ಕಲಬುರಗಿ ಜಿಲ್ಲೆಯ ಬಳ್ಳುಂಡಗಿ ಕಾಲುವೆಗೆ ಹರಿಯದ‌ ನೀರು: ರೈತರ ಪ್ರತಿಭಟನೆ

ಕಲಬುರಗಿ ಜಿಲ್ಲೆಯ ಬಳ್ಳುಂಡಗಿ ಕಾಲುವೆಗೆ ಹರಿಯದ‌ ನೀರು: ರೈತರ ಪ್ರತಿಭಟನೆ

ಕಲಬುರಗಿ ಜಿಲ್ಲೆಯ ಬಳ್ಳುಂಡಗಿ ಕಾಲುವೆಗೆ ಹರಿಯದ‌ ನೀರು: ರೈತರ ಪ್ರತಿಭಟನೆ

ಅಫಜಲಪುರ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಸೊನ್ನ ಭೀಮ ಏತ ನೀರಾವರಿ ಉಪ‌ ವಿಭಾಗದ ಬಳುಂಡಗಿ ಕಾಲುವೆ ಮೂಲಕ 40 ಗ್ರಾಮಗಳಿಗೆ ನೀರು ಹರಿಯಬೇಕು. ಆದರೆ, ಕಾಲುವೆಗೆ ನೀರು ಬಿಟ್ಟು ತಿಂಗಳಾದರೂ ಕೊನೇ ಭಾಗದ ರೈತರಿಗೆ ಹನಿ ನೀರು ಸಿಗುತ್ತಿಲ್ಲ ಎಂದು ಆರೋಪಿಸಿ ಗುರುವಾರ ಬೆಳಿಗ್ಗೆ 9ರಿಂದಲೇ ತಾಲ್ಲೂಕಿನ ಅತನೂರು ಗ್ರಾಮದ ಬಳಿ ಕಲಬುರಗಿ–ಸೋಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ರೈತ ಮುಖಂಡರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯವರು ಪ್ರತಿಭಟನೆ ಆರಂಭಿಸಿದ್ದಾರೆ.

ಎರಡ್ಮೂರು ಗಂಟೆಯಿಂದ ಹೆದ್ದಾರಿ ತಡೆದಿದ್ದರಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದು, ವಾಹನಗಳ ಸವಾರರು, ನಾಗರಿಕರು ಪರದಾಡುತ್ತಿದ್ದಾರೆ.

‘ಕಾಲುವೆಗಳಿಗೆ ನೀರು ಬಿಡುವ ಅಧಿಕಾರಿಗಳು, ಅದು ಎಲ್ಲಿ ತನಕ ಹೋಗುತ್ತಿದೆ ಎಂಬುದನ್ನು ನೋಡುತ್ತಿಲ್ಲ. ಕೊನೆಯ ಭಾಗದ ರೈತರಿಗೆ ಹನಿ ನೀರು ಸಿಗುತ್ತಿಲ್ಲ. ರೈತರು ಅಲ್ಲಲ್ಲಿ ಗೇಟ್‌ಗಳನ್ನು ಒಡೆದು ನೀರು ಪಡೆಯುತ್ತಿದ್ದಾರೆ. ಈ ಕುರಿತು ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಅಂಥವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಇಲಾಖೆ ಮುಂದೆ ಬರುತ್ತಿಲ್ಲ. ಹೀಗಾಗಿ ಕಾಲುವೆಗಳಿಗೆ ಬಿಟ್ಟಿರುವ ನೀರು ಮಧ್ಯದಲ್ಲೇ ಪೋಲಾಗುತ್ತಿದೆ’ ಎಂದು ಪ್ರತಿಭಟನೆ ನಡೆಸುತ್ತಿರುವ ರೈತರು ದೂರಿದರು.

ಪ್ರತಿಭಟನೆಯಲ್ಲಿ ಅತನೂರಿನ ಅಂಕಲಗಿ ಮಠದ ಗುರುಬಸವ ಶಿವಾಚಾರ್ಯ ಹಾಗೂ ರೈತ ಮುಖಂಡರಾದ ಸಿದ್ದರಾಮ ಧಣ್ಣೂರ, ಲತಿಫ್, ಮೆಹಬೂಬ್‌ ಸಿದನೂರ, ಸಂತೋಷ್ ಮಲಗೋಡ, ರಾಜು ಶೆಟ್ಟಿ, ಅಣ್ಣಾರಾವ್‌‌ ಪಾಟೀಲ, ಮಹಾಂತಗೌಡ ಬಿರಾದಾರ, ಶಂಕ್ರಯ್ಯ ಮಠಪತಿ, ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರಾದ ಶ್ರೀಕಾಂತ್ ದಿವಾನಜಿ ಹಾಗೂ ಮೆಹಬೂಬ್ ನದಾಫ್ ಸೇರಿದಂತೆ ನೂರಾರು ರೈತ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.

ಪ್ರತಿಭಟನಾ ನಿರತ ಸ್ಥಳಕ್ಕೆ ತಹಶೀಲ್ದಾರ್‌ ಸಂಜೀವಕುಮಾರ್ ದಾಸರ್ ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ರೈ ಮನವೊಲಿಕೆಗೆ ಪ್ರಯತ್ನಿಸಿದರು. ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ