ಅಲೂರು ಕಸಬಾ ಮರಸು ಗ್ರಾಮದಲ್ಲಿ ಕ್ಷೀಣಿಸುತ್ತಿರುವ ಗೋಕುಲಾಷ್ಟಮಿ ಸಂಭ್ರಮ

ಅಲೂರು ಕಸಬಾ ಮರಸು ಗ್ರಾಮದಲ್ಲಿ ಕ್ಷೀಣಿಸುತ್ತಿರುವ ಗೋಕುಲಾಷ್ಟಮಿ ಸಂಭ್ರಮ

ಅಲೂರು ಕಸಬಾ ಮರಸು ಗ್ರಾಮದಲ್ಲಿ ಕ್ಷೀಣಿಸುತ್ತಿರುವ ಗೋಕುಲಾಷ್ಟಮಿ ಸಂಭ್ರಮ

ಅಲೂರು: ಕಸಬಾ ಮರಸು ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿರುವ ರಂಗನಾಥಸ್ವಾಮಿ (ತಿರುಮಲದೇವರು) ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿದ್ದ ಗೋಕುಲಾಷ್ಟಮಿ ವೈಭವ ಮೂರು ದಶಕಗಳಿಂದ ನಶಿಸುತ್ತಿದೆ.

ಗೋಕುಲಾಷ್ಟಮಿಯಂದು ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗುತ್ತಿತ್ತು. ಸಂಜೆ ಗ್ರಾಮದಲ್ಲಿರುವ ರಂಗನಾಥಸ್ವಾಮಿ ಮೆರೆ ದೇವರನ್ನು ಹೊತ್ತು ಗ್ರಾಮದ ಹೊರ ಅಂಚಿನಲ್ಲಿರುವ ದೇವಾಲಯದ ಬಳಿ ತರಲಾಗುತ್ತಿತ್ತು. ದೇವಸ್ಥಾನದ ಎದುರಿನಲ್ಲಿ ಶೃಂಗರಿಸಿದ ಕುರ್ಜು ಮಂಟಪದಲ್ಲಿ ತೆಂಗಿನಕಾಯಿ ಒಡೆಯುವ ನೋಟ ಮನಸೂರೆಗೊಳ್ಳುತ್ತಿತ್ತು. ಬೆತ್ತದಲ್ಲಿ ಹೆಣೆದ ಬುಟ್ಟಿಯೊಳಗೆ ಒಂದು ತೆಂಗಿನಕಾಯಿಯನ್ನು ಇಟ್ಟು ಜುಟ್ಟಿಗೆ ಹಗ್ಗ ಕಟ್ಟುತ್ತಿದ್ದರು. ಕುರ್ಜು ಮಂಟಪದ ಮೇಲೊಬ್ಬರು ಹಗ್ಗದಲ್ಲಿ ಹಿಡಿದ ತೆಂಗಿನಕಾಯಿಯನ್ನು ಮೇಲೆ ಕೆಳಗೆ ಆಡಿಸುತ್ತಿರುವಾಗ, ಅರಸ ವಂಶಸ್ಥರು ತೆಂಗಿನಕಾಯಿ ಒಡೆಯುವ ಪ್ರತೀತಿ ಪೂರ್ವದಿಂದ ನಡೆದು ಬಂದಿತ್ತು.

ಬಿಳಿಬಟ್ಟೆ ಧರಿಸಿದ ಅರಸ ವಂಶಸ್ಥ ಅರೆಬೆತ್ತಲೆಯಾಗಿ ಬೆತ್ತದಿಂದ ತೆಂಗಿನಕಾಯಿ ಒಡೆಯಲು ಪ್ರಾರಂಭಿಸುತ್ತಾರೆ. ಆ ಸಂದರ್ಭದಲ್ಲಿ ಮಂಟಪದ ಮೇಲೆ ನಿಂತಿದ್ದ ಇಬ್ಬರಲ್ಲೊಬ್ಬರು ಕಾಯಿಯನ್ನು ಬೆತ್ತದ ಏಟಿಗೆ ಸಿಗದಂತೆ ಮೇಲೆ ಕೆಳಗೆ ಆಡಿಸುತ್ತಿರುತ್ತಾರೆ. ಮತ್ತೊಬ್ಬರು ತೆಂಗಿನಕಾಯಿ ಒಡೆಯುವವರ ಮೈ ಮೇಲೆ ನಿರಂತರವಾಗಿ ಸುರಿಯುತ್ತಿರುತ್ತಾರೆ. ಕಾಯಿ ಒಡೆದು ನೀರು ಹೊರಬರುವವರೆಗೆ ಒಡೆಯುತ್ತಾರೆ. ಅಲ್ಲಿಯವರೆಗೆ ನೀರು ಹಾಕುತ್ತಿರುತ್ತಾರೆ. ಈ ದೃಶ್ಯ ನೋಡಲು ನೂರಾರು ಭಕ್ತರು ಜಮಾಯಿಸಿ ಹರ್ಷ ವ್ಯಕ್ತಪಡಿಸುತ್ತಿದ್ದರು. ಆದರೆ ಇತ್ತೀಚೆಗೆ ಈ ಕಾರ್ಯಕ್ರಮ ನಿಂತಿರುವುದರಿಂದ, ಮುಂದಿನ ಪೀಳಿಗೆಗೆ ಇಂತಹ ದೃಶ್ಯ ನೋಡುವುದು ಕನಸಾಗಿದೆ.

ತಿರುಮಲದೇವರ ಸಮ್ಮುಖದಲ್ಲಿ ವಿಶೇಷ ದಿನದಂದು ವಿಶೇಷಪೂಜೆ, ಹೋಮ ನಡೆಯುತ್ತಿವೆ. ಭಕ್ತರ ಸಹಕಾರವಿದ್ದರೆ ಎಲ್ಲ ಕಾರ್ಯಕ್ರಮ ಮಾಡಬಹುದು

ರವಿಕುಮಾರ್, ಮರಸು ದೇಗುಲದ ಅರ್ಚಕ

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260905-36-71088570

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ