ಏಳು ರೂಪಾಯಿಗೆ ಲಾಟರಿ ಟಿಕೆಟ್ ಖರೀದಿಸಿ ₹1 ಕೋಟಿ ಬಹುಮಾನ ಗೆದ್ದ ಕೂಲಿಕಾರ ಮಹಿಳೆ!

ಏಳು ರೂಪಾಯಿಗೆ ಲಾಟರಿ ಟಿಕೆಟ್ ಖರೀದಿಸಿ ₹1 ಕೋಟಿ ಬಹುಮಾನ ಗೆದ್ದ ಕೂಲಿಕಾರ ಮಹಿಳೆ!

ಏಳು ರೂಪಾಯಿಗೆ ಲಾಟರಿ ಟಿಕೆಟ್ ಖರೀದಿಸಿ ₹1 ಕೋಟಿ ಬಹುಮಾನ ಗೆದ್ದ ಕೂಲಿಕಾರ ಮಹಿಳೆ!

ಕೂಲಿ ಕಾರ್ಮಿಕ ಕುಟುಂಬದ ಮಹಿಳೆ ಬಿಮ್ಲಾ ದೇವಿ ಅವರು ಗೃಹಬಳಕೆಯ ವಸ್ತುಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋಗಿದ್ದರು. ಆಗ ಅಲ್ಲಿಯೇ ಇದ್ದ ‘ಸಿಕ್ಕಿಂ ಸರ್ಕಾರಿ ಲಾಟರಿ ಅಂಗಡಿ’ಯಲ್ಲಿ ₹7 ಕೊಟ್ಟು ಲಾಟರಿ ಟಿಕೆಟ್ ಒಂದನ್ನು ಖರೀದಿಸಿದ್ದರು. ಅವರು ಕೊಂಡುಕೊಂಡ ಆ ಟಿಕೆಟ್ ತಮ್ಮ ಬದುಕನ್ನೇ ಬದಲಿಸುತ್ತದೆ ಎಂಬ ಊಹೆ ಕೂಡ ಅವರಿಗಿರಲಿಲ್ಲ. ಕಾಗದದ ಆ ಟಿಕೆಟ್‌ ಕುಟುಂಬದ ಬಡತನವನ್ನೇ ಕರಗಿಸಿ, ಶ್ರೀಮಂತಿಕೆ ತಂದು ಕೊಟ್ಟಿದೆ.

ಹೌದು...ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಕೋಟ್ಕಪುರದಲ್ಲಿರುವ ಬಿಮ್ಲಾ ದೇವಿ ಕುಟುಂಬಕ್ಕೆ ಬರೋಬ್ಬರಿ ₹1 ಕೋಟಿ ಲಾಟರಿ ಹೊಡೆದಿದೆ. ಲಾಟರಿಯ ಫಲಿತಾಂಶ ಬಿಡುಗಡೆಯಾಗುವ ಒಂದು ದಿನದ ಮೊದಲು ಬಿಮ್ಲಾ ದೇವಿ ಅವರು ಲಾಟರಿ ಟಿಕೆಟ್ ಅನ್ನು ಖರೀದಿಸಿದ್ದರು. ಸದ್ಯ ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಬಡತನ ಶಾಶ್ವತವಲ್ಲ ಎಂಬುದನ್ನು ಸಾಬೀತುಪಡಿಸಿದೆ.

ಮರುದಿನ ಅಂಗಡಿಯ ಮಾಲೀಕರು ವಿಜೇತರ ಲಾಟರಿ ಸಂಖ್ಯೆಯನ್ನು ಘೋಷಿಸಿ, ಲಾಟರಿ ವಿಜೇತ ಕುಟುಂಬವನ್ನು ಅಂಗಡಿಗೆ ಕರೆಸಿ, ಸಿಹಿ ತಿನಿಸಿ ಶುಭಾಶಯ ಕೋರಿದ್ದಾರೆ.

ಎನ್‌ಡಿಟಿವಿ ವರದಿ ಪ್ರಕಾರ, ಗೆದ್ದ ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಲಾಟರಿ ವಿಜೇತ ಕುಟುಂಬ ಇನ್ನೂ ನಿರ್ಧರಿಸಿಲ್ಲ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ವ್ಯಾಪಾರ ಆರಂಭಿಸುವ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ಅಂಗಡಿ ಮಾಲೀಕ ನರೇಶ್ ಮೋಂಗಾ ಮಾತನಾಡಿ, ‘ನಮ್ಮ ಅಂಗಡಿಯನ್ನು 6 ತಿಂಗಳ ಹಿಂದೆಯಷ್ಟೇ ಇಲ್ಲಿಗೆ ಸ್ಥಳಾಂತರಿಸಿದ್ದೆವು. ಈಗಾಗಲೇ ಲಕ್ಷಾಂತರ ರೂಪಾಯಿ ಮೌಲ್ಯದ ಲಾಟರಿಯನ್ನು ಹಲವರು ಗೆದ್ದಿದ್ದಾರೆ. ಆದರೆ ₹1 ಕೋಟಿಯ ಲಾಟರಿ ಗೆದ್ದಿರುವುದು ಇದೇ ಮೊದಲು‘ ಎಂದು ಹೇಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ