದು. ನಿಮ್ಮ ಆಲೋಚನೆಯನ್ನು ಅಧಿಕಾರಿಗಳ ಮುಂದೆ ಪ್ರಸ್ತುತಪಡಿಸಲು ಅಥವಾ ಹೊಸ ಕೆಲಸ ಪ್ರಾರಂಭಿಸಲು ಅವಕಾಶ ಸಿಗಬಹುದು. ಮಾಧ್ಯಮ, ಮಾರಾಟ, ಮಾರ್ಕೆಟಿಂಗ್, ಸಂವಹನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ಕೌಶಲ್ಯವನ್ನು ಉತ್ತಮವಾಗಿ ಬಳಸಿಕೊಳ್ಳಬೇಕಾಗುತ್ತದೆ. ಹೊಸ ವ್ಯವಹಾರ ಆರಂಭಿಸಲು ಈ ಸಮಯ ಅನುಕೂಲಕರವಾಗಿದೆ. ಒಡಹುಟ್ಟಿದವರು ಅಥವಾ ಹತ್ತಿರ ಸಂಬಂಧಿಗಳೊಂದಿಗೆ ಮಾತನಾಡುವಾಘ ಎಚ್ಚರ ವಹಿಸಿ. ಬುದ್ಧಿವಂತಿಕೆಯಿಂದ ಪದ ಬಳಸಿ.

ಪರಿಹಾರ: ಮಂಗಳವಾರ ಹನುಮಂತನನ್ನು ಪೂಜಿಸಿ, ಅಗತ್ಯವಿರುವವರಿಗೆ ಬೇಳೆಕಾಳು ದಾನ ಮಾಡಿ.

ಆಶ್ಲೇಷ ನಕ್ಷತ್ರದಲ್ಲಿ ಮಂಗಳನ ಸಂಚಾರ ಅನೇಕ ರೀತಿಯಲ್ಲಿ ಪ್ರಯೋಜನಕಾರಿಯಾಗಿರುವುದು. ಮಂಗಳ ನಿಮ್ಮ ರಾಶಿಯ ಹನ್ನೊಂದನೇ ಮನೆಯಲ್ಲಿರುತ್ತಾನೆ. ಹನ್ನೊಂದನೇ ಮನೆ ಆದಾಯ, ಆಸೆಗಳ ಈಡೇರಿಕೆ, ಸಾಮಾಜಿಕ ಸಂವಹನವನ್ನು ಪ್ರತಿನಿಧಿಸುತ್ತದೆ. ಈ ಸಮಯ ಕೆಲಸಕ್ಕೆ ಹೋಗುವವರಿಗೆ ಅನುಕೂಲಕರವಾಗಿದೆ. ಹಳೆಯ ಪ್ರಯತ್ನ ಲಾಭ ತರುವುದು. ಹೆಚ್ಚುವರಿ ಜವಾಬ್ದಾರಿ ಸಿಗುವುದು. ಉದ್ಯೋಗ ಬದಲಾಯಿಸುವ ಯೋಚನೆ ಇದ್ದರೆ ಈ ಅವಧಿ ಅನುಕೂಲಕರವಾಗಿರುವುದು. ಹಳೆಯ ಗ್ರಾಹಕರ ಮೂಲಕವೇ ಹೊಸ ವ್ಯವಹಾರ ಶುರು ಮಾಡುವ ಸಾಧ್ಯತೆ ಇದೆ. ಹಣಕಾಸಿನ ಲಾಭವಾಗುವುದು. ಆದರೂ ಅನಗತ್ಯ ವೆಚ್ಚ ಮತ್ತು ಅಪಾಯಕಾರಿ ಹೂಡಿಕೆ ತಪ್ಪಿಸಿ.

ವೃತ್ತಿ ಮತ್ತು ಕೆಲಸದ ಸ್ಥಳಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಈ ಸಂಚಾರ ನಿರ್ಣಾಯಕ. ಮಂಗಳ ನಿಮ್ಮ ರಾಶಿಯ ಹತ್ತನೇ ಮನೆಯಲ್ಲಿರುತ್ತಾನೆ. ಹತ್ತನೇ ಮನೆ ಕರ್ಮ, ವೃತ್ತಿಪರ ಖ್ಯಾತಿ, ಜವಾಬ್ದಾರಿ ಮತ್ತು ಸಾಮಾಜಿಕ ಗುರುತಿಗೆ ಸಂಬಂಧಿಸಿದೆ. ಕೆಲಸದಲ್ಲಿ ಹೊಸ ಜವಾಬ್ದಾರಿ ಸಿಗುವುದು. ಈ ಜವಾಬ್ದಾರಿ ಸವಾಲಿನಿಂದ ಕೂಡಿದ್ದರೂ ಸರಿಯಾಗಿ ನಿಭಾಯಿಸುವಿರಿ. ಬಡ್ತಿ ಮೂಲಕ ಉನ್ನತ ಹುದ್ದೆಗೆ ಏರುವಿರಿ. ಬರೀ ಕಷ್ಟಪಟ್ಟು ಕೆಲಸ ಮಾಡಿದರೆ ಸಾಕಾಗಲ್ಲ, ಸರಿಯಾದ ಪ್ಲಾನ್ ಅಗತ್ಯ. ವ್ಯವಹಾರ ಪಾಲುದಾರರೊಂದಿಗೆ ಘರ್ಷಣೆ ಸ್ವಲ್ಪ ಕಿರಿ ಕಿರಿ ಉಂಟು ಮಾಡಬಹುದು. ಆತುರದಲ್ಲಿ ಯಾವುದೇ ದೊಡ್ಡ ವೃತ್ತಿಪರ ನಿರ್ಧಾರ ತೆಗೆದುಕೊಳ್ಳಬಾರದು. ಸಾಲ ಮತ್ತು ಖರ್ಚುಗಳ ವಿಷಯದಲ್ಲಿ ಸ್ಪಷ್ಟ ಯೋಜನೆ ರೂಪಿಸಿ.

ಪರಿಹಾರ: ಆಂಜನೇಯನ ಮುಂದೆ ದೀಪ ಬೆಳಗಿಸಿ . ಅಗತ್ಯವಿರುವವರಿಗೆ ಅನ್ನ ದಾನ ಮಾಡಿ. ಆಹಾರವನ್ನು ನೀಡಿ.

ಕುಂಭ ರಾಶಿ (Aquarius):

ಮಂಗಳ (mars) ಗ್ರಹದ ಈ ಸಂಚಾರ ಸವಾಲು ಎದುರಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ. ಮಂಗಳ ನಿಮ್ಮ ರಾಶಿಯ ಆರನೇ ಮನೆಯಲ್ಲಿ ಸಂಚರಿಸುತ್ತಾನೆ. ಆರನೇ ಮನೆ ಸ್ಪರ್ಧೆ, ಸಾಲ, ವಿವಾದ, ಉದ್ಯೋಗ ಮತ್ತು ವಿರೋಧಿಗಳಿಗೆ ಸಂಬಂಧಿಸಿದೆ. ಕೆಲಸದ ಸ್ಥಳದಲ್ಲಿ ತುಂಬಾ ದಿನದಿಂದ ಎದುರಿಸುತ್ತಿದ್ದ ಸಮಸ್ಯೆಗೆ ಪರಿಹಾರ ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವvರಿಗೆ ಯಶಸ್ಸು ಸಿಗುವುದು. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಬದಲು ವ್ಯವಸ್ಥಿತ ರೀತಿಯಲ್ಲಿ ಪೂರ್ಣಗೊಳಿಸುವುದು ಉತ್ತಮ.
ಕಾನೂನು ಅಥವಾ ಹಣಕಾಸಿನ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಈ ಅವಧಿಯಲ್ಲಿ ಯಾರಿಗೂ ಸಾಲ ಕೊಡಲು ಹೋಗಬೇಡಿ. ಖರ್ಚುಗಳ ಬಗ್ಗೆ ಎಚ್ಚರ ಇರಲಿ. ಕೋಪ ಕಡಿಮೆ ಮಾಡಿಕೊಂಡರೆ ಯಶಸ್ಸು ಹೆಚ್ಚಾಗುವುದು.

ಪರಿಹಾರ: ಮಂಗಳವಾರ ಹನುಮಾನ್ ಚಾಲೀಸಾ ಪಠಿಸಿ. ನೀವು ಅಗತ್ಯವಿರುವ ವ್ಯಕ್ತಿಗೆ ಕೆಂಪು ಮಸೂರವನ್ನು ದಾನ ಮಾಡಬಹುದು.

ನಿಮ್ಮ ರಾಶಿಯ (zodiac sign) ಐದನೇ ಮನೆಯಲ್ಲಿ ಮಂಗಳನ ಸಂಚಾರ ಆಗುತ್ತಿದೆ. ಐದನೇ ಮನೆಯು ಬುದ್ಧಿವಂತಿಕೆ, ಶಿಕ್ಷಣ, ಸೃಜನಶೀಲತೆ, ಸಂತತಿ ಮತ್ತು ಪ್ರೇಮ ಸಂಬಂಧಗಳೊಂದಿಗೆ ಸಂಬಂಧ ಹೊಂದಿದೆ. ಬರವಣಿಗೆ, ವಿನ್ಯಾಸ, ಡಿಜಿಟಲ್ ವಿಷಯ, ತಾಂತ್ರಿಕ ಕೆಲಸ ಅಥವಾ ಸೃಜನಶೀಲ ಕ್ಷೇತ್ರದಲ್ಲಿರುವವರು ತಮ್ಮ ಕೆಲಸದಲ್ಲಿ ಯಶಸ್ಸು ಪಡೆಯುತ್ತಾರೆ. ಮಂಗಳ ಕರ್ಕಾಟಕ ರಾಶಿಯಲ್ಲಿರುವುದರಿಂದ, ಭಾವನೆಗೆ ಕಟ್ಟು ಬಿದ್ದು ಯಅವ ನಿರ್ಧಾರವೂ ಬೇಡ. ಹಣ ಹೂಡಿಕೆ ಮಾಡುವ ರಿಸ್ಕ್ ಬೇಡ. ಅನುಮಾನ, ಕೋಪ ಅಥವಾ ಹಠಮಾರಿತನದಿಂದ ಪ್ರೇಮ ಸಂಬಂಧಗಳಲ್ಲಿ ವಿವಾದ ಹೆಚ್ಚಾಗಬಹುದು. ಮಕ್ಕಳಿಗೆ ಒತ್ತಡ ಹೇರುವ ಬದಲು, ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಿ.

zodiac signs mars horoscope

zodiac signs mars horoscope

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ