
ಮದ್ಯ ಮಾರಾಟ: ₹22,191 ಕೋಟಿ ರಾಜಸ್ವ ಸಂಗ್ರಹ
ಬೆಂಗಳೂರು: ರಾಜ್ಯದಲ್ಲಿ ಏಪ್ರಿಲ್ನಿಂದ ಸೆಪ್ಟೆಂಬರ್ ಅವಧಿಯ ಆರು ತಿಂಗಳಲ್ಲಿ ಮದ್ಯ ಮಾರಾಟದಲ್ಲಿ ₹22,191 ಕೋಟಿ ವರಮಾನ ಸಂಗ್ರಹವಾಗಿದ್ದು,ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ 13.39 ಕೋಟಿ ಹೆಚ್ಚು ಸಂಗ್ರಹವಾಗಿದೆ.
ಭಾರತೀಯ ತಯಾರಿಕಾ ಮದ್ಯ (ಐಎಂಎಲ್) ಮಾರಾಟದಿಂದ ₹17,424.57 ಕೋಟಿ (ಶೇ 13.32), ಬಿಯರ್ ಮಾರಾಟದಿಂದ ₹3,377 ಕೋಟಿ (ಶೇ19.08) ಆದಾಯ ಬಂದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಐಎಂಎಲ್ನಿಂದ ₹15,376 ಕೋಟಿ, ಬಿಯರ್ನಿಂದ ₹2,836 ಕೋಟಿ ರಾಜಸ್ವ ಸಂಗ್ರಹವಾಗಿತ್ತು ಎಂದು ಅಬಕಾರಿ ಇಲಾಖೆ ಪ್ರಕಟಣೆ ತಿಳಿಸಿದೆ.
ಐಎಂಎಲ್ ಮದ್ಯ 346.33 ಲಕ್ಷ ಬಾಕ್ಸ್ಗಳು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 342.93 ಲಕ್ಷ ಬಾಕ್ಸ್ಗಳು ಮಾರಾಟವಾಗಿದ್ದವು. 3.90 ಲಕ್ಷ ಹೆಚ್ಚುವರಿ ಬಾಕ್ಸ್ಗಳು ಮಾರಾಟವಾಗಿದ್ದು, ಶೇ 1.14ರಷ್ಟು ಬೆಳವಣಿಗೆಯಾಗಿದೆ. ಬಿಯರ್ ಆರು ತಿಂಗಳಲ್ಲಿ 275.96 ಲಕ್ಷ ಬಾಕ್ಸ್ಗಳು ಮಾರಾಟವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 195.27 ಲಕ್ಷ ಬಾಕ್ಸ್ ಮಾರಾಟವಾಗಿದ್ದವು. ಶೇ 41.32ರಷ್ಟು ಬೆಳವಣಿಗೆಯಾಗಿದೆ ಎಂದು ವಿವರಿಸಿದೆ.