ಪತ್ನಿಯೇ ಮನೆಗೆ ‘ಸಿಇಒ’! ಗೃಹಿಣಿಗೆ ಪ್ರತಿ ತಿಂಗಳು ಸಂಬಳ ಕೊಡುತ್ತಿರುವ ಸರ್ಕಾರಿ ಅಧಿಕಾರಿಯ ನಿರ್ಧಾರಕ್ಕೆ ಮೆಚ್ಚುಗೆ

ಪತ್ನಿಯೇ ಮನೆಗೆ ‘ಸಿಇಒ’! ಗೃಹಿಣಿಗೆ ಪ್ರತಿ ತಿಂಗಳು ಸಂಬಳ ಕೊಡುತ್ತಿರುವ ಸರ್ಕಾರಿ ಅಧಿಕಾರಿಯ ನಿರ್ಧಾರಕ್ಕೆ ಮೆಚ್ಚುಗೆ

ಪತ್ನಿಯೇ ಮನೆಗೆ ‘ಸಿಇಒ’! ಗೃಹಿಣಿಗೆ ಪ್ರತಿ ತಿಂಗಳು ಸಂಬಳ ಕೊಡುತ್ತಿರುವ ಸರ್ಕಾರಿ ಅಧಿಕಾರಿಯ ನಿರ್ಧಾರಕ್ಕೆ ಮೆಚ್ಚುಗೆ

ಗೃಹಿಣಿ ಎಂದರೆ ಇವತ್ತಿಗೂ ನಮ್ಮಲ್ಲಿ ಅನೇಕರಿಗೆ ತಾತ್ಸಾರ ಇದೆ. ಮನೆಯಲ್ಲಿಯೇ ಇರುತ್ತೀರಿ ಏನು ಕೆಲಸ ಇದೆ ಅನ್ನೋ ಮಾತು ಪ್ರತಿಯೊಬ್ಬ ಗೃಹಿಣಿ ಕೂಡಾ ಒಮ್ಮೆಯಾದರೂ ಕೇಳಿಸಿ ಕೊಂಡಿರುತ್ತಾಳೆ. ಮನೆಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿ, ಮನೆ ಮಂದಿಗೆ ಇಷ್ಟವಾಗುವ ಹಾಗೆ ಅಡುಗೆ ಮಾಡಿ, ಮಕ್ಕಳ ಆಟ ಪಾಠ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ.

ಇಡೀ ಮನೆಯಲ್ಲಿ ಯಾರಿಗೆ ಯಾವಾಗ ಏನು ಬೇಕು? ಯಾವ ಕೆಲಸ ಬಾಕಿ ಇದೆ? ಯಾವ ಕೆಲಸದ ಡ್ಯೂ ಡೇಟ್‌ ಯಾವಾಗ ಮುಗಿಯುತ್ತದೆ ಎಲ್ಲವೂ ಆಕೆಗೆ ಗೊತ್ತು. ಒಂದು ರೀತಿ ಆಕೆಯನ್ನು ಇಡೀ ಕುಟುಂಬದ ಮ್ಯಾನೇಜರ್‌ ಅಂದರೂ ತಪ್ಪಲ್ಲ. ಬೆಳಗ್ಗೆಯಿಂದ ರಾತ್ರಿವರೆಗೆ ವಾರದ ಏಳೂ ದಿನ ಕೆಲಸ ಮಾಡುತ್ತಲೇ ಇರುವ ಗೃಹಿಣಿಗೆ ಪ್ರತೀ ಮನೆಯಲ್ಲಿ ಸಿಗಬೇಕಾದ ಗೌರವ ಸಿಗುತ್ತಿದೆಯಾ? ಇಂಥದ್ದೊಂದು ವಿಷಯದ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೀತಾ ಇದೆ.

House Wife Salary: ಪತ್ನಿಗೆ ಸಂಬಳ

ಈ ಚರ್ಚೆ ಆರಂಭವಾಗುವುದಕ್ಕೆ ಕಾರಣ ಇದೆ. ರೆಡ್ಡಿಟ್‌ನಲ್ಲಿ ವ್ಯಕ್ತಿಯೊಬ್ಬರು ನಿಜ ಘಟನೆಯನ್ನು ಆಧರಿಸಿದ ಕತೆಯನ್ನು ಪೋಸ್ಟ್‌ ಮಾಡಿದ್ದಾರೆ. ಹೌದು, ಮಹಿಳೆಯೊಬ್ಬರಿಗೆ ಮನೆಯ ಎಲ್ಲಾ ಕೆಲಸಗಳನ್ನು ಮಾಡುವುದಕ್ಕಾಗಿ ತನ್ನ ಕುಟುಂಬದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸ್ತಾ ಇರೋದಕ್ಕಾಗಿ ವ್ಯಕ್ತಿಯೊಬ್ಬರು ಪ್ರತೀ ತಿಂಗಳು ನಿರ್ದಿಷ್ಟ ಮೊತ್ತವನ್ನು ವೇತನ ರೂಪದಲ್ಲಿ ನೀಡುತ್ತಾ ಬರುತ್ತಿದ್ದಾನೆ. ಪತಿಯ ಈ ನಿರ್ಧಾರ ಇದೀಗ ಚರ್ಚೆಗೆ ದಾರಿ ಮಾಡಿಕೊಟ್ಟಿರುವುದು.

ಈ ಪೋಸ್ಟ್‌ ಪ್ರಕಾರ ವ್ಯಕ್ತಿಯ ಅಣ್ಣ ಸರ್ಕಾರಿ ಅಧಿಕಾರಿಯಾಗಿದ್ದು, ತನ್ನ ಪತ್ನಿಗೆ ತಿಂಗಳಿಗೆ ಇಷ್ಟು ಎನ್ನುವ ಹಾಗೆ ಸಂಬಳ ನೀಡುತ್ತಿದ್ದಾರೆ. ಇಲ್ಲಿ ಪತ್ನಿ ಅಡುಗೆ, ಮನೆ ಕ್ಲೀನ್‌ ಮಾಡುವುದು ಸೇರಿದಂತೆ ದೈನಂದಿನ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ. ಅವರ ಪತಿ ಮನೆಯ ವೆಚ್ಚಗಳು, ದಿನಸಿ ಮತ್ತು ಬಿಲ್‌ಗಳನ್ನು ಪ್ರತ್ಯೇಕವಾಗಿ ಭರಿಸುತ್ತಾರೆ.

ಪತ್ನಿ ಉಳಿಸುವ ಹಣದ ಮೇಲೆ ಆಕೆಯದ್ದೇ ಹಕ್ಕು

ಹೆಂಡತಿ ತಾನು ಮಾಡುವ ಯಾವ ಕೆಲಸಕ್ಕೂ ಹಣವನ್ನು ಕೇಳುವುದಿಲ್ಲ. ಇದು ತನ್ನ ಕತ್ಯವ್ಯ ಎಂದೇ ಮಾಡುತ್ತಾಳೆ. ಆದರೆ ಒಂದೊಮ್ಮೆ ಹೆಂಡತಿ ಈ ಎಲ್ಲಾ ಕೆಲಸಗಳಿಗೆ ಜನ ಬೇಕು ಎಂದು ಕೇಳಿದರೆ ಅವರಿಗೆ ಮಾರ್ಕೆಟ್‌ ರೇಟ್‌ ಪ್ರಕಾರವೇ ಸಂಬಳ ಕೊಡಬೇಕಾಗುತ್ತದೆ. ಆದರೆ ಇಲ್ಲಿ ಪತ್ನಿ ಆ ಹಣವನ್ನು ಉಳಿಸುತ್ತಿದ್ದಾಳೆ.

ಹೆಂಡತಿ ಇಷ್ಟಪಟ್ಟೋ ಕಷ್ಟಪಟ್ಟೋ ತನ್ನ ಮನೆಗಾಗಿ, ಕುಟುಂಬಕ್ಕಾಗಿ ಎಲ್ಲಾ ಕೆಲಸವನ್ನು ತಾನೇ ಮಾಡುತ್ತಿದ್ದಾಳೆ ಎಂದರೆ ಉಳಿಸಿದ ಹಣ ಆಕೆಯ ಹಕ್ಕು. ಅವಳು ಅದನ್ನು ಸೇವಿಂಗ್ಸ್‌ನಲ್ಲಿ ಹಾಕಬಹುದು, ತನಗಾಗಿ ಖರ್ಚು ಮಾಡಬಹುದು, ಅಥವಾ ತನ್ನ ಪೋಷಕರಿಗೆ ಕೊಡಬಹುದು, ಏನು ಬೇಕಾದರೂ ಮಾಡಬಹುದು. ಅದನ್ನು ಕೇಳುವ ಹಕ್ಕು ಯಾರಿಗೂ ಇಲ್ಲ. ಈ ರೀತಿ ನಡೆದುಕೊಂಡರೆ ಪತ್ನಿಯ ಶ್ರಮಕ್ಕೂ ಬೆಲೆ ಇರುತ್ತದೆ, ದಂಪತಿಗಳು ಪರಸ್ಪರ ಸಮಾನರು ಎನ್ನುವ ಮಾತಿಗೂ ತೂಕ ಬರುತ್ತದೆ.

ಈ ವಿಚಾರವನ್ನು ಪೋಸ್ಟ್‌ ಮಾಡಿರುವ ವ್ಯಕ್ತಿ ತನ್ನ ಸಹೋದರನ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಭಾರತೀಯ ದಂಪತಿಗಳು ಈ ರೀತಿ ಹಣಕಾಸನ್ನು ನಿರ್ವಹಿಸುವುದನ್ನು ನಾನು ಹಿಂದೆಂದೂ ನೋಡಿಲ್ಲ ಎಂದಿದ್ದಾರೆ. ಸಾಮಾನ್ಯವಾಗಿ, ಅವರದ್ದು ಜಂಟಿ ಖಾತೆಯಾಗಿರುತ್ತದೆ ಅಥವಾ ಪತ್ನಿ ಕೇಳಿದಾಗ ಮಾತ್ರ ಪತಿ ಹಣವನ್ನು ಕೊಡ್ತಾನೆ ಎಂದು ಬರೆದಿದ್ದಾರೆ.

ಆದರೆ ಈ ರೀತಿ ನಡೆದುಕೊಳ್ಳುವುದರಿಂದ ಗೃಹಿಣಿಯೊಬ್ಬರಿಗೆ ಹೆಚ್ಚಿನ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿದ ಹಾಗೆ ಆಗುತ್ತದೆಯೇ? ಅವರ ಶ್ರಮವನ್ನು ಮೌಲ್ಯೀಕರಿಸಿದ ಹಾಗೆಯೇ ಅಥವಾ ಮದುವೆಯನ್ನು ವಹಿವಾಟಿನಂತೆ ನೋಡುವ ಹಾಗೆ ಆಗುತ್ತದೆಯೇ ಎಂದು ಕೂಡಾ ಪ್ರಶ್ನಿಸಿದ್ದಾರೆ.

ಹರಿದು ಬರುತ್ತಿದೆ ಕಾಮೆಂಟ್‌ಗಳು

ಈ ಪೋಸ್ಟ್‌ಗೆ ರೆಡ್ಡಿಟ್ ಬಳಕೆದಾರರಿಂದ ಮಿಶ್ರ ಪ್ರತಿಕ್ರಿಯೆಗಳು ಬಂದಿದೆ. ಮನೆ ಕೆಲಸಗಳನ್ನೆಲ್ಲಾ ಹೆಂಡತಿ ಮಾಡುತ್ತಿದ್ದರೂ, ಅದಕ್ಕಾಗಿ ಒಂದೇ ಒಂದು ಒಳ್ಳೆಯ ಮಾತು ಕೇಳದೆ ಇರುವುದಕ್ಕಿಂದತ ಇದು ಉತ್ತಮವಾಗಿದೆ ಎಂದು ಒಬ್ಬರು ಹೇಳಿದ್ದಾರೆ. ಗಂಡ ಮತ್ತು ಹೆಂಡತಿ ತಮ್ಮ ಮನೆಯ ಕೆಲಸವನ್ನು ಸಮಾನವಾಗಿ ವಿಭಜಿಸಿಕೊಂಡು ಸಮಾನವಾಗಿ ಕೊಡುಗೆ ನೀಡುವುದರಲ್ಲಿ ನಗೆ ನಂಬಿಕೆಯಿದೆ ಎಂದು ಹೇಳಿದ್ಧಾರೆ.

ಈ ಐಡಿಯಾ ನನಗೆ ಇಷ್ಟವಾಯಿತು. ಗೃಹಿಣಿಯೊಬ್ಬಳು ಎಷ್ಟೇ ಕೆಲಸ ಮಾಡಿದರೂ ಅದನ್ನು ಕೆಲಸ ಎಂದು ಪರಿಗಣಿಸುವುದೇ ಇಲ್ಲ. ಅಲ್ಲದೆ, ಹೆಂಡತಿ ಗಂಡನಿಂದ ಹಣ ಕೇಳಿದಾಗಲೆಲ್ಲಾ ಅದು ಪುರುಷನಿಗೆ ಅಧಿಕಾರವನ್ನು ನೀಡಿದಂತೆ ಅನ್ನಿಸುತ್ತದೆ. ಇದರ ಬದಲು ಪತ್ನಿಗೆ ಪ್ರತೀ ತಿಂಗಳು ಹಣ ಕೊಟ್ಟರೆ ಆಕೆಗೂ ಹೌದು, ಇದು ನನ್ನ ಹಣ, ನಾನು ಸಂಪಾದಿಸಿರುವ ಹಣ ಎನ್ನುವ ಆತ್ಮವಿಶ್ವಾಸ ಬೆಳೆಯುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ