
Daali Dhananjaya: ಮಗುವಿನ ಹೆಸರು ರಿವೀಲ್ ಮಾಡಿ ಕನ್ನಡಿಗರ ಮನಸ್ಸು ಗೆದ್ದ ನಟ ಡಾಲಿ ಧನಂಜಯ್, ಇಮ್ಮಡಿ ಪುಲಕೇಶಿ ಬಾಲ್ಯದ ಹೆಸರು!
Daali Dhananjaya: ಮಗುವಿನ ಹೆಸರು ರಿವೀಲ್ ಮಾಡಿ ಕನ್ನಡಿಗರ ನಟ ಡಾಲಿ ಧನಂಜಯ್ ಅವರು ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಕನ್ನಡಿಗರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ಕೋರಿರುವ ಡಾಲಿ ಧನಂಜಯ್ ಅವರು ಗೌರಿ ಗಣೇಶ ಹಬ್ಬದ ಸಂಭ್ರಮದ ದಿನದಂದೇ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ. ಮುದ್ದಾದ ಕನ್ನಡದ ಹೆಸರನ್ನು ತಮ್ಮ ಮಗುವಿಗೆ ಇರಿಸಿದ್ದಾರೆ. ಈ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ. ಡಾಲಿ ಧನಂಜಯ್ ಅವರು ಮಗುವಿಗೆ ಯಾವ ಹೆಸರು ನಾಮಕರಣ ಮಾಡಿದ್ದಾರೆ. ಇದಕ್ಕೆ ಕನ್ನಡಿಗರ ಪ್ರತಿಕ್ರಿಯೆ ಹೇಗಿದೆ ಎನ್ನುವ ಸಂಪೂರ್ಣ ವಿವರ ಈ ಲೇಖನದಲ್ಲಿದೆ.
ಡಾಲಿ ಧನಂಜಯ್ ಅವರು ಸೆಪ್ಟೆಂಬರ್ 14ರ ಸೋಮವಾರ ಗೌರಿ ಗಣೇಶ ಹಬ್ಬದ ಸಂಭ್ರಮದಲ್ಲಿ ತಮ್ಮ ಮಗುವಿನ ಹೆಸರು ರಿವೀಲ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಡಾಲಿ ಧನಂಜಯ್ ಅವರು, ಗೌರಿ ಗಣೇಶ ಹಬ್ಬದ ಶುಭಾಶಯಗಳು. ನಮ್ಮನ್ನ ಪ್ರೀತಿಸುವ ಜೀವಗಳು, ಮಗನನ್ನ ನಮಗೆ ಯಾವಾಗ ತೋರಿಸುತ್ತೀರಿ ಅಂತ ಕೇಳ್ತ ಇದ್ರಿ, ಏನು ಹೆಸರು ಅಂತ ಕೇಳ್ತ ಇದ್ರಿ. ಹಬ್ಬದ ದಿನ, ಇವತ್ತು ಪರಿಚಯಿಸುತ್ತ ಇದೀವಿ.
✨ ಎರೆಯ | EREYA ✨ 'ಎರೆಯ'- ಪುರಾತನ ಕನ್ನಡ ಪರಂಪರೆಯ ಗೌರವಪೂರ್ಣ ಪದ. ಇದರ ಅರ್ಥ "ಒಡೆಯ, ಸ್ವಾಮಿ, ಅಧಿಪತಿ" - ಒಂದು ಕಾಲದಲ್ಲಿ ರಾಜರು ಮತ್ತು ಅರಸರನ್ನು ಗೌರವದಿಂದ ಸಂಬೋಧಿಸಲು ಬಳಸುತ್ತಿದ್ದ ಹೆಸರು. ಇತಿಹಾಸದ ಪುಟಗಳಲ್ಲಿ, ಚಾಲುಕ್ಯರ ಮಹಾರಾಜ ಇಮ್ಮಡಿ ಪುಲಕೇಶಿ ಅವರ ಬಾಲ್ಯದ ಹೆಸರಾಗಿಯೂ Ereya ಎಂಬ ಹೆಸರು ಕಾಣಿಸುತ್ತದೆ. ಆ ರಾಜರ , ಪಾರಂಪರಿಕ ಮತ್ತು ಶಕ್ತಿಯುತ ಅರ್ಥವನ್ನು ಹೊತ್ತಿರುವ ನಮ್ಮ ಬದುಕಿನ ಪುಟ್ಟ ಅಧಿಪತಿ...
ನಮ್ಮ ಹೃದಯದ ರಾಜ... ನಮ್ಮ "ಎರೆಯ". ನಿಮ್ಮ ಪ್ರೀತಿ , ಆಶೀರ್ವಾದ ಸದಾ ಇರಲಿ ಅಂತ ಡಾಲಿ ಧನಂಜಯ್ ಅವರು ಹೇಳಿದ್ದಾರೆ. ಈ ಪೋಸ್ಟ್ ಕನ್ನಡಿಗರ ಮನಸ್ಸು ಗೆದ್ದಿದೆ.
Daali Dhananjaya: ನೆಟ್ಟಿಗರು ಹೇಳಿದ್ದೇನು
ಇನ್ನು ಡಾಲಿ ಧನಂಜಯ್ ಅವರು ತಮ್ಮ ಮಗುವಿಗೆ ಎರೆಯ ಎಂದು ಹೆಸರು ನಾಮಕರಣ ಮಾಡಿರುವುದಕ್ಕೆ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಜುನಾಥ್ ಎನ್ನುವವರು "ಎಲ್ಲಾ ಹೆಸರುಗಳಿಗೆ ಅರ್ಥ ಇರುತ್ತೆ ಈ ಹೆಸರಿಗೆ ಇತಿಹಾಸವೇ ಉಂಟು ಆ ಹೆಸರಿಗೂ ಈ ಪ್ರೀತಿಗೂ ಇರುವುದು ಒಂದೇ ನಂಟು "ಕನ್ನಡಿಗನೆಬ್ಬುವ ಹೆಮ್ಮೆ" ❤️ #DaaliDhananjaya #DhanuDhanyaEreya' ಅಂತ ಕಾಮೆಂಟ್ ಮಾಡಿದ್ದಾರೆ. ಧನಂಜಯ್ ಸರ್ ಅವರೇ ನೀವು ಕನ್ನಡದ ಅಸ್ಮಿತೆ ಕನ್ನಡದ ಮೂಲವನ್ನು ಉಳಿಸಿ ನಿಮ್ಮ ಮಗನಿಗೆ ಹೆಸರು ಇಟ್ಟಿದ್ದೀರಾ ಇದು ಕರ್ನಾಟಕದ ಜನತೆಗೆ ಗೊತ್ತಾಗಬೇಕು ಎಂದು ಜೈರಾಮ್ ಎನ್ನುವವರು ಹೇಳಿದ್ದಾರೆ.
ಗೌರಿ ಗಣೇಶ ಹಬ್ಬದ ಶುಭಾಶಯಗಳು ನಿಮಗೂ ನಿಮ್ಮ ಕುಟುಂಬಕ್ಕೂ ಧನಂಜಯ ಅವರೇ ಶುಭವಾಗಲಿ ನಿಮಗೆ ನಿಮ್ಮ ಮಗ ಮುದ್ದಾಗಿದ್ದಾನೆ ಕನ್ನಡದ ಕಂದನಿಗೆ ದೇವರು ಆಯಸ್ಸು ಆರೋಗ್ಯ ಯಶಸ್ಸು ಎಲ್ಲವನ್ನು ಕೊಡಲಿ ಎಂದು ನೆಟ್ಟಿಗರು ಶುಭಕೋರಿದ್ದಾರೆ. ಎರೆಯ' ಚಂದದ ಹೆಸರು. ನಾಡಿಗೇ ಎರೆಯನಾಗಲಿ ಸದಾ ಒಳಿತಾಗಲಿ ಎಂದು ಕನ್ನಡಿಗರು ಶುಭ ಹಾರೈಸಿದ್ದಾರೆ.