ಪಾಟೀಲ ಸಹೋದರರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಕಲ್ಪ

ಪಾಟೀಲ ಸಹೋದರರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಕಲ್ಪ

ಪಾಟೀಲ ಸಹೋದರರಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಂಕಲ್ಪ

ಮುಂಡರಗಿ: ಎಷ್ಟೋ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವೇ ನಿರ್ಲಕ್ಷ್ಯ ತೋರುತ್ತಿರುವಾಗ ಪಟ್ಟಣದ ಪಾಟೀಲ ಸಹೋದರರು ಪ್ರತಿ ವರ್ಷ ತಾಲ್ಲೂಕಿನ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ.

ಆನಂದಗೌಡ, ಲಿಂಗರಾಜಗೌಡ, ಮಂಜುನಾಥಗೌಡ ಹಾಗೂ ಪ್ರಕಾಶಗೌಡ ಪಾಟೀಲ ಅವರು ತಮ್ಮ ತಂದೆಯ ಹೆಸರಿನಲ್ಲಿ ‘ಲಿಂ.ಎಚ್.ಎಸ್. ಪಾಟೀಲ ಪ್ರತಿಷ್ಠಾನ’ ಸ್ಥಾಪಿಸಿಕೊಂಡು ಪ್ರತಿ ವರ್ಷ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಈ ಪೈಕಿ ಶಾಲೆಗಳ ದತ್ತು ಹಾಗೂ ಅಭಿವೃದ್ಧಿ ಕಾರ್ಯವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸರ್ಕಾರಿ ಶಾಲೆಗಳು ಯಾವುದರಲ್ಲಿಯೂ ಹಿಂದುಳಿ ಯಬಾರದು ಹಾಗೂ ಸರ್ಕಾರಿ ಶಾಲೆಯ ಮಕ್ಕಳಿಗೆ ಎಲ್ಲ ರೀತಿಯ ವಿಶೇಷ ಸೌಲಭ್ಯಗಳು ದೊರೆಯಬೇಕು ಎನ್ನುವ ಸದುದ್ದೇಶದಿಂದ ಪಾಟೀಲ ಸಹೋದರರು ಕೆಲ ವರ್ಷಗಳಿಂದ ಈ ಕೈಂಕರ್ಯದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದಾರೆ.

ಪ್ರಸಕ್ತ ವರ್ಷ ಪಾಟೀಲ ಸಹೋದರರು ತಾಲ್ಲೂಕಿನ ಕಲಕೇರಿ, ಮಕ್ತುಂಪುರ, ಬೆಣ್ಣಿಹಳ್ಳಿ, ನಾಗರಹಳ್ಳಿ, ಡಂಬಳ, ಬಸಾಪುರ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದತ್ತು ಪಡೆದಿದ್ದಾರೆ. ಶಾಲೆಗಳಿಗೆ ಸುಣ್ಣ, ಬಣ್ಣ ಬಳಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಕಾಂಪೌಂಡ್ ದುರಸ್ತಿ, ಅಡುಗೆ ಕೊಠಡಿ ನಿರ್ಮಾಣ, ಅಡುಗೆ ಪಾತ್ರೆಗಳು, ಪೀಠೋಪಕರಣ ಹಾಗೂ ಆಟೋಟಗಳ ಸಾಮಗ್ರಿ ವಿತರಣೆ ಈ ಸಹೋದರರ ಸಂಕಲ್ಪಕ್ಕೆ ಸಾಕ್ಷಿಯಾಗಿವೆ.

ಮುಂದಿನ ವರ್ಷ ತಾಲ್ಲೂಕಿನ ವಿವಿಧ ಶಾಲೆಗಳ ಮಕ್ಕಳಿಗೆ ಸಮವಸ್ತ್ರ, ಬ್ಯಾಗ್ ಹಾಗೂ ಸಮಗ್ರ ಕಲಿಕಾ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.

ಅಂಗನವಾಡಿ ಅಭಿವೃದ್ಧಿಗೂ ಕೊಡುಗೆ

ಕಳೆದ ವರ್ಷ ತಾಲ್ಲೂಕಿನ ರಾಮೇನಹಳ್ಳಿ, ಕಲಕೇರಿ (ಹೆಣ್ಣುಮಕ್ಕಳ ಶಾಲೆ), ಬಾಗೇವಾಡಿ ಸರ್ಕಾರಿ ಶಾಲೆ ಸೇರಿದಂತೆ ವಿವಿಧ ಶಾಲೆಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರು. 2024–25ನೇ ಸಾಲಿನಲ್ಲಿ ಪಟ್ಟಣದ ಎಸ್.ಎಂ. ಭೂಮರಡ್ಡಿ ಸರ್ಕಾರಿ ಶಾಲೆ, ಜೆ.ಎಚ್. ಪಟೇಲ್ ನಗರದ ಅಂಗವಾಡಿ ಸೇರಿದಂತೆ ವಿವಿಧ ಶಾಲೆಗಳ ಅಭಿವೃದ್ಧಿ ಕಂಡಿವೆ

ತಾಲ್ಲೂಕಿನ ಶಿಂಗಟಾಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳ ಅಂಗನವಾಡಿ ಕೇಂದ್ರಗಳ ಸುಮಾರು 500 ಮಕ್ಕಳಿಗೆ ಉಚಿತವಾಗಿ ಸಮವಸ್ತ್ರ ಹಾಗೂ ಆಟಿಕೆ ಸಾಮಗ್ರಿಗಳನ್ನು ನೀಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಜರುವ ಕ್ರೀಡಾಕೂಟ, ನಾಟಕ, ಹಬ್ಬಗಳಲ್ಲಿ ತೊಡಗುವ ಸಂಘ, ಸಂಸ್ಥೆಗಳಿಗೂ ಉದಾರ ದೇಣಿಗೆ ನೀಡುತ್ತ ಬಂದಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ