ಟೇಬಲ್‌ ಟೆನಿಸ್‌: ಭಾರತ ತಂಡಗಳ ಅಭಿಯಾನಕ್ಕೆ ತೆರೆ

ಟೇಬಲ್‌ ಟೆನಿಸ್‌: ಭಾರತ ತಂಡಗಳ ಅಭಿಯಾನಕ್ಕೆ ತೆರೆ

ಟೇಬಲ್‌ ಟೆನಿಸ್‌: ಭಾರತ ತಂಡಗಳ ಅಭಿಯಾನಕ್ಕೆ ತೆರೆ

ಟೊಯೊಟಾ (ಪಿಟಿಐ): ಭಾರತ ಮಹಿಳಾ ತಂಡವು ಇಲ್ಲಿ ನಡೆಯುತ್ತಿರುವ ಏಷ್ಯನ್‌ ಗೇಮ್ಸ್‌ ಟೇಬಲ್‌ ಟೆನಿಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಉತ್ತರ ಕೊರಿಯಾ ವಿರುದ್ಧ ಸೋತು ಹೊರಬಿದ್ದರೆ, ಪುರುಷರ ತಂಡವು 16ರ ಘಟ್ಟದಲ್ಲೇ ಅಭಿಯಾನ ಮುಗಿಸಿತು.

ಥಾಯ್ಲೆಂಡ್‌ ತಂಡವನ್ನು ಸೋಲಿಸಿ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟಿದ್ದ ಭಾರತದ ಮಹಿಳಾ ತಂಡವು 0–3ರಿಂದ ಉತ್ತರ ಕೊರಿಯಾ ವಿರುದ್ಧ ಹೀನಾಯ ಸೋಲು ಅನುಭವಿಸಿತು.

ಇದಕ್ಕೂ ಮೊದಲು ಕರ್ನಾಟಕದ ಯಶಸ್ವಿನಿ ಘೋರ್ಪಡೆ ಅವರ ಅಮೋಘ ಆಟದ ಬಲದಿಂದ ಭಾರತ 3–2ರಿಂದ ಥಾಯ್ಲೆಂಡ್‌ ತಂಡವನ್ನು ಮಣಿಸಿತ್ತು. ಯಶಸ್ವಿನಿ ಅವರು ತಮ್ಮ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರು.

ಭಾರತ ಪುರುಷರ ತಂಡವು 0–3ರಿಂದ ದಕ್ಷಿಣ ಕೊರಿಯಾ ತಂಡಕ್ಕೆ ಸುಲಭವಾಗಿ ಮಣಿಯಿತು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ