
ಶ್ರಾವಣ ಅಮಾವಾಸ್ಯೆ ಪ್ರಯುಕ್ತ ಸೋಮೇಶ್ವರದಲ್ಲಿ ಭಕ್ತರಿಂದ ತೀರ್ಥಸ್ನಾನ
ಉಳ್ಳಾಲ: ಶ್ರಾವಣ ಅಮಾವಾಸ್ಯೆ ಪ್ರಯುಕ್ತ ಶುಕ್ರವಾರ ಸೋಮೇಶ್ವರದ ಕಡಲತೀರದಲ್ಲಿ ಭಕ್ತರು ತೀರ್ಥಸ್ನಾನ ಮಾಡಿದರು.
ಶ್ರಾವಣ ಮಾಸವು ಶಿವನ ಆರಾಧನೆಗೆ ಪವಿತ್ರ ಮಾಸ ಎಂಬ ನಂಬಿಕೆಯಿಂದಾಗಿ ಶ್ರಾವಣ ಅಮಾವಾಸ್ಯೆಯಂದು ಸೋಮೇ ಶ್ವರ ಕಡಲಲ್ಲಿ ತೀರ್ಥಸ್ನಾನ ನೆರವೇ ರಿಸಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸು ವುದು ಇಲ್ಲಿನ ಸಂಪ್ರದಾಯವಾಗಿದೆ.
ಸಂಪ್ರದಾಯದಂತೆ ವೀಳ್ಯದೆಲೆ ಹಾಗೂ ಅಡಿಕೆಯನ್ನು ಸಮುದ್ರಕ್ಕೆ ಅರ್ಪಿಸಿ ತೀರ್ಥಸ್ನಾನ ನೆರವೇರಿಸಿದರು. ವಿವಿಧೆಡೆಯಿಂದ ಕಬ್ಬಿಣದ ಕತ್ತಿಗಳನ್ನು ತಂದು ಮಾರಾಟ ಮಾಡುವ ವ್ಯಾಪಾರಿಗಳ ಸಂಖ್ಯೆ ಹೆಚ್ಚಾಗಿತ್ತು.