ಬಾಗಲಕೋಟೆ, ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆ, ಬೆಂಗಳೂರಿನಲ್ಲಿ ಅತ್ಯಧಿಕ

ಬಾಗಲಕೋಟೆ, ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆ, ಬೆಂಗಳೂರಿನಲ್ಲಿ ಅತ್ಯಧಿಕ

ಬಾಗಲಕೋಟೆ, ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆ, ಬೆಂಗಳೂರಿನಲ್ಲಿ ಅತ್ಯಧಿಕ

ಬೆಂಗಳೂರು: ಬಾಗಲಕೋಟೆ, ಕಲಬುರಗಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಮಳೆಯಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿರುವುದು ಬೆಂಗಳೂರು ನಗರದಲ್ಲಿ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಬೆಂಗಳೂರು ನಗರದ ಸಿಂಗನಾಯಕನಹಳ್ಳಿಯಲ್ಲಿ 99 ಮಿ.ಮೀ ಮಳೆಯಾಗಿದೆ. ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲೂ 99 ಮಿ.ಮೀ ಮಳೆಯಾದ ಮಾಹಿತಿಯಿದೆ.

ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಯಲಪರ್ತಿಯಲ್ಲಿ 90.5 ಮಿ.ಮೀ, ಪರಮಾನಂದವಾಡಿಯಲ್ಲಿ 86 ಮಿ.ಮೀ, ಗದಗ ತಾಲ್ಲೂಕಿನ ಕಡಾಡಿಯಲ್ಲಿ 81.5 ಮಿ.ಮೀ ಮಳೆಯಾಗಿದೆ.

ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ರಂಗಸಮುದ್ರದಲ್ಲಿ 80 ಮಿ.ಮೀ, ಬೆಂಗಳೂರು ನಗರದ ಅರಕೆರೆಯಲ್ಲಿ 79.5 ಮಿಮೀ, ಮಂಡ್ಯ ತಾಲ್ಲೂಕಿನ ಶಿವಪುರದಲ್ಲಿ 78.5 ಮಿ.ಮೀ, ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಸುರಕೋಡದಲ್ಲಿ 78 ಮಿ.ಮೀ, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ನರಸೀಪುರ ಹಾಗೂ ಗದಗ ಜಿಲ್ಲೆ ರೋಣ ತಾಲ್ಲೂಕಿನ ಕುರಡಗಿಯಲ್ಲಿ ತಲಾ 76 ಮಿ.ಮೀ ಮಳೆಯಾಗಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕೆಂದೂರದಲ್ಲಿ 72 ಮಿ.ಮೀ, ಗದಗ ಜಿಲ್ಲೆ ರೋಣ ತಾಲ್ಲೂಕಿನ ಅಬ್ಬಿಗೆರೆಯಲ್ಲಿ 71.25 ಮಿ.ಮೀ, ಪಾವಗಡ ತಾಲ್ಲೂಕಿನ ಪೋತಗಾನಹಳ್ಳಿಯಲ್ಲಿ 68 ಮಿ.ಮೀ, ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಚಿಕ್ಕಣಗಾಂವದಲ್ಲಿ 65.75 ಮಿ.ಮೀ ಮಳೆಯಾಗಿದೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕು ಬೆಣಕನಹಾಳದಲ್ಲಿ 64.5 ಮಿ.ಮೀ, ಕಲಬುರಗಿ ಜಿಲ್ಲೆ ಯಡ್ರಾಮಿ ತಾಲ್ಲೂಕಿನ ಸುಂಬದದಲ್ಲಿ 54.25 ಮಿ.ಮೀ, ಬಳ್ಳಾರಿ ನಗರದಲ್ಲಿ 63.5 ಮಿ.ಮೀ, ಅಫಜಲಪುರ ತಲ್ಲೂಕಿನ ಕರಜಗಿಯಲ್ಲಿ 62.75 ಮಿ.ಮೀ, ದೊಡ್ಡಬಳ್ಳಾಪುರ ತಾಲ್ಲೂಕಿನ ಭಕ್ತರಹಳ್ಳಿಯಲ್ಲಿ 62.5 ಮಿ.ಮೀ ಮಳೆಯಾಗಿದೆ.

ಬಾದಾಮಿ ಹಾಗೂ ಇಂಡಿಯಲ್ಲಿ 61.5 ಮಿ.ಮೀ, ರೋಣ ತಾಲ್ಲೂಕಿನ ಗೋಗೇರಿಯಲ್ಲಿ 60 ಮಿ.ಮೀ, ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲ್ಲೂಕಿನ ವಿಜಿ ದೊಡ್ಡಿಯಲ್ಲಿ 59.25 ಮಿ.ಮೀ, ಸಿಂದಗಿ ತಾಲ್ಲೂಕಿನ ಗೋಲಗೇರಿಯಲ್ಲಿ 58.25 ಮಿ.ಮೀ, ಅಫಜಲಪುರ ತಾಲ್ಲೂಕಿನ ಮಾಶಾಲದಲ್ಲಿ 58 ಮಿ.ಮೀ ಮಳೆಯಾಗಿದೆ.

ಚಿತ್ತಾಪುರ ತಾಲ್ಲೂಕಿನ ಲಾಡ್ಲಾಪುರದಲ್ಲಿ 57.5 ಮಿ.ಮೀ, ತಿಪಟೂರು ತಾಲ್ಲೂಕಿನ ಬಾಳುವನೆರಳಿನಲ್ಲಿ 56.5 ಮಿ.ಮೀ, ಬೆಂಗಳೂರು ನಗರದ ಗಂಟಿಗಾನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ, ಶಿರಾ ತಾಲ್ಲೂಕಿನಕೊಟ್ಟಾದಲ್ಲಿ ತಲಾ 56 ಮಿ. ಮೀ ಮಳೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಕುಂಕನಾಡುವಿನಲ್ಲಿ 54 ಮಿ.ಮೀ, ಬಳ್ಳಾರಿ ತಾಲ್ಲೂಕಿನ ಸಿಡಿಗಿನಮಾಲ ಹಾಗೂ ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ಹಿರೇ ಹಂಚಿನಾಳದಲ್ಲಿ ತಲಾ 53.75 ಮಿ.ಮೀ, ಬೆಂಗಳೂರು ನಗರದ ಕೆಆರ್‌ಪುರದಲ್ಲಿ53.25 ಮಿ.ಮೀ ಮಳೆಯಾಗಿದೆ.

ರಾಯಚೂರು ಜಿಲ್ಲೆ ಸಿಂಧನೂರು ತಾಲ್ಲೂಕಿನ ಬಸ್ಸಾಪುರದಲ್ಲಿ 53 ಮಿ.ಮೀ, ಸುರಪುರ ತಾಲ್ಲೂಕಿನ ನಾಗನೂರಿನಲ್ಲಿ 52.5 ಮಿ.ಮೀ, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಕಂದಗಲ್ಲಿನಲ್ಲಿ 52 ಮಿ.ಮೀ, ಕಡೂರು ತಾಲ್ಲೂಕಿನ ಹೊಚಿಹಳ್ಳಿಯಲ್ಲಿ 51 ಮಿ.ಮೀ ಮಳೆಯಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ