Unnamed Railway Station: ಹೆಸರೇ ಇರದ ಭಾರತದ ಏಕೈಕ ರೈಲು ನಿಲ್ದಾಣ ಇದು; ಕಾರಣ ತಿಳಿದರೆ ಆಶ್ಚರ್ಯವಾಗುವುದಂತೂ ಖಂಡಿತಾ

Unnamed Railway Station: ಹೆಸರೇ ಇರದ ಭಾರತದ ಏಕೈಕ ರೈಲು ನಿಲ್ದಾಣ ಇದು; ಕಾರಣ ತಿಳಿದರೆ ಆಶ್ಚರ್ಯವಾಗುವುದಂತೂ ಖಂಡಿತಾ

Unnamed Railway Station: ಹೆಸರೇ ಇರದ ಭಾರತದ ಏಕೈಕ ರೈಲು ನಿಲ್ದಾಣ ಇದು; ಕಾರಣ ತಿಳಿದರೆ ಆಶ್ಚರ್ಯವಾಗುವುದಂತೂ ಖಂಡಿತಾ

ಭಾರತೀಯ ರೈಲ್ವೆಯನ್ನು ದೇಶದ ಜೀವನಾಡಿ ಎಂದೂ ಕರೆಯುತ್ತಾರೆ. ಪ್ರತಿದಿನ ಸಾವಿರಾರು ಜನರು ರೈಲಿನ ಮೂಲಕ ಸಂಚಾರ ಮಾಡ್ತಾರೆ. ರೈಲು ಸಂಚಾರ ಆರಾಮದಾಯಕ ಮಾತ್ರವಲ್ಲ ಖರ್ಚೂ ಕಡಿಮೆ. ಮಕ್ಕಳು, ಹಿರಿಯರಿಗಂತೂ ರೈಲು ಪ್ರಯಾಣ ಬಹಳ ಆರಾಮ. ಇದೇ ಕಾರಣಕ್ಕೆ ಅನೇಕ ಮಂದಿ ರೈಲನ್ನೇ ಅವಲಂಬಿಸಿಕೊಂಡಿರುತ್ತಾರೆ. ಭಾರತವು ಸಾವಿರಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಹೊಂದಿರುವ ವಿಶಾಲವಾದ ರೈಲ್ವೆ ಜಾಲವನ್ನು ಹೊಂದಿದೆ.

ನಿಲ್ದಾಣ ಅಂದರೆ ಅದಕ್ಕೊಂದು ಹೆಸರಿರಬೇಕು ಎನ್ನುವುದು ಸರ್ವೇ ಸಾಮಾನ್ಯ ವಿಷಯ. ಆದರೆ ಭಾರತದಲ್ಲಿ ಹೆಸರಿಲ್ಲದ ಒಂದು ರೈಲು ನಿಲ್ದಾಣವಿದೆ. ಇದು ಆಶ್ಚರ್ಯವಾದರೂ ಸತ್ಯ. ಹೆಸರಿಲ್ಲದ ರೈಲು ನಿಲ್ದಾಣ ಅಂದ ಕೂಡಲೇ ಇಲ್ಲಿ ರೈಲು ನಿಲ್ಲುವುದಿಲ್ಲ, ಸಂಚಾರದದಟ್ಟಣೆ ಇಲ್ಲ ಎಂದಲ್ಲ. ದಿನಾ ನೂರಾರು ರೈಲು ಈ ಮಾರ್ಗವಾಗಿ ಹೋಗುತ್ತವೆ. ರೈಲು ನಿಲ್ಲುತ್ತವೆ ಕೂಡಾ. ಸಾವಿರಾರು ಯಾತ್ರಿಗಳು ರೈಲು ಹತ್ತುತ್ತಾರೆ.

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ನಿಲ್ದಾಣ

ಈ ರೈಲು ನಿಲ್ದಾಣವು ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿದೆ. ಇಲ್ಲಿನ ಸೈನ್‌ಬೋರ್ಡ್‌ಗಳಲ್ಲಿ ನಿಲ್ದಾಣದ ಹೆಸರಿಲ್ಲ. ಇದು ಪ್ರಯಾಣಿಕರಿಗೆ ನಿಲ್ದಾಣವನ್ನು ಗುರುತಿಸುವುದನ್ನು ಕಷ್ವಾಗಿಸುತ್ತದೆ. ಈ ನಿಲ್ದಾಣಕ್ಕೆ ಮೊದಲ ಬಾರಿಗೆ ಆಗಮಿಸುವ ಜನರು ಖಾಲಿ ಸೈನ್‌ಬೋರ್ಡ್ ನೋಡಿ ಆಶ್ಚರ್ಯಪಡುವುದಂತೂ ಸುಳ್ಳಲ್ಲ.

ನೇಮ್‌ ಬೋರ್ಡ್‌ನಲ್ಲಿ ಹೆಸರೇ ಇಲ್ಲ

ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯಲ್ಲಿರುವ ಈ ರೈಲು ನಿಲ್ದಾಣವು ಆಗ್ನೇಯ ರೈಲ್ವೆಯ ಬಂಕುರಾ-ಮಸಾಗ್ರಾಮ್ ಬ್ರಾಡ್-ಗೇಜ್ ಮಾರ್ಗದಲ್ಲಿ ಬರ್ಧಮಾನ್‌ನಿಂದ ಸುಮಾರು 35 ಕಿಲೋಮೀಟರ್ ದೂರದಲ್ಲಿದೆ. ನಿಲ್ದಾಣದ ಹೆಸರನ್ನು ಇಲ್ಲಿಯ ನೇಮ್‌ ಬೋರ್ಡ್‌ಗಳಲ್ಲಿ ಹಾಕುವುದೇ ಇಲ್ಲ. ಆದರೆ ಪ್ರತಿದಿನ ಸುಮಾರು ಆರು ರೈಲುಗಳು ಇಲ್ಲಿ ನಿಲ್ಲುತ್ತವೆ. ಈ ರೈಲುಗಳ ಮೂಲಕ ಇಲ್ಲಿನವರು ಹತ್ತಿರದ ಹಳ್ಳಿಗಳಿಗೆ ಇತರ ನಗರಗಳಿಗೆ ಸುಲಭವಾಗಿ ಪ್ರಯಾಣ ಮಾಡ್ತಾರೆ.

ವರದಿಯ ಪ್ರಕಾರ, ರೈನಾ ಮತ್ತು ರಾಯ್‌ನಗರ ಗ್ರಾಮಗಳ ನಡುವಿನ ಹಳೆಯ ವಿವಾದದಿಂದವೇ ಈ ನಿಲ್ದಾಣಕ್ಕೆ ಇನ್ನೂ ಹೆಸರಿಡದಿರಲು ಕಾರಣ. ಹಿಂದೆ, ಇಲ್ಲಿ ನ್ಯಾರೋ-ಗೇಜ್ ರೈಲ್ವೆ ಮಾರ್ಗವಿತ್ತು. ನಿಲ್ದಾಣಕ್ಕೆ ರಾಯ್‌ನಗರ ಎಂದು ಹೆಸರಿಸಲಾಯಿತು. 2008 ರಲ್ಲಿ ಹೊಸ ಬ್ರಾಡ್-ಗೇಜ್ ಮಾರ್ಗವನ್ನು ನಿರ್ಮಿಸಿದ ನಂತರ, ಹೊಸ ನಿಲ್ದಾಣದ ಕಟ್ಟಡವನ್ನು ರೈನಾ ಗ್ರಾಮದ ಭೂಮಿಯಲ್ಲಿ ನಿರ್ಮಿಸಲಾಯಿತು. ಇದರ ನಂತರ, ರೈನಾ ನಿವಾಸಿಗಳು ನಿಲ್ದಾಣಕ್ಕೆ ತಮ್ಮ ಗ್ರಾಮದ ಹೆಸರನ್ನು ಇಡಬೇಕೆಂದು ಒತ್ತಾಯಿಸಿದರು. ಆದರೆ ರಾಯ್‌ನಗರ ನಿವಾಸಿಗಳು ಹಳೆಯ ಹೆಸರೇ ಇರಬೇಕು ಎಂದು ಪಟ್ಟು ಹಿಡಿದರು. ಈ ವಿವಾದದಿಂದಾಗಿ, ಇಂದಿಗೂ ಈ ನಿಲ್ದಾಣ ಹೆಸರಿಲ್ಲದೆ ಉಳಿದಿದೆ.

ನ್ಯಾಯಾಲಯದ ಮೆಟ್ಟಿಲೇರಿದ್ದೂ ಆಯಿತು

ರೈನಾ ಮತ್ತು ರಾಯ್‌ನಗರ ಗ್ರಾಮಗಳ ನಡುವಿನ ನಿಲ್ದಾಣದ ಹೆಸರಿನ ವಿವಾದವು ರೈಲ್ವೆ ಮಂಡಳಿ ಮತ್ತು ನ್ಯಾಯಾಲಯದ ಬಾಗಿಲು ಕೂಡಾ ತಟ್ಟಿದೆ. ಎರಡೂ ಗ್ರಾಮಗಳ ನಿವಾಸಿಗಳು ತಮ್ಮ ಬೇಡಿಕೆಗಳಿಗೆ ಬದ್ಧರಾಗಿದ್ದರು. ಎರಡೂ ಕಡೆಯವರು ತಮ್ಮ ಬೇಡಿಕೆಯನ್ನು ಬಿಟ್ಟು ಕೊಡಲು ಸಿದ್ಧರಿರಲಿಲ್ಲ. ಇದರ ನಂತರ, ರೈಲ್ವೆ ಅಧಿಕಾರಿಗಳು ಮಧ್ಯಸ್ಥಿಕೆ ವಹಿಸಿಕೊಂಡರು. ನಿಲ್ದಾಣದಲ್ಲಿ ಹಳದಿ ಫಲಕಗಳನ್ನು ಸ್ಥಾಪಿಸಿದರು. ಆದರೆ ಅದರ ಮೇಲೆ ಯಾವ ಹಳ್ಳಿಯ ಹೆಸರೂ ಹಾಕಲಿಲ್ಲ. ಇಂದಿಗೂ ಈ ನಿಲ್ದಾಣದ ಸೈನ್‌ಬೋರ್ಡ್‌ಗಳು ಖಾಲಿಯೇ ಇದೆ. ನಿಲ್ದಾಣಕ್ಕೆ ಹೆಸರಿಲ್ಲದ ಕಾರಣ ಪ್ರಯಾಣಿಕರಿಗೆ ಅನಾನುಕೂಲತೆ ಉಂಟಾಗುವುದಂತೂ ಸುಳ್ಳಲ್ಲ. ಸರಿಯಾದ ನಿಲ್ದಾಣವನ್ನು ಗುರುತಿಸುವುದು ಸಾಧ್ಯವಾಗುವುದಿಲ್ಲ. ಖಾಲಿ ಹಳದಿ ನೇಮ್‌ ಬೋರ್ಡ್‌ ರೈನಾ ಮತ್ತು ರಾಯ್‌ನಗರ ಗ್ರಾಮಗಳ ನಡುವೆ ನಡೆಯುತ್ತಿರುವ ಹೆಸರಿನ ವಿವಾದವನ್ನು ನೆನಪಿಸುತ್ತವೆ.

ಈ ಹೆಸರನ್ನು ರೈಲ್ವೆಯಲ್ಲಿ ನೋಂದಾಯಿಸಲಾಗಿದೆ

ಈ ನಿಲ್ದಾಣದ ವೈಶಿಷ್ಟ್ಯವೆಂದರೆ ನಿಲ್ದಾಣದ ಫಲಕದಲ್ಲಿ ಯಾವ ಹೆಸರನ್ನು ಬರೆಯಲಿಲ್ಲ ನಿಜ. ಆದರೆ ರೈಲ್ವೆ ದಾಖಲೆಗಳಲ್ಲಿ ಇದನ್ನು ಇನ್ನೂ ರಾಯ್‌ನಗರ (RNGR) ಎಂದೇ ಗುರುತಿಸಲಾಗುತ್ತದೆ. ಪ್ರಯಾಣಿಕರ ಟಿಕೆಟ್‌ಗಳನ್ನು ಸಹ ಈ ಹೆಸರಿನಲ್ಲಿಯೇ ನೀಡಲಾಗುತ್ತದೆ. ಇದರರ್ಥ ನಿಲ್ದಾಣದ ಗುರುತು ಕಾಗದದ ಮೇಲೆ ಅಸ್ತಿತ್ವದಲ್ಲಿದೆ. ಆದರೆ ಅದರ ಹೆಸರು ಬೋರ್ಡ್‌ಗಳಲ್ಲಿ ಮಾತ್ರ ಕಾಣಿಸುವುದಿಲ್ಲ.ರೈನಾ ಮತ್ತು ರಾಯ್‌ನಗರ ಗ್ರಾಮಗಳ ನಡುವಿನ ಹೆಸರಿನ ಕುರಿತಾದ ವಿವಾದವು ಇಷ್ಟು ವರ್ಷವಾದರೂ ಬಗೆಹರಿಯದೆ ಉಳಿದಿದೆ. ಆದ್ದರಿಂದ ನಿಲ್ದಾಣವು ಹೆಸರಿಲ್ಲದೆ ಕಾರ್ಯನಿರ್ವಹಿಸುತ್ತಿದೆ.

west bengal indian railways

west bengal indian railways

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ