ದೆಹಲಿ PG ಕಟ್ಟಡ ಕುಸಿತ: ಸುರಕ್ಷತೆ ಬಗ್ಗೆ ಪ್ರಶ್ನೆ, ವಿದ್ಯಾರ್ಥಿಗಳ ಪ್ರತಿಭಟನೆ

ದೆಹಲಿ PG ಕಟ್ಟಡ ಕುಸಿತ: ಸುರಕ್ಷತೆ ಬಗ್ಗೆ ಪ್ರಶ್ನೆ, ವಿದ್ಯಾರ್ಥಿಗಳ ಪ್ರತಿಭಟನೆ

ದೆಹಲಿ PG ಕಟ್ಟಡ ಕುಸಿತ: ಸುರಕ್ಷತೆ ಬಗ್ಗೆ ಪ್ರಶ್ನೆ, ವಿದ್ಯಾರ್ಥಿಗಳ ಪ್ರತಿಭಟನೆ

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ದಕ್ಷಿಣ ಕ್ಯಾಂಪಸ್‌ನಿಂದ ಕೂಗಳತೆಯ ದೂರದಲ್ಲಿರುವ ಶಾಂತಿ ನಿಕೇತನ್‌ ಪ್ರದೇಶದಲ್ಲಿ ಭಾನುವಾರ ಸುಮಾರು 30 ವರ್ಷದ ಐದು ಮಹಡಿಗಳ ಪಿ.ಜಿ ಕಟ್ಟಡವೊಂದು ಕುಸಿದು ಬಿದ್ದಿದೆ.

ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಮತ್ತು ದೆಹಲಿ ಪೊಲೀಸರ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಖಾಲಿ ಮಾಡಿಸಿದ್ದ ಕಟ್ಟಡದಲ್ಲಿ ಮತ್ತೆ ಪಿಜಿ ಆರಂಭ!

ಪಿ.ಜಿ ಕಟ್ಟಡ ಕುಸಿದು ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿದೆ. ಇತ್ತ 10ಕ್ಕೂ ಹೆಚ್ಚು ಗಾಯಾಳುಗಳು ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಟ್ಟಡ ಮಾಲೀಕ ಆನಂದ್ ಬನ್ಸಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ, ಈ ಕಟ್ಟಡವನ್ನು ಒಂದು ವರ್ಷದ ಹಿಂದೆ ಖಾಲಿ ಮಾಡಿಸಲಾಗಿತ್ತು. ಆದರೆ, ಎರಡು-ಮೂರು ತಿಂಗಳ ಹಿಂದೆ ಇದೇ ಕಟ್ಟಡದಲ್ಲಿ ಮತ್ತೆ ಪಿ.ಜಿ ಆರಂಭಿಸಲಾಗಿತ್ತು ಎಂದು ವರದಿಯಾಗಿದೆ.

ತೆರವು ಮಾಡಿಸಲಾಗಿದ್ದ ಕಟ್ಟಡದಲ್ಲಿ ಮತ್ತೆ ಜನರಿಗೆ ವಾಸಿಸಲು ಹೇಗೆ ಅನುಮತಿ ನೀಡಲಾಯಿತು?, ಅವರಿಗೆ ವಾಸಿಸಲು ಅವಕಾಶ ನೀಡುವ ಮೊದಲು ಸೂಕ್ತ ಸುರಕ್ಷತೆ ಮತ್ತು ಕಟ್ಟಡದ ದೃಢತೆಯ ತಪಾಸಣೆ ನಡೆಸಲಾಗಿದೆಯೇ ಎಂಬುದರ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ವಿದ್ಯಾರ್ಥಿಗಳಿಗೆ ದೊಡ್ಡ ಸವಾಲು

ದೆಹಲಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ಸೀಟುಗಳ ಸಂಖ್ಯೆ ಸೀಮಿತವಾಗಿರುವುದರಿಂದ ದೆಹಲಿ ವಿಶ್ವವಿದ್ಯಾಲಯದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಂತಿ ನಿಕೇತನ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಾಸ್ಟೆಲ್ ಸೌಲಭ್ಯ ಸಿಗದ ವಿದ್ಯಾರ್ಥಿಗಳು ಹೆಚ್ಚಾಗಿ ಪಿ.ಜಿಗಳು ಅಥವಾ ಬಾಡಿಗೆ ಮನೆಗಳನ್ನು ಅವಲಂಬಿಸಿದ್ದಾರೆ.

ಮನೆ ಮಾಲೀಕರು ಹೆಚ್ಚಿನ ಅಥವಾ ತಮಗಿಷ್ಟ ಬಂದಷ್ಟು ಬಾಡಿಗೆ ಪಡೆಯುತ್ತಿದ್ದಾರೆ. ಇಂತಹ ಖಾಸಗಿ ವಸತಿ ನಿಲಯಗಳ ಸುರಕ್ಷತಾ ಮಾನದಂಡಗಳು ಕಳವಳಕಾರಿ ವಿಷಯವಾಗಿಯೇ ಉಳಿದಿವೆ. ಶಾಂತಿ ನಿಕೇತನದ ಈ ಘಟನೆಯು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಕೈಗೆಟುಕುವ ಬೆಲೆಯ ವಸತಿಯ ಸಮಸ್ಯೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.

ಪ್ರತಿಭಟನೆಗಿಳಿದ ವಿದ್ಯಾರ್ಥಿ ಸಂಘಟನೆಗಳು

ಕಟ್ಟಡ ಕುಸಿತದ ಸುದ್ದಿ ಪ್ರವಾಸವಾಗುತ್ತಿದ್ದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳ ನಾಯಕರು ಮತ್ತು ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಡಿಯುಎಸ್‌ಯು) ಅಧ್ಯಕ್ಷ ಆರ್ಯನ್ ಮಾನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದೆಹಲಿ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ವರದಿಯಾಗಿದೆ.

ಚುನಾವಣಾ ಕಾವು ಹೆಚ್ಚಿಸಿದ ದುರಂತ

ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಒಕ್ಕೂಟದ (ಡಿ‍ಯುಎಸ್‌ಯು) ಚುನಾವಣೆಗೆ ಕೆಲವೇ ದಿನಗಳ ಬಾಕಿ ಇರುವಂತೆಯೇ ಕಟ್ಟಡ ಕುಸಿತ ದುರಂತ ಸಂಭವಿಸಿದೆ. ಇದೇ ವಿಚಾರ ಎಬಿವಿಪಿ ಮತ್ತು ಎನ್‌ಎಸ್‌ಯುಐ ನಡುವಿನ ರಾಜಕೀಯ ಸ್ಪರ್ಧೆ ಹೆಚ್ಚಾಗುವಂತೆ ಮಾಡಿದೆ.

ಎರಡೂ ಸಂಘಟನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಮತ್ತು ಸಂತ್ರಸ್ತರಿಗೆ ನೆರವಾಗಲು ತಮ್ಮ ಕಾರ್ಯಕರ್ತರಿಗೆ ಸೂಚಿಸಿವೆ.

ಶಾಂತಿ ನಿಕೇತನ್‌ ಪ್ರದೇಶದ ಕಟ್ಟಡ ಕುಸಿತವು ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ಕೈಗೆಟುಕುವ ವಸತಿ ಸೌಲಭ್ಯ ಒದಗಿಸುವ ದೀರ್ಘಕಾಲದ ಸಮಸ್ಯೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ. ಇದೇ ಸಂದರ್ಭದಲ್ಲಿ ಡಿಯುಎಸ್‌ಯು ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ಈ ಘಟನೆಯು ಕ್ಯಾಂಪಸ್‌ನ ರಾಜಕೀಯ ಚರ್ಚೆಯಲ್ಲಿ ಪ್ರಮುಖ ವಿಷಯವಾಗುವ ಸಾಧ್ಯತೆಯಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ