ಆರೋಗ್ಯ ಶಿಬಿರ: ಚಾಲಕರಿಗೆ ಕಣ್ಣಿನ ತಪಾಸಣೆ

ಆರೋಗ್ಯ ಶಿಬಿರ: ಚಾಲಕರಿಗೆ ಕಣ್ಣಿನ ತಪಾಸಣೆ

ಆರೋಗ್ಯ ಶಿಬಿರ: ಚಾಲಕರಿಗೆ ಕಣ್ಣಿನ ತಪಾಸಣೆ

ಬೆಂಗಳೂರು: ಚಾಲಕರ ಗೌರವ ದಿನಾಚರಣೆ ಪ್ರಯುಕ್ತ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಟಿಸಿಐ) ಆಯೋಜಿಸಿದ್ದ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರದಲ್ಲಿ ನೂರಾರು ಚಾಲಕರು ಪಾಲ್ಗೊಂಡು ಪ್ರಯೋಜನ ಪಡೆದರು.

ಸಂಸ್ಥೆಯು ಏಳು ರಾಜ್ಯಗಳ ವಿವಿಧ ಸ್ಥಳಗಳಲ್ಲಿ ಆಯೋಜಿಸಿದ್ದ ಶಿಬಿರಗಳಲ್ಲಿ 1,280 ಚಾಲಕರು ವೈದ್ಯರ ಸಲಹೆ ಪಡೆದರು. ಜೊತೆಗೆ ರಸ್ತೆ ಸುರಕ್ಷತಾ ಜಾಗೃತಿ ಅಭಿಯಾನದಲ್ಲಿಯೂ ಪಾಲ್ಗೊಂಡರು. ಉತ್ತಮ ಕೊಡುಗೆ ನೀಡಿದ ಚಾಲಕರಿಗೆ ಪ್ರಶಂಸನಾ ಪತ್ರಗಳನ್ನು ಟಿಸಿಐ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮನೋಜ್ ತ್ರಿಪಾಠಿ ವಿತರಿಸಿದರು.

ನಂತರ ಮಾತನಾಡಿ, ‘ದೇಶದ ಜನರ ನಿತ್ಯ ಜೀವನದಲ್ಲಿ ಚಾಲಕರ ಪಾತ್ರ ಅನನ್ಯ. ಅಗತ್ಯ ವಸ್ತುಗಳ ಸರಕು ಸಾಗಣೆ ಮಾಡುವುದಲ್ಲದೇ ಪೂರೈಕೆ ಸರಪಳಿಯ ಕೊಂಡಿಗಳಾಗಿದ್ದಾರೆ. ಅವರ ಆರೋಗ್ಯ, ಸುರಕ್ಷತೆ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಸುರಕ್ಷಿತ ಲಾಜಿಸ್ಟಿಕ್ಸ್ ಪರಿಸರ ವ್ಯವಸ್ಥೆ ಕಲ್ಪಿಸುವುದು ಆದ್ಯತೆ ಆಗಬೇಕಿದೆ. ಈ ನಿಟ್ಟಿನಲ್ಲಿ ಟಿಸಿಐ ಕಾರ್ಯಕ್ರಮಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ’ ಎಂದರು.

ಬೆಂಗಳೂರು: ಇಲ್ಲಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿಯಾಗಿ ವಿ.ಎಚ್.ಡಿ. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ಕಾಲೇಜಿನ ನಿರ್ದೇಶಕಿ ಮಮತಾ ಬಿ. ಅಧಿಕಾರ ಸ್ವೀಕರಿಸಿದರು. ಅಶೋಕ ಎಸ್.ಬಿ. ಅವರ ಅವಧಿ ಪೂರ್ಣಗೊಂಡಿದ್ದರಿಂದ ಮಮತಾ ಅವರನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ