
ಕೂಡ್ಲಿಗಿ : ಮುಖ್ಯಮಂತ್ರಿ ಶಿವಕುಮಾರ್ ಅವರಿಂದ ಕೌಂಟರ್‌ಗಳ ವೀಕ್ಷಣೆ
ಕೂಡ್ಲಿಗಿ (ವಿಜಯನಗರ): ಪ್ರಜಾಸೇವೆ ಅಭಿಯಾನ ಉದ್ಘಾಟನಾ ಸಮಾರಂಭಕ್ಕೆ ಶನಿವಾರ ಬೆಳಿಗ್ಗೆ 11.45ರ ಸುಮಾರಿಗೆ ಬಂದಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮೊದಲಿಗೆ ಕೌಂಟರ್ ಗಳಿಗೆ ತೆರಳಿ ಸಲ್ಲಿಕೆಯಾದ ಅಹವಾಲುಗಳ ಮಾಹಿತಿ ಪಡೆದರು.
ಕೂಡ್ಲಿಗಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ಕೌಂಟರ್ ಗಳಿಗೆ ತೆರಳಿದ ಅವರು ಕೆಲವರೊಂದಿಗೆ ಮಾತನಾಡಿ ಖುದ್ದಾಗಿ ಅವರ ದೂರು ಆಲಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಪ್ರಜಾಸೇವೆ ಅಭಿಯಾನ ಆರಂಭವಾಗಿದ್ದು, ರಾಜ್ಯ ಮಟ್ಟದ ಕಾರ್ಯಕ್ರಮ ಆಯೋಜನೆ ಕೂಡ್ಲಿಗಿಯಲ್ಲಿ ಆಗಿದೆ.
ರಾಜ್ಯದ ಅತ್ಯಂತ ಹಿಂದುಳಿದ ತಾಲ್ಲೂಕು ಮತ್ತು ಹಿಂದುಳಿದ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎಂಬ ನೆಲೆಯಲ್ಲಿ ಕೂಡ್ಲಿಗಿ ಯನ್ನು ಕಾರ್ಯಕ್ರಮ ನಡೆಸಲು ಆಯ್ಕೆ ಮಾಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಸಂಸದರು, ಜಿಲ್ಲೆಯ ಶಾಸಕರು ಜತೆಗೆ ಇದ್ದಾರೆ.