2026 ಅಕ್ಟೋಬರ್ 5: ಎಸ್‌ಐಆರ್, ಬರ ಅಧ್ಯಯನ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು

2026 ಅಕ್ಟೋಬರ್ 5: ಎಸ್‌ಐಆರ್, ಬರ ಅಧ್ಯಯನ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು

2026 ಅಕ್ಟೋಬರ್ 5: ಎಸ್‌ಐಆರ್, ಬರ ಅಧ್ಯಯನ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು

ರಾಜ್ಯ, ರಾಷ್ಟ್ರೀಯ, ವಿದೇಶ ವಿದ್ಯಮಾನಗಳಿಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಪ್ರತಿಭಟನೆ ವೇಳೆ ಪೊಲೀಸರಿಂದ ಲೈಂಗಿಕ ಕಿರುಕುಳ: ಮೂವರು ಪತ್ರಕರ್ತೆಯರ ಆರೋಪ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸಿ ಅಕ್ಟೋಬರ್ 3ರಂದು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ವೇಳೆ ಎಸಿಪಿ ಸೇರಿದಂತೆ ದೆಹಲಿ ಪೊಲೀಸ್ ಸಿಬ್ಬಂದಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮೂವರು ಯುವ ಪತ್ರಕರ್ತೆಯರು ಆರೋಪಿಸಿದ್ದಾರೆ.

3.94 ಲಕ್ಷ ‘ಇತರೆ’ ಮತದಾರರು ಎಲ್ಲಿ?: ಎಎಸ್‌ಡಿಡಿಒ ಪಟ್ಟಿಯಲ್ಲಿ ಬದಲಾವಣೆ ಶಂಕೆ

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ವೇಳೆ ‘ಇತರೆ’ (ಗಣತಿ ನಮೂನೆಗೆ ಸಹಿ ಮಾಡಲು ನಿರಾಕರಣೆ) ಎಂದು ವರ್ಗೀಕರಿಸಲಾಗಿದ್ದ 3.94 ಲಕ್ಷ ಮತದಾರರನ್ನು, ಮತಗಟ್ಟೆ ಅಧಿಕಾರಿಗಳ ಗಮನಕ್ಕೆ ತರದೆಯೇ ‘ಪತ್ತೆಯಾಗದ’ ಮತ್ತು ‘ಶಾಶ್ವತ ಸ್ಥಳಾಂತರ’ ವರ್ಗೀಕರಣಕ್ಕೆ ಸೇರಿಸಲಾಗಿದೆ.

ನಕಲಿ ಮತಗಳಿಂದ ಗೆಲ್ಲುತ್ತಿದ್ದ ಕಾಂಗ್ರೆಸ್‌ಗೆ ಎಸ್‌ಐಆರ್‌ನಿಂದ ತೊಂದರೆ: ಬೊಮ್ಮಾಯಿ

‘ಕಾಂಗ್ರೆಸ್ ಪಕ್ಷದವರು ಕಳೆದ 20 ವರ್ಷಗಳಿಂದ ನಕಲಿ ಮತಗಳನ್ನು ಹಾಕಿಸಿಕೊಂಡು ಆಯ್ಕೆಯಾಗುತ್ತಿದ್ದರು. ಒಂದೇ ವ್ಯಕ್ತಿ ಎರಡು ಕಡೆ ಮತಗಳನ್ನು ಹಾಕಿಸುವುದು ಹಾಗೂ ಸತ್ತವರ ಹೆಸರಿನಲ್ಲಿ ಮತಗಳನ್ನು ಹಾಕಿಸಿಕೊಳ್ಳುವುದು ಮಾಡುತ್ತಿದ್ದರು.

ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‌ಐಆರ್

ಚುನಾವಣಾ ಪ್ರಚಾರ ವೇಳೆ ಮತದಾರರ ಮೇಲೆ ಪ್ರಭಾವ ಬೀರಲು ಮಕ್ಕಳನ್ನು ಬಳಸಿಕೊಂಡ ಆರೋಪದ ಮೇಲೆ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ತಿರುಪ್ಪೂರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ವಿಮೆ ಮಾಡಿಸಿದ್ದರೂ ನಯಾಪೈಸೆ ಬರ ಪರಿಹಾರ ಸಿಕ್ಕಿಲ್ಲ: ರೈತರ ಅಳಲು

‘ಎರಡು ವರ್ಷ ಬೆಳೆ ವಿಮೆ ಮಾಡಿಸಿದ್ದರೂ ನಯಾಪೈಸೆ ಪರಿಹಾರ ಸಿಕ್ಕಿಲ್ಲ. ಬಿತ್ತನೆ, ಗೊಬ್ಬರ, ಔಷಧಿ ಸೇರಿ ಎಕರೆಗೆ ₹40 ಸಾವಿರ ಖರ್ಚು ಮಾಡಿದ್ದೇವೆ. ಹಾಕಿದ ಬಂಡವಾಳವೂ ಕೈಸೇರದ ಸ್ಥಿತಿ ಇದೆ...’

ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರ ಸರ್ಕಾರದ ಅಂತರ ಸಚಿವಾಲಯ ತಂಡದ (ಐಎಂಸಿಟಿ) ಎದುರು ದಾವಣಗೆರೆ ತಾಲ್ಲೂಕು ನೀರ್ಥಡಿ ಗ್ರಾಮದ ರೈತ ಎನ್‌.ಎಸ್‌. ವೀರಯ್ಯ ಅಳಲು ತೋಡಿಕೊಂಡಿದ್ದು ಹೀಗೆ. 

ಮತದಾನದ ಹಕ್ಕು ಕಸಿದುಕೊಳ್ಳುವುದು ಸಂವಿಧಾನದ ಉಲ್ಲಂಘನೆ: ಭುಯಾನ್

‘ದೇಶದ ಲಕ್ಷಾಂತರ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಪ್ರಕ್ರಿಯೆಯು ಸಾಂವಿಧಾನಿಕ ಹಕ್ಕಿನ ನಿರಾಕರಣೆಯಾಗಿದೆ’ ಎಂದು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಉಜ್ಜಲ್‌ ಭುಯಾನ್‌ ಹೇಳಿದ್ದಾರೆ.

ನಕಲಿ ಔಷಧಿ ಜಾಲ: ಫೈಜರ್ ಲೇಬಲ್‌ಗಾಗಿ ಟರ್ಕಿಗೆ ಹಲವು ಬಾರಿ ಭೇಟಿ ನೀಡಿದ್ದ ಆರೋಪಿ

ನಕಲಿ ಔಷಧಗಳ ಮರು ಪ್ಯಾಕಿಂಗ್ ಮತ್ತು ಮಾರಾಟ ಜಾಲದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಅಕ್ರಮದ ಪ್ರಮುಖ ಆರೋಪಿ ಪ್ರಶಾಂತ್ ರಾಜನ್ ಬಾಬು, ಫೈಜರ್ ಕಂಪನಿಯ ಅಸಲಿ ಲೇಬಲ್ ತರುವುದಕ್ಕಾಗಿ ಟರ್ಕಿಗೆ ವರ್ಷದಲ್ಲಿ ಹಲವು ಬಾರಿ ಭೇಟಿ ನೀಡಿರುವುದನ್ನು ಪತ್ತೆ ಮಾಡಿದೆ. ಅಲ್ಲದೆ, ಅಜರ್‌ಬೈಜಾನ್ ಸೇರಿ ಇತರೆ ದೇಶಗಳಿಗೆ ಭೇಟಿ ನೀಡುತ್ತಿದ್ದ ವಿಚಾರವೂ ಗೊತ್ತಾಗಿದೆ.

ಸಿಇಸಿ ಜ್ಞಾನೇಶ್‌ ರಾಜೀನಾಮೆಗೆ ಒತ್ತಾಯ: ಮುಂಬೈನಲ್ಲಿ ವಿಪಕ್ಷಗಳ ಶಕ್ತಿ ಪ್ರದರ್ಶನ

ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಒತ್ತಾಯಿಸಿ ನವದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಮೂರನೇ ದಿನವೂ ಮುಂದುವರಿದಿದೆ. ಈ ನಡುವೆ, ಮುಂಬೈನಲ್ಲಿ ಭಾನುವಾರ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್‌ ಠಾಕ್ರೆ ಮತ್ತು ಎಂಎನ್‌ಎಸ್‌ ಮುಖ್ಯಸ್ಥ ರಾಜ್‌ ಠಾಕ್ರೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ವೈಯಕ್ತಿಕ ಕಾರಣ ಹೇಳಿ ದಿಢೀರ್ ರಾಜೀನಾಮೆ ನೀಡಿದ ಇರಾನ್ ಇಂಧನ ಸಚಿವ

ಇರಾನ್‌ನ ಇಂಧನ ಸಚಿವ ಮೊಹ್ಸೆನ್ ಪಾಕ್ನೆಜಾದ್ ಅವರು ವೈಯಕ್ತಿಕ ಕಾರಣ ಉಲ್ಲೇಖಿಸಿ ದಿಢೀರ್ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.

ಸರ್ಕಾರಿ ಸ್ವಾಮ್ಯದ ‘ನ್ಯಾಷನಲ್ ಇರಾನಿಯನ್ ಆಯಿಲ್ ಕಂಪನಿ’ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಮೀದ್ ಬೋವಾರ್ಡ್ ಅವರು ಹಂಗಾಮಿ ಸಚಿವರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸರ್ಕಾರಿ ಮಾಧ್ಯಮಗಳು ವರದಿ ಮಾಡಿವೆ.

ಏಷ್ಯನ್‌ ಗೇಮ್ಸ್‌ ಪದಕ ಬೇಟೆ: 169 ಚಿನ್ನ ಗೆದ್ದ ಚೀನಾ; ಭಾರತ ಜಯಿಸಿದ್ದೆಷ್ಟು?

ಏಷ್ಯನ್‌ ಗೇಮ್ಸ್‌ ಪದಕ ಬೇಟೆಯಲ್ಲಿ ಚೀನಾ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಈ ಬಾರಿಯ ಕೂಟದಲ್ಲಿ ಬರೋಬ್ಬರಿ 169 ಚಿನ್ನ, 89 ಬೆಳ್ಳಿ ಹಾಗೂ 83 ಕಂಚು ಸೇರಿದಂತೆ  341 ಪದಕಗಳನ್ನು ಗೆದ್ದುಕೊಳ್ಳುವ ಮೂಲಕ ಅಗ್ರಸ್ಥಾನ ಕಾಯ್ದುಕೊಂಡಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ