ಲೋಕಾಯುಕ್ತ ದಾಳಿ: ನಿವೃತ್ತ ಕೃಷಿ ಅಧಿಕಾರಿ ಬಳಿ ₹3 ಕೋಟಿ ಮೌಲ್ಯದ ಆಸ್ತಿ ಪತ್ತೆ

ಲೋಕಾಯುಕ್ತ ದಾಳಿ: ನಿವೃತ್ತ ಕೃಷಿ ಅಧಿಕಾರಿ ಬಳಿ ₹3 ಕೋಟಿ ಮೌಲ್ಯದ ಆಸ್ತಿ ಪತ್ತೆ

ಲೋಕಾಯುಕ್ತ ದಾಳಿ: ನಿವೃತ್ತ ಕೃಷಿ ಅಧಿಕಾರಿ ಬಳಿ ₹3 ಕೋಟಿ ಮೌಲ್ಯದ ಆಸ್ತಿ ಪತ್ತೆ

ಬೀದರ್: ಜಿಲ್ಲಾ ಕೃಷಿ ತರಬೇತಿ ಕೇಂದ್ರದ ನಿವೃತ್ತ ಕ್ಷೇತ್ರ ಕೃಷಿ ಅಧಿಕಾರಿ ಮಾಣಿಕರಾವ್ ಶೇರಿಕಾರ್ ಅವರ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿ, ಸುಮಾರು ₹3 ಕೋಟಿ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಶೇರಿಕಾರ್‌ ಅವರ ಆದಾಯಕ್ಕಿಂತ 300 ಪಟ್ಟು ಅಧಿಕ ಆಸ್ತಿ ಇರುವುದು ಕಾರ್ಯಾಚರಣೆ ವೇಳೆ ಗೊತ್ತಾಗಿದೆ ಎಂದು ಲೋಕಾಯುಕ್ತ ಪೊಲೀಸ್‌ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ. 

‘ಬೀದರ್‌ ನಗರದಲ್ಲಿ ಎರಡು ಹಾಗೂ ಹುಮನಾಬಾದ್‌ನ ಟೀಚರ್ಸ್‌ ಕಾಲೊನಿಯಲ್ಲಿ ಒಂದು ಮನೆ ಹೊಂದಿದ್ದು, ಇವುಗಳ ಮೌಲ್ಯ ₹1.5 ಕೋಟಿ ಎಂದು ಅಂದಾಜಿಸಲಾಗಿದೆ. ಬೀದರ್‌ ನಗರದಲ್ಲಿ ₹15 ಲಕ್ಷ ಮೌಲ್ಯದ ಆರು ನಿವೇಶನಗಳು, ₹61 ಲಕ್ಷ ಬೆಲೆಬಾಳುವ ತಲಾ 350 ಗ್ರಾಂ ಚಿನ್ನ ಹಾಗೂ ಬೆಳ್ಳಿ ಆಭರಣಗಳು, ₹30 ಲಕ್ಷ ಮೌಲ್ಯದ ಎರಡು ಕಾರು, ಮೂರು ಬೈಕ್‌ಗಳಿರುವುದು ಪತ್ತೆಯಾಗಿದೆ’ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಶೇರಿಕಾರ್‌ ಅವರ ಸ್ವಗ್ರಾಮ ಚಿಟಗುಪ್ಪ ತಾಲ್ಲೂಕಿನ ಮುತ್ತಂಗಿ ಗ್ರಾಮದಲ್ಲಿ 14 ಎಕರೆ 20 ಗುಂಟೆ ಕೃಷಿ ಜಮೀನು ಇದೆ. ₹26 ಲಕ್ಷ ಖರ್ಚು ಮಾಡಿ, ನಾಲ್ಕು ಎಕರೆಯಲ್ಲಿ ಸೇಬು, ನಿಂಬೆ, ಸಪೋಟಾ ಸೇರಿದಂತೆ ಇತರ ಹಣ್ಣುಗಳ ಗಿಡಗಳನ್ನು ಬೆಳೆಸಿದ್ದಾರೆ ಎಂದೂ ತಿಳಿಸಿದ್ದಾರೆ.

ಲೋಕಾಯುಕ್ತ ಕಲಬುರಗಿ ವಿಭಾಗದ ಎಸ್.ಪಿ. ಸಿದ್ದರಾಜು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಬೀದರ್ ಡಿವೈಎಸ್ಪಿ ಹನುಮಂತರಾಯ, ಬಾಬಾಸಾಹೇಬ್‌ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದೆ. ಸಿಬ್ಬಂದಿ ಸಂತೋಷ್‌ ರಾಠೋಡ್, ಕೋದಂಡಪ್ಪ, ಶಾಂತಲಿಂಗ, ಶ್ರೀಕಾಂತ, ವಿಶಾಲ್‌, ಕಿಶೋರ್‌, ಭರತ್‌, ಸುವರ್ಣಾ, ನಾಗಶೆಟ್ಟಿ, ಜಗದೀಶ್‌, ಕಂಟೆಪ್ಪ, ಹಾಜಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ