ಚಿತ್ರದುರ್ಗ| ಹಣ ಪಡೆಯಲು ಸಾಲುಗಟ್ಟಿ ನಿಂತ ಮತದಾರರು? ಹರಿದಾಡಿದ ವಿಡಿಯೊ

ಚಿತ್ರದುರ್ಗ| ಹಣ ಪಡೆಯಲು ಸಾಲುಗಟ್ಟಿ ನಿಂತ ಮತದಾರರು? ಹರಿದಾಡಿದ ವಿಡಿಯೊ

ಚಿತ್ರದುರ್ಗ| ಹಣ ಪಡೆಯಲು ಸಾಲುಗಟ್ಟಿ ನಿಂತ ಮತದಾರರು? ಹರಿದಾಡಿದ ವಿಡಿಯೊ

ಚಿತ್ರದುರ್ಗ: ವಿಧಾನ ಪರಿಷತ್ತಿನ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗಾಗಿ ಶುಕ್ರವಾರ ನಡೆದ ಮತದಾನದ ವೇಳೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ನೀಡುವ ಹಣ ಪಡೆಯಲು ಮತದಾರರು ಮುಗಿಬಿದ್ದಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಹಿರಿಯೂರು ನಗರದಲ್ಲಿ ಮಂಜುನಾಥ ಸ್ವಾಮಿಯ ಭಾವಚಿತ್ರವಿದ್ದ ಕವರ್‌ನಲ್ಲಿ ಮತದಾರರಿಗೆ ತಲಾ ₹ 1,000 ಹಣ ಹಂಚಿಕೆ ಮಾಡಲಾಗುತ್ತಿದೆ ಎಂಬ ಸುದ್ದಿ ಕೇಳಿ ಹಣ ಪಡೆಯಲು ಮತದಾರರು ಸಾಲುಗಟ್ಟಿ ನಿಂತರು ಎನ್ನಲಾದ ದೃಶ್ಯಗಳು ವಿಡಿಯೊದಲ್ಲಿವೆ. ರಾಜಕೀಯ ಪಕ್ಷವೊಂದರ ಮುಖಂಡರು ವಾಣಿಜ್ಯ ಸಂಕೀರ್ಣದ ಮಳಿಗೆಯೊಂದರ ಎದುರು ನಿಂತು ಮತದಾರರ ಪಟ್ಟಿ ನೋಡಿ, ಅವರ ಕೈಲಿರುವ ಟೋಕನ್‌ ಪಡೆಯುತ್ತಿರುವ ಛಾಯಾಚಿತ್ರಗಳು ಹರಿದಾಡುತ್ತಿವೆ.

‘ಹಣಕ್ಕೆ ಮುಗಿಬಿದ್ದ ಕುರಿತ ಸುದ್ದಿ, ಛಾಯಾಚಿತ್ರಗಳನ್ನು ಗಮನಿಸಿದ್ದೇನೆ. ಸತ್ಯಾಸತ್ಯತೆ ಪರಿಶೀಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಎಸ್‌.ರಮ್ಯಾ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ