ವೃದ್ಧಾಶ್ರಮಕ್ಕೆ ನೂಕುವ ಪ್ರವೃತ್ತಿ ದೂರವಾಗಲಿ: ಶಾಸಕ ಡಿ.ಜಿ.ಶಾಂತನಗೌಡ

ವೃದ್ಧಾಶ್ರಮಕ್ಕೆ ನೂಕುವ ಪ್ರವೃತ್ತಿ ದೂರವಾಗಲಿ: ಶಾಸಕ ಡಿ.ಜಿ.ಶಾಂತನಗೌಡ

ವೃದ್ಧಾಶ್ರಮಕ್ಕೆ ನೂಕುವ ಪ್ರವೃತ್ತಿ ದೂರವಾಗಲಿ: ಶಾಸಕ ಡಿ.ಜಿ.ಶಾಂತನಗೌಡ

ಬಸವಾಪಟ್ಟಣ: ‘ತಂದೆ– ತಾಯಿಯನ್ನು ವೃದ್ಧಾಶ್ರಮಕ್ಕೆ ನೂಕುವ ದುಷ್ಟ ಪ್ರವೃತ್ತಿ ದೂರವಾಗಬೇಕು’ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಇಲ್ಲಿನ ಸಿದ್ಧಾರೂಢ ವೃದ್ಧಾಶ್ರಮಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

‘ಮುಪ್ಪಿನಲ್ಲಿ ತಂದೆ– ತಾಯಿಯನ್ನು ನೋಡಿಕೊಳ್ಳುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ. ತಂದೆ– ತಾಯಿಯನ್ನು ಮನೆಯಿಂದ ಹೊರದೂಡುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ’ ಎಂದರು.

‘ಬಸವಾಪಟ್ಟಣದ ಶಿಕ್ಷಕ ಎಚ್‌.ಟಿ.ಗುರುಮೂರ್ತಿ ಮತ್ತು ಅವರ ಪತ್ನಿ ಉಮಾದೇವಿ ಅವರು ಈ ವೃದ್ಧಾಶ್ರಮವನ್ನು ಆರಂಭಿಸಿ, ವೃದ್ಧರಿಗೆ ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತಿರುವುದು ಪ್ರಶಂಸನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವೃದ್ಧಾಶ್ರಮದ ಕಾರ್ಯದರ್ಶಿ ಉಮಾದೇವಿ ‘ಆಶ್ರಮದಲ್ಲಿ 43 ಜನ ವೃದ್ಧರಿದ್ದಾರೆ. ಇವರಲ್ಲಿ ಬಹುತೇಕರು ಮಕ್ಕಳಿಂದ ತಿರಸ್ಕರಿಸಲ್ಪಟ್ಟವರಾಗಿದ್ದಾರೆ. ಇಂತಹ ನಿರ್ಗತಿಕರಿಗೆ ಆಶ್ರಯ ನೀಡುವುದು ಪುಣ್ಯದ ಕಾರ್ಯ ಎಂದು ಭಾವಿಸಿ ಸೇವೆ ಸಲ್ಲಿಸುತ್ತಿದ್ದೇವೆ’ ಎಂದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ