
Budhaditya Rajayoga: ಬುಧಾದಿತ್ಯ ರಾಜಯೋಗ: ಈ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ, ಲಕ್ಷ್ಮೀ ಕೃಪೆಯಿಂದ ಕನಸು ನನಸಾಗುವ ಕಾಲ!
Budhaditya Rajayoga: ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಸೂರ್ಯ ಇದೀಗ ತನ್ನ ಅಧಿಪತ್ಯದ ಸಿಂಹ ರಾಶಿಯಿಂದ ಹೊರ ಬಂದು ಕನ್ಯಾರಾಶಿಯನ್ನು ಪ್ರವೇಶಿಸಿದ್ದಾನೆ. ಶಿಸ್ತು ಮತ್ತು ಗೌರವವನ್ನು ಸೂಚಿಸುವ ಸೂರ್ಯ ಮುಂದಿನ ಮೂವತ್ತು ದಿನಗಳ ಕಾಲ ಇದೇ ರಾಶಿಯಲ್ಲಿ ಇರುತ್ತಾನೆ. ಈ ಮೂಲಕ ಈಗಾಗಲೇ ಕನ್ಯಾರಾಶಿಯಲ್ಲಿರುವ ಬುಧನೊಂದಿಗೆ ಸೂರ್ಯನ ಸಂಯೋಗವು ಬುಧಾದಿತ್ಯ ಯೋಗವನ್ನು ಸೃಷ್ಟಿಸಿದೆ.
Budhaditya Rajayoga: ಬುಧಾದಿತ್ಯ ಯೋಗ 2026
ಕನ್ಯಾರಾಶಿಯಲ್ಲಿ ಸೂರ್ಯ-ಬುಧ ಸಂಯೋಗವು ಈ 5 ರಾಶಿಯವರ ಮೇಲೆ ಪ್ರಮುಖ ಪರಿಣಾಮ ಬೀರುತ್ತದೆ.
ಸೂರ್ಯ ಬರುವ ಮೊದಲು ಬುಧ ಅಸ್ತಮಿಸಿದ ನಂತರ, ಕನ್ಯಾರಾಶಿಯಲ್ಲಿ ರೂಪುಗೊಂಡ ಬುಧಾದಿತ್ಯ ಯೋಗ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ನೋಡೋಣ.
Budhaditya Rajayoga: ಮೇಷ ರಾಶಿ (Aries)
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಮತ್ತು ವಿದೇಶದಲ್ಲಿ ಅಥವಾ ಮನೆಯಿಂದ ದೂರದಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಸಮಯ ಅನುಕೂಲಕರವಾಗಿದೆ. ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಸಿಗುವುದು. ವ್ಯವಹಾರದಲ್ಲಿ ಪ್ರಗತಿಯಾಗುವುದು. ಪ್ರೇಮ ಸಂಬಂಧಗಳಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ.
ವಿದ್ಯಾರ್ಥಿಗಳು ಬಯಸಿದ ಫಲಿತಾಂಶಗಳನ್ನು ಸಾಧಿಸಲು ತಮ್ಮ ಅಧ್ಯಯನದ ಮೇಲೆ ಸಂಪೂರ್ಣವಾಗಿ ಗಮನಹರಿಸಬೇಕಾಗುತ್ತದೆ. ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಬಿಡಿ. ಮಾತನಾಡುವಾಗ ಯೋಚಿಸಿ ಪದಗಳನ್ನು ಬಳಸಿ. ಇಲ್ಲವಾದರೆ ಮಾತೇ ನಿಮ್ಮ ಕೆಲಸ ಕೆಡಿಸಬಹುದು. ಸಣ್ಣ ಪುಟ್ಟ ವಿಚಾರಗಳಿಗೆ ಜಗಳಕ್ಕೆ ನಿಲ್ಲಬೇಡಿ.
ನಿಮ್ಮ ಸಹೋದರರಿಂದ ಬೆಂಬಲ ಸಿಗುವುದು. ನೆರೆಹೊರೆಯವರೊಂದಿಗಿನ ಜಗಳವನ್ನು ತಪ್ಪಿಸಿ. ತಾಯಿಯ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಮನೆಯ ವಿಷಯಗಳಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಿ. ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ.
ಕರ್ಕಾಟಕ ರಾಶಿ (Cancer)
ಈ ಸಂಚಾರವು ನಿಮಗೆ ಅತ್ಯಂತ ಶುಭಕರವಾಗಿರುವುದು. ಭೌತಿಕ ಸೌಕರ್ಯಗಳು ಹೆಚ್ಚಾಗುವುದು. ಬಾಕಿ ಇರುವ ಸರ್ಕಾರಿ ಕೆಲಸಗಳು ಪೂರ್ಣಗೊಳ್ಳುವುದು. ನಿಮ್ಮ ಕೆಲಸದ ಸ್ಥಳದಲ್ಲಿ ಬದಲಾವಣೆಗಳಾಗುವುದು. ಸಮಯ ನಿಮ್ಮ ಪರವಾಗಿ ಇರುವುದು.
ಸಾಮಾಜಿಕ ಮತ್ತು ಕೌಟುಂಬಿಕ ಕೆಲಸಗಳಿಗಾಗಿ ಆಗುವ ಖರ್ಚುಗಳನ್ನು ಮಿತಗೊಳಿಸಿ. ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ. ಆಹಾರಕ್ರಮದ ಬಗ್ಗೆ ಗಮನ ಕೊಡಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ.
ನಿಮ್ಮ ರಾಶಿಚಕ್ರದಲ್ಲಿ ಸೂರ್ಯನ ಆಗಮನ ಮತ್ತು ಶನಿ ಮತ್ತು ರಾಹುವಿನ ಪ್ರಭಾವವು ಮಾನಸಿಕ ಒತ್ತಡವನ್ನು ಹೆಚ್ಚಿಸಬಹುದು. ಸಣ್ಣ ವಿಷಯಗಳಿಗೂ ಕೋಪ ಮಾಡುವುದನ್ನು ಕಡಿಮೆ ಮಾಡಿ. ಆರೋಗ್ಯದ ಕಡೆ ಗಮನ ಅಗತ್ಯ.
ಈ ಅವಧಿಯು ಆನ್‌ಲೈನ್ ಮತ್ತು ಆಫ್‌ಲೈನ್ ವ್ಯವಹಾರಗಳಿಗೆ ತುಂಬಾ ಪ್ರಯೋಜನಕಾರಿ. ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು ನಿಮ್ಮದಾಗುವುದು. ಆರ್ಥಿಕ ಲಾಭ ಮತ್ತು ಮಕ್ಕಳ ಪ್ರಗತಿಯ ಸಾಧ್ಯತೆ ಇದೆ. ವಿದ್ಯಾರ್ಥಿಗಳು ತಮ್ಮ ಕಠಿಣ ಪರಿಶ್ರಮದ ಪ್ರತಿಫಲವನ್ನು ಪಡೆಯುವರು.
ವೃಶ್ಚಿಕ ರಾಶಿ (Scorpio)
ಲಾಭದ ಮನೆಯಲ್ಲಿ ಸೂರ್ಯನ ಆಗಮನವು ಅತ್ಯುತ್ತಮ ಫಲಿತಾಂಶಗಳನ್ನು ನೀಡುವುದು. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುವುದು. ವ್ಯವಹಾರವು ಬೆಳೆಯುತ್ತಾ ಹೋಗುವುದು. ಕೆಲಸದಲ್ಲಿ ಬಡ್ತಿ ಸಿಗುವ ಮೂಲಕ ಸಂಬಳ ಹೆಚ್ಚಾಗುವುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು.
ಧನು ರಾಶಿ (Sagittarius)
ಕೆಲಸದಲ್ಲಿ ಪ್ರಗತಿಗೆ ಹೊಸ ಮಾರ್ಗಗಳು ತೆರೆದುಕೊಳ್ಳುವುದು. ನೀವು ಮಾಡುವ ಕೆಲಸಕ್ಕೆ ತಂದೆಯ ಬೆಂಬಲ ಸಿಗುವುದು. ಕೌಟುಂಬಿಕ ವ್ಯವಹಾರ ಮತ್ತು ಕಾನೂನು ವಿಷಯಗಳಲ್ಲಿ ಯಶಸ್ಸು ಸಿಗುವುದು. ಕೌಟುಂಬಿಕ ವಿಷಯಗಳಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ.
ಆತುರದಿಂದ ಯಾವುದೇ ಕೆಲಸಕ್ಕೆ ಕೈ ಹಾಕಬೇಡಿ. ಅದೃಷ್ಟ ಕ್ರಮೇಣ ನಿಮ್ಮ ಕಡೆಗೆ ವಾಲುವುದು. ಮೇಲಧಿಕಾರಿಗಳ ಸಲಹೆಯನ್ನು ಪಾಲಿಸಿ. ತಂದೆಯ ಆರೋಗ್ಯದ ಬಗ್ಗೆ ಅಸಡ್ಡೆ ತೋರಬೇಡಿ.
ವ್ಯವಹಾರದಲ್ಲಿ ಹೊಸ ಹೂಡಿಕೆಗಳು ಬೇಡ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಆತುರಪಡಬೇಡಿ. ಆರೋಗ್ಯದ ಕಡೆ ಗಮನ ಇರಲಿ. ವಾಹನ ಚಲಾಯಿಸುವಾಗ ತುಂಬಾ ಎಚ್ಚರಿಕೆ ಅಗತ್ಯ.
ವೈವಾಹಿಕ ಜೀವನದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕೋಪವನ್ನು ನಿಯಂತ್ರಿಸಿ. ಕೋಪದ ಕೈಗೆ ಬುದ್ದಿ ಕೊಡಬೇಡಿ. ಹಳೆಯ ವಿವಾದಗಳನ್ನು ಪರಿಹರಿಸಲು ಪ್ರಯತ್ನಿಸಿ. ಸಣ್ಣ ವಿಚಾರವನ್ನು ಕೆದಕಿ ದೊಡ್ಡದು ಮಾಡಲು ಹೋಗಬೇಡಿ. ಗ್ರಾಹಕರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ.