ರಾಮದುರ್ಗ | ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಳೆಗಾಲದಲ್ಲಿಯೂ ನೀರಿನ ಅಭಾವ

ರಾಮದುರ್ಗ | ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಳೆಗಾಲದಲ್ಲಿಯೂ ನೀರಿನ ಅಭಾವ

ರಾಮದುರ್ಗ | ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಮಳೆಗಾಲದಲ್ಲಿಯೂ ನೀರಿನ ಅಭಾವ

ರಾಮದುರ್ಗ: ತಾಲ್ಲೂಕಿನ ಬಟಕುರ್ಕಿ ಸಮೀಪದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುವ ಇಂದಿರಾ ಗಾಂಧಿ ವಸತಿ ಶಾಲೆ ಮಕ್ಕಳಿಗೆ ಮಳೆಗಾಲದಲ್ಲಿಯೂ ಕುಡಿಯುವ ನೀರಿನ ಕೊರತೆ ಉಂಟಾಗಿ ಹಾಹಾಕಾರ ಎದುರಾಗಿದೆ. ಶಿಕ್ಷಕರು, ಮಕ್ಕಳು ಸ್ನಾನ ಮತ್ತು ಶೌಚಕ್ಕೂ ಪರದಾಡುತ್ತಿದ್ದಾರೆ.

ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 6ನೇ ತರಗತಿಯಿಂದ 10ನೇ ತರಗತಿವರೆಗೆ 400 ಮಕ್ಕಳು ಪ್ರವೇಶ ಪಡೆದಿದ್ದಾರೆ. ಕೊಳವೆ ಬಾವಿಯಲ್ಲಿ ನೀರಿನ ಕೊರತೆ ಎದುರಾಗಿದೆ.

ಸಿಬ್ಬಂದಿ ತಾತ್ಕಾಲಿಕವಾಗಿ ಸ್ಥಳೀಯ ರೈತರ ಸಹಾಯದಿಂದ ಟ್ಯಾಂಕರ್‌ ಮೂಲಕ ನೀರು ತಂದು ದಾಹ ನೀಗಿಸಲು ಯತ್ನಿಸುತ್ತಿದ್ದಾರೆ. ಟ್ಯಾಂಕರ್‌ ಆಗಮಿಸುತ್ತಲೇ ಮಕ್ಕಳು ಓದು ನಿಲ್ಲಿಸಿ ಬಕೆಟ್‌ನಲ್ಲಿ ನೀರು ಹಿಡಿದಿಟ್ಟುಕೊಳ್ಳಲು ಸರತಿಯಲ್ಲಿ ನಿಲ್ಲುವ ಸ್ಥಿತಿ ಎದುರಾಗಿದೆ. ದಿನಕ್ಕೆ ಎರಡು–ಮೂರು ಟ್ಯಾಂಕರ್‌ ನೀರು ತರಿಸಲಾಗುತ್ತಿದೆ. ನೀರು ಪಡೆದುಕೊಳ್ಳಲು ಮಕ್ಕಳಲ್ಲಿ ನೂಕು ನುಗ್ಗಲು ಸಹ ಎದುರಾಗುತ್ತಿದೆ.

ಸಾಕಷ್ಟು ಪ್ರಮಾಣದಲ್ಲಿ ಟ್ಯಾಂಕರ್‌ ನೀರು ಪೂರೈಕೆಯಾಗುತ್ತಿಲ್ಲ ಎಂಬ ಕಾರಣಕ್ಕೆ ಹತ್ತಿರದ ಗ್ರಾಮಗಳ ಮಕ್ಕಳು ತಮ್ಮ ಗ್ರಾಮಗಳಿಗೆ ಹೋಗಿ ನಿತ್ಯಕರ್ಮಗಳನ್ನು ಮುಗಿಸಿಕೊಂಡು ಬಟ್ಟೆ ತೊಳೆದುಕೊಂಡು ಬರುತ್ತಿದ್ದಾರೆ.

ಶಾಲಾ ಆವರಣದಲ್ಲಿ ಕೊರೆಯಿಸಿದ್ದ ಎರಡು ಕೊಳವೆ ಬಾವಿಯಲ್ಲಿ ನೀರು ಬತ್ತಿ ಹೋಗಿತ್ತು. ಕುಡಿಯುವ ನೀರು ಮತ್ತು ಬಳಕೆಗೆ ನೀರು ಇಲ್ಲದ್ದನ್ನು ಪರಿಗಣಿಸಿದ ತಾಲ್ಲೂಕು ಅಧಿಕಾರಿಗಳು ಒಂದೆರಡು ವರ್ಷಗಳ ಮುಂಚೆ ಸುಮಾರು 1 ಕಿ.ಮೀ. ದೂರದಲ್ಲಿ ಕೊಳವೆ ಬಾವಿ ಕೊರೆದು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು. ಆದರೆ, ಬರಗಾಲದಲ್ಲಿ ಈ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೊಳವೆ ಬಾವಿಯಲ್ಲಿ ನೀರಿನ ಕೊರತೆಯಾಗಿದೆ. ಹೀಗಾಗಿ ರಾಮದುರ್ಗ ತಾಲ್ಲೂಕಿಗೆ ಎದುರಾಗಿರುವ ಬರಗಾಲ ಛಾಯೆ ವಸತಿ ನಿಲಯದ ಮಕ್ಕಳ ಮೇಲೂ ಆವರಿಸಿದೆ.

ಮೇಲ್ದರ್ಜೆಗೇರಿದ ಶಾಲೆ: ಕಳೆದ ವರ್ಷದಿಂದ ಪ್ರಾಥಮಿಕ ಹಂತದಿಂದ ಪ್ರೌಢ ಹಂತಕ್ಕೆ ಮೇಲ್ದರ್ಜೇರಿದರಿಂದ ಮಕ್ಕಳ ಸಂಖ್ಯೆ ಏರಿಕೆಯಾಗಿ ಮಕ್ಕಳಿಗೆ ಮೂಲ ಸೌಲಭ್ಯದ ಕೊರತೆ ಅತಿಯಾಗಿದೆ. ಮಕ್ಕಳಿಗೆ ಕೊಠಡಿಗಳಿಲ್ಲ. ಬೆಡ್‌ಗಳ ಕೊರತೆ ಅತಿಯಾಗಿದೆ. ಶಿಕ್ಷಕರ ಕೊಠಡಿಗಳಲ್ಲಿಯೇ ಮಕ್ಕಳನ್ನು ಸೇರಿಸಿಕೊಂಡು ಸಹಾಯ ಮಾಡಲಾಗಿದೆ.

ಲೈಬ್ರರಿ ಇಲ್ಲ: ಶಾಲೆಯಲ್ಲಿ ಮಕ್ಕಳ ಓದಿಗಾಗಿ ಸೂಕ್ತ ಲೈಬ್ರರಿ ಇಲ್ಲದೇ ಮಕ್ಕಳು ಓದು ಕುಂಠಿತಗೊಂಡಿದೆ. ಸಾಕಷ್ಟು ಸಾರಿ ಲೈಬ್ರರಿ ಸ್ಥಾಪಿಸಬೇಕು ಎಂದು ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ದೂರಲಾಗಿದೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ