ಯಾದಗಿರಿ: 10 ವರ್ಷಗಳಿಂದ ಬಿದ್ದಿದ್ದ ಕಸದ ರಾಶಿ ವಿಲೇವಾರಿ

ಯಾದಗಿರಿ: 10 ವರ್ಷಗಳಿಂದ ಬಿದ್ದಿದ್ದ ಕಸದ ರಾಶಿ ವಿಲೇವಾರಿ

ಯಾದಗಿರಿ: 10 ವರ್ಷಗಳಿಂದ ಬಿದ್ದಿದ್ದ ಕಸದ ರಾಶಿ ವಿಲೇವಾರಿ

ಯಾದಗಿರಿ: ವಡಗೇರಾ ತಾಲ್ಲೂಕಿನ ಬಬಲಾದ ಸಮೀಪದ ಘನ ತ್ಯಾಜ್ಯ ಘಟಕದಲ್ಲಿ 10 ವರ್ಷಗಳಿಂದ ವಿಲೇವಾರಿಯಾಗದೆ ಬಿದ್ದಿದ್ದ, ಮರುಬಳಕೆಯಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಅಂತೂ ವಿಲೇವಾರಿ ಮಾಡಲಾಯಿತು.

ನಗರಸಭೆ ವ್ಯಾಪ್ತಿಯ ಮನೆ, ವಾಣಿಜ್ಯ ಮಳಿಗೆ ಸೇರಿದಂತೆ ಇತರೆ ಕಡೆಯಿಂದ ಸಂಗ್ರಹಿಸಿದ್ದ ಮರುಬಳಕೆಯಾಗದ 800 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು 8 ದಿನಗಳು ತೆರವು ಮಾಡಲಾಯಿತು. ಜಿಲ್ಲಾಧಿಕಾರಿ ಆದೇಶದಂತೆ ಸಿಮೆಂಟ್ ಫ್ಯಾಕ್ಟರಿಗೆ ಟೆಂಡರ್ ಮೂಲಕ ವಿಲೇವಾರಿ ಮಾಡಲಾಗಿದೆ ಎಂದು ನಗರಸಭೆ ಪೌರಾಯುಕ್ತ ಉಮೇಶ್ ಚವ್ಹಾಣ್ ತಿಳಿಸಿದ್ದಾರೆ.

ನಗರದಿಂದ ಸಂಗ್ರಹವಾದ ಹಸಿ ಹಾಗೂ ಒಣಕಸವನ್ನು ವಿಂಗಡಿಸಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸಲಾಗಿತ್ತು. ಪ್ಲಾಸ್ಟಿಕ್ ತ್ಯಾಜ್ಯ ತೆರವಿಗೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಅವರ ಆದೇಶದಂತೆ ಟೆಂಡರ್ ಮೂಲಕ ನಿಯಮಾನುಸಾರವಾಗಿ ಉಚಿತವಾಗಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮರು ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ಹಾಗೂ ಕಡಿಮೆ ಮೌಲ್ಯದ ಪ್ಲಾಸ್ಟಿಕ್ ತ್ಯಾಜ್ಯವು ಸಿಮೆಂಟ್ ಕಾರ್ಖಾನೆಯಲ್ಲಿ ಕಲ್ಲಿದ್ದಲಿಗೆ ಪರ್ಯಾಯ ಇಂಧನವಾಗಿ ಬಳಸಲಾಗುತ್ತದೆ ಎಂದಿದ್ದಾರೆ. ಮರು ಬಳಕೆಗೆ ಯೋಗ್ಯವಲ್ಲದ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಲು ನಿರ್ಬಂಧ ವಿಧಿಸಲಾಗಿದೆ. ಈಗಾಗಲೇ ದಾಳಿ ಮಾಡಿ ಪ್ಲಾಸ್ಟಿಕ್ ಜಪ್ತಿ ಮಾಡಿ ದಂಡ ಹಾಕಲಾಗುತ್ತಿದೆ. ಪ್ಲಾಸ್ಟಿಕ್ ಬಳಕೆ ದುಷ್ಪರಿಣಾಮದ ಬಗ್ಗೆ ನಿರಂತರ ಜಾಗೃತಿ ಮೂಡಿಸಿಲಾಗುತ್ತಿದೆ ಎಂದು ಹೇಳಿದ್ದಾರೆ. ಜನರು ಹಾಗೂ ವ್ಯಾಪಾರಸ್ಥರು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು. ಪ್ಲಾಸ್ಟಿಕ್ ಬದಲು ಪರ್ಯಾಯವಾಗಿ ಪರಿಸರಕ್ಕೆ ಪೂರಕವಾಗುವ ಬಟ್ಟೆ ಬ್ಯಾಗ್‌ನಂತಹ ವಸ್ತುಗಳ ಬಳಕೆ ಮಾಡಬೇಕು. ಪ್ಲಾಸ್ಟಿಕ್ ಬಳಕೆಯಿಂದ ಜನ ಹಾಗೂ ಜಾನುವಾರು, ಜಲಚರ ಹಾಗೂ ಪರಿಸರದ ಮೇಲೆ ದುಷ್ಪರಿಣಾಮ ಬಿರಲಿದೆ’ ಎಂದಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ