ರಾಮನು ಯಾದವ್‌ಗೆ ಹೊಡೆದ: ಉತ್ತರ ಪ್ರದೇಶ ಮತದಾರರ ಪಟ್ಟಿಯಲ್ಲಿ ವಿಚಿತ್ರ ಹೆಸರುಗಳು

ರಾಮನು ಯಾದವ್‌ಗೆ ಹೊಡೆದ: ಉತ್ತರ ಪ್ರದೇಶ ಮತದಾರರ ಪಟ್ಟಿಯಲ್ಲಿ ವಿಚಿತ್ರ ಹೆಸರುಗಳು

ರಾಮನು ಯಾದವ್‌ಗೆ ಹೊಡೆದ: ಉತ್ತರ ಪ್ರದೇಶ ಮತದಾರರ ಪಟ್ಟಿಯಲ್ಲಿ ವಿಚಿತ್ರ ಹೆಸರುಗಳು

ಲಖನೌ: ‘ರಾಮ್‌ ನೇ ಯಾದವ್‌ ಕೊ ಮಾರಾ’ (ರಾಮನು ಯಾದವ್‌ಗೆ ಹೊಡೆದ), ‘ರಾಮ್‌ ನೇ ಶರ್ಮಾ ಕೊ ಮಾರಾ’ (ರಾಮನು ಶರ್ಮಾಗೆ ಹೊಡೆದ), ‘ಬಿ.ಕಾಂ’ ಎಂಬಿತ್ಯಾದಿ ಹೆಸರುಗಳು ಉತ್ತರ ಪ್ರದೇಶ ವಿಧಾನಪರಿಷತ್‌ ಚುನಾವಣಾ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಅಲಹಾಬಾದ್‌–ಝಾನ್ಸಿ ಪದವೀಧರರ ಕ್ಷೇತ್ರವೂ ಸೇರಿದಂತೆ ಪರಿಷತ್‌ನ ಒಟ್ಟು 11 ಸ್ಥಾನಗಳಿಗೆ ಶುಕ್ರವಾರ ಮತದಾನ ನಡೆಯುತ್ತಿದೆ.

ಮತದಾರರ ಪಟ್ಟಿಯಲ್ಲಿರುವ ‘ಅಸಾಮಾನ್ಯ’ ಹೆಸರುಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ಚುನಾವಣಾ ಆಯೋಗ ಗುರುವಾರ ಪ್ರತಿಕ್ರಿಯೆ ನೀಡಿದೆ.

‘11 ಕ್ಷೇತ್ರಗಳ ಮತದಾರರ ಪಟ್ಟಿಯಲ್ಲಿರುವ ಒಟ್ಟು 14.81 ಲಕ್ಷ ಮಂದಿಯ ಪೈಕಿ 158 ‘ಅಸಾಮಾನ್ಯ’ ಹೆಸರುಗಳು ದಾಖಲಾಗಿವೆ’ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ನವದೀಪ್ ರಿನ್ವಾ ಹೇಳಿದ್ದಾರೆ. ಹಾಗೆಯೇ, ಮತದಾರ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ತಯಾರಿಸಲು ಪರಿಚಯಿಸಲಾದ ಸಾಫ್ಟ್‌ವೇರ್‌ನಿಂದ ಅನುವಾದಕ್ಕೆ ಸಂಬಂಧಿಸಿದ ಈ ಪ್ರಮಾದ ಆಗಿದೆ ಎಂದಿದ್ದಾರೆ.

ಉತ್ತರ ಪ್ರದೇಶದಲ್ಲಿ ಇದೇ ಮೊದಲ ಬಾರಿಗೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಡಿಜಿಟಲ್ ರೂಪದಲ್ಲಿ ಸಿದ್ಧಪಡಿಸಲಾಗಿದೆ. ಇಂಗ್ಲಿಷ್‌ನಲ್ಲಿ ತಯಾರಿಸಿದ ಪಟ್ಟಿಯನ್ನು ಹಿಂದಿಗೆ ಅನುವಾದಿಸಲು ಅನುಕೂಲವಾಗುವಂತೆ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲಾಗಿತ್ತು. ಅದರಿಂದ ಕೆಲವು ಹೆಸರುಗಳು ತಪ್ಪಾಗಿ ಅನುವಾದಗೊಂಡಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕೆಲವು ಉದಾಹರಣೆಗಳನ್ನೂ ನೀಡಿರುವ ಅವರು, ‘Ramhit Yadav (ರಾಮಹಿತ ಯಾದವ್) ಎಂಬ ಹೆಸರನ್ನು ಇಂಗ್ಲಿಷ್‌ನಲ್ಲಿ Ram hit Yadav (ರಾಮ್‌ ಹಿಟ್‌ ಯಾದವ್) ಎಂಬಂತೆ ತಪ್ಪಾಗಿ ಟೈಪ್‌ ಮಾಡಿದ್ದರೆ, ಸದ್ಯ ಬಳಸಲಾಗಿರುವ ಸಾಫ್ಟ್‌ವೇರ್‌ ಆ ಹೆಸರನ್ನು ಹಿಂದಿಗೆ ಅನುವಾದಿಸುವಾಗ ‘ರಾಮ್‌ ನೇ ಯಾದವ್‌ ಕೊ ಮಾರಾ’ ಎಂದು ನೀಡುತ್ತದೆ’ ಎಂದಿದ್ದಾರೆ.

‘ಇವನ್ನೆಲ್ಲ ಸಂಪಾದಿಸಿ ಸರಿಪಡಿಸಬಹುದಿತ್ತು’ ಎನ್ನುವ ಮೂಲಕ ಆಗಿರುವ ದೋಷವನ್ನು ಒಪ್ಪಿಕೊಂಡಿರುವ ಅವರು, ‘ಪಟ್ಟಿಯಲ್ಲಿ ಬಿ.ಕಾಂ ಎಂದು ನಮೂದಾಗಿರುವುದು ನಿರ್ಲಕ್ಷ್ಯದಿಂದ ಆದ ದೋಷವೇ ಸರಿ’ ಎಂದೂ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಐದು ಪದವೀಧರ ಮತ್ತು ಆರು ಶಿಕ್ಷಕರ ಕ್ಷೇತ್ರಗಳಿಗೆ ಇಂದು (ಅಕ್ಟೋಬರ್‌ 23) ಬೆಳಿಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯುತ್ತಿದೆ. 72 ಜಿಲ್ಲೆಗಳಾದ್ಯಂತ ಒಟ್ಟು 2,697 ಮತಗಟ್ಟೆಗಳನ್ನು ತೆರೆಯಲಾಗಿದ್ದು, 14.8 ಲಕ್ಷಕ್ಕೂ ಹೆಚ್ಚು ಮತದಾರರು ಹಕ್ಕು ಚಲಾಯಿಸಲು ಅರ್ಹರಾಗಿದ್ದಾರೆ. ಕಣದಲ್ಲಿ 152 ಅಭ್ಯರ್ಥಿಗಳಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ