ಚಿಂಚೋಳಿ: ಹೆದ್ದಾರಿಯಲ್ಲಿ ಗುಂಡಿಗಳ ಕಾರುಬಾರು

ಚಿಂಚೋಳಿ: ಹೆದ್ದಾರಿಯಲ್ಲಿ ಗುಂಡಿಗಳ ಕಾರುಬಾರು

ಚಿಂಚೋಳಿ: ಹೆದ್ದಾರಿಯಲ್ಲಿ ಗುಂಡಿಗಳ ಕಾರುಬಾರು

ಚಿಂಚೋಳಿ: ಜಿಲ್ಲೆಯ ಕಲಬುರಗಿ ಮತ್ತು ಸೇಡಂ ಕಡೆಯಿಂದ ಯಾರಾದರೂ ಹೊಸಬರು ಚಿಂಚೋಳಿಗೆ ಬಂದವರು ಮೊದಲು ಹೇಳುವ ಮಾತು ಎಂದರೆ ‘ಏನ್ರಿ ನಿಮ್ಮ ಊರಿನ ರಸ್ತೆ ಹಾಳಾಗಿ ಹೋಗ್ಯಾದ್ ಇಲ್ಲಿಗೆ ಬರೋದೇ ಕಷ್ಟ ನೋಡ್ರಿ’ ಎಂಬುದು ಸರ್ವೆ ಸಾಮಾನ್ಯ.

ಕಲಬುರಗಿ ಮತ್ತು ಸೇಡಂನಿಂದ ತಾಲ್ಲೂಕು ಕೇಂದ್ರ ಚಿಂಚೋಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಹಾಳಾಗಿದ್ದು ಗುಂಡಿಗಳಲ್ಲಿಯೇ ವಾಹನಗಳು ಸಂಚರಿಸುತ್ತಿದ್ದು ಜನ ಹೈರಾಣಾಗುವಂತಾಗಿದೆ.

ರಾಯಚೂರು ವನ್ಮಾರಪಳ್ಳಿ ರಾಜ್ಯ ಹೆದ್ದಾರಿ–15ರಲ್ಲಿ ಬರುವ ಚಿಂಚೋಳಿ ವಿಧಾನ ಸಭಾ ಮತಕ್ಷೇತ್ರದ ಚಿಂಚೋಳಿ ತಾಲ್ಲೂಕಿನ ದಸ್ತಾಪುರ ಗ್ರಾಮದಿಂದ ಸುಲೇಪೇಟ ಗಡಿಯವರೆಗೆ ಹಾಗೂ ಸೇಡಂ ವಿಧಾನ ಸಭಾ ಮತಕ್ಷೇತ್ರದಲ್ಲಿ ಬರುವ ಪೆಂಚನಪಳ್ಳಿ ಗ್ರಾಮದಿಂದ ಸುಲೇಪೇಟ ಗಡಿವರೆಗೆ ಹಾಗೂ ಸುಲೇಪೇಟ ಉಮ್ಮರ್ಗಾ ರಾಜ್ಯ ಹೆದ್ದಾರಿ 32ರಲ್ಲಿ ಬರುವ ಸುಲೇಪೇಟ ಬಸವೇಶ್ವರ ವೃತ್ತದಿಂದ ಹೊಡೇಬೀರನಹಳ್ಳಿವರೆಗೆ ರಸ್ತೆ ಹಾಳಾಗಿದ್ದು ವಾಹನ ಸವಾರರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

ಹೆದ್ದಾರಿಯಲ್ಲಿ ಗುಂಡಿಗಳು ಮತ್ತು ಹೊಂಡಗಳ ಕಾರುಬಾರು ಗೋಚರಿಸುತ್ತಿದ್ದು, ವಾಹನ ಸವಾರರು ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ಇದನ್ನು ನೋಡಿದ ಜನರೇ ಚಿಂಚೋಳಿಯ ಜನರ ದೌರ್ಭಾಗ್ಯವೋ ಏನೋ ಎಂದು ಗೊಣಗುತ್ತಿದ್ದಾರೆ. ಈ ಹೆದ್ದಾರಿಗಳಲ್ಲಿ ವಾಹನಗಳ ಸಂಚಾರ ಹೆಚ್ಚಾಗಿದೆ. ಹೀಗಾಗಿ ಗುಂಡಿಗಳು ಮುಚ್ಚಿ ಡಾಂಬರೀಕರಣ ನಡೆಸಿದರೆ ಜನತೆಗೆ ಅನುಕೂಲವಾಗಲಿದೆ.

ಸದ್ಯ ಕಲಬುರಗಿಯಿಂದ ಚಿಂಚೋಳಿ, ಸೇಡಂನಿಂದ ಚಿಂಚೋಳಿಗೆ ಬರುವವರಿಗೆ ಪೆಂಚನಪಳ್ಳಿ ದಸ್ತಾಪುರ ಹಾಗೂ ಹೋಡೇಬೀರನಹಳ್ಳಿ ಸುಲೇಪೇಟ ರಸ್ತೆ ಕಪ್ಪುಚುಕ್ಕೆ ಎನ್ನುವಂತಾಗಿದೆ. ಇದು ತಾಲ್ಲೂಕಿನ ಅತ್ಯಂತ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಹೀಗಾಗಿ ಬೇಗ ಸುಧಾರಣೆ ಕೈಗೊಳ್ಳಬೇಕೆಂದು ಬಿಜೆಪಿ ಮುಖಂಡ ಮಹೇಶ ಬೇಮಳಗಿ ಒತ್ತಾಯಿಸಿದ್ದಾರೆ.

ಹೆದ್ದಾರಿಗಳು ಹದಗೆಟ್ಟಿರುವುದು ಗಮನಕ್ಕಿದೆ. ಹೆದ್ದಾರಿ ಸುಗಮ ಸಂಚಾರಕ್ಕಾಗಿ ಒಟ್ಟು ₹18 ಕೋಟಿ ಅನುದಾನ ಮಂಜೂರಾಗಿದೆ. ಕಾಮಗಾರಿ ಕೈಗೊಳ್ಳಲು ಅಂದಾಜು ಪಟ್ಟಿ ತಯಾರಿಸಲಾಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಂಬಾರಾಯ ಪಾಟೀಲ ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ