ಗೌರಿ–ಗಣೇಶ ಹಬ್ಬದ ದಿನ ಮುಳ್ಳಯ್ಯನಗಿರಿ ಪ್ರವಾಸ ನಿರ್ಬಂಧ

ಗೌರಿ–ಗಣೇಶ ಹಬ್ಬದ ದಿನ ಮುಳ್ಳಯ್ಯನಗಿರಿ ಪ್ರವಾಸ ನಿರ್ಬಂಧ

ಗೌರಿ–ಗಣೇಶ ಹಬ್ಬದ ದಿನ ಮುಳ್ಳಯ್ಯನಗಿರಿ ಪ್ರವಾಸ ನಿರ್ಬಂಧ

ಚಿಕ್ಕಮಗಳೂರು: ಗೌರಿ –ಗಣೇಶ ಹಬ್ಬದ ದಿನದಂದು ಮುಳ್ಳಯ್ಯನಗಿರಿ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸೆ.14ರಂದು ಹಬ್ಬದ ದಿನ ಅಂಬಳೆ, ವಸ್ತಾರೆ, ಆವತಿ ಮತ್ತು ಜಾಗರ ಹೋಬಳಿಯ 40ಕ್ಕೂ ಹೆಚ್ಚು ಗ್ರಾಮಸ್ಥರು ಮೇಲುಗದ್ದುಗೆ ಮುಳ್ಳಯ್ಯನಗಿರಿ, ಸಿತಾಳಯ್ಯನಗಿರಿ ಮತ್ತು ಗುರು ನಾರುಕಂತೆ ಮಠಗಳಿಗೆ ತೆರಳಿ ಚೌತಿ ಕಾಯಿ ಒಡೆಸುವ ಪಾರಂಪರಿಕ ಆಚರಣೆ ನೂರಾರು ವರ್ಷಗಳಿಂದ ಇದೆ.

ಆದ್ದರಿಂದ ಮುಳ್ಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರಾ ಜಲಪಾತ ಸೇರಿ ಸುತ್ತಮುತ್ತಲ ಪ್ರದೇಶಕ್ಕೆ ಬೇರೆ ಪ್ರವಾಸಿಗರನ್ನು ನಿರ್ಬಂಧಿಸಲಾಗುತ್ತಿದೆ. ರೆಸಾರ್ಟ್‌ ಮತ್ತು ಹೋಂಸ್ಟೇಗಳಿಗೆ ಮುಂಗಡವಾಗಿ ಕಾಯ್ದಿರಿಸಿದವರಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ