
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಶೇ 80.02 ಮತದಾನ
ನರಗುಂದ: ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪಟ್ಟಣ ಹಾಗೂ ಕೊಣ್ಣೂರಿನ ಮತಗಟ್ಟೆಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು.
ಪಟ್ಟಣದ ಮಿನಿವಿಧಾನಸೌಧದಲ್ಲಿದ್ದ ಇದ್ದ ಮತ ಗಟ್ಟೆಯಲ್ಲಿ 1277 ಮತದಾರರಲ್ಲಿ.1026 ಮತದಾರರು ಮತ ಚಲಾಯಿಸಿದ್ದಾರೆ. ಕೊಣ್ಣೂರಿ ನಲ್ಲಿನ ಮತಗಟ್ಟೆ ಯಲ್ಲಿ 457 ಮತದಾರರಲ್ಲಿ 401 ಮತದಾರರು ಚಲಾಯಿಸಿದರು. ಒಟ್ಟು ಶೇ80.02 ಮತದಾನ ಆಗಿದೆ ಎಂದು ತಹಶೀಲ್ದಾರ್ ಶ್ರೀಶೈಲ ತಳವಾರ ಹೇಳಿದರು.
ಹೆದ್ದಾರಿ ಮೇಲೆ ಜನಜಂಗುಳಿ: ಮತಗಟ್ಟೆ ಇರುವ ಪಟ್ಟಣದ ಮಿನಿವಿಧಾನಸೌಧವು ಹುಬ್ಬಳ್ಳಿ - ವಿಜಯಪುರ ರಾಷ್ಟ್ರೀಯ ಹೆದ್ದಾರಿ ಪಕ್ಕ ಇದ್ದ ಪರಿಣಾಮ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆದ್ದಾರಿಯಲ್ಲಿಯೇ ಮತದಾರರಿಗೆ ಮತ ಹಾಕಲು.ಹೇಳತೊಡಗಿದ್ದರು. ಇದರಿಂದ ಹೆಚ್ಚಿನ ಜನಜಂಗುಳಿ ಕಂಡು ಬಂದಿತು.
ಶಾಸಕ ಪಾಟೀಲ ಭೇಟಿ: ಮತಗಟ್ಟೆಗಳಿಗೆ ಶಾಸಕ ಸಿ.ಸಿ.ಪಾಟೀಲ ಭೇಟಿ ನೀಡಿದರು.
ಬಿಜೆಪಿ ಯುವ ಮುಖಂಡ ಉಮೇಶಗೌಡ ಪಾಟೀಲ, ಕಾಂಗ್ರೆಸ್ ಯುವ ಮುಖಂಡ ವಿವೇಕ ಯಾವಗಲ್ ಭೇಟಿ ನೀಡಿದರು.
ಸರತಿಯಲ್ಲಿ ಮತದಾನ: ಬೆಳಿಗ್ಗೆಯಿಂದ ಸಂಜೆಯವರೆಗೂ ಪುರುಷರು ಹಾಗೂ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಸಂಜೆ 4 ಗಂಟೆ ಮತದಾನ ಅವಧಿ ಮುಗಿದರೂ, ಮತ ಗಟ್ಟೆಗೆ ಮೊದಲೇ ಬಂದವರು. 5:15ರವರೆಗೆ ಮತ ಚಲಾಯಿಸಿದರು.