ಬರ ಬಂದರೂ ಡಿಕೆಶಿ ಘೋಷಣೆಗೆ ಬರವಿಲ್ಲ: ಬಿಜೆಪಿ ಪ್ರತಿಭಟನೆ

ಬರ ಬಂದರೂ ಡಿಕೆಶಿ ಘೋಷಣೆಗೆ ಬರವಿಲ್ಲ: ಬಿಜೆಪಿ ಪ್ರತಿಭಟನೆ

ಬರ ಬಂದರೂ ಡಿಕೆಶಿ ಘೋಷಣೆಗೆ ಬರವಿಲ್ಲ: ಬಿಜೆಪಿ ಪ್ರತಿಭಟನೆ

ಯಾದಗಿರಿ: ರಾಜ್ಯ ಸರ್ಕಾರದ ಖಜಾನೆ ಖಾಲಿಯಾಗಿ ಸಂಪೂರ್ಣ ದಿವಾಳಿಯಾಗಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಅಣುಕು ಶವಯಾತ್ರೆ ನಡೆಸಿ, ಪ್ರತಿಕೃತಿಯನ್ನು ದಹಿಸಿ ಪ್ರತಿಭಟನೆ ಮಾಡಿದರು.

ನಗರದ ನೇತಾಜಿ ವೃತ್ತದಲ್ಲಿ ಜಮಾಯಿಸಿದ ಮುಖಂಡರು ಹಾಗೂ ಕಾರ್ಯಕರ್ತರು ರಾ‌ಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಸರ್ಕಾರದ ಅಣಕು ಶವಯಾತ್ರೆ ನಡೆಸಿದರು. ಮುಖ್ಯಮಂತ್ರಿಗಳ ಪ್ರತಿಕೃತಿಯನ್ನು ದಹಿಸಲು ಮುಂದಾದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಯತ್ನಿಸಿದರು. ಪಟ್ಟು ಬಿಡದೆ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ನಂಬಿದರೆ ಚೊಂಬು ಗ್ಯಾರಂಟಿ’, ‘ಡಿ.ಕೆ. ಶಿವಕುಮಾರ್ ಬಿಟ್ಟ ಘೋಷಣೆಗೆ ಬರವಿಲ್ಲ’, ‘ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ’, ಖಜಾನೆಯಲ್ಲಿ ಕಾಸಿಲ್ಲ ಬರಿ ಸೌಂಡ್ ಮಾತ್ರ’, ‘ಬೊಕ್ಕಸ ಖಾಲಿ ಡಿಕೆಶಿ ಸರ್ಕಾರ ದಿವಾಳಿ’... ನಾಮಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಅಂಚಿನಲ್ಲಿ ಇರಿಸಿದ್ದು, ಮಾತ್ರವಲ್ಲದೇ ಅಭಿವೃದ್ಧಿ ಶೂನ್ಯತೆಯಿಂದ ಕಾಡುತ್ವಂತೆ ಮಾಡಿದೆ. ರೈತವಿರೋಧಿ, ಜನವಿರೋಧಿ, ಮಹಿಳಾ ವಿರೋಧಿ, ಯುವಜನರ ವಿರೋಧಿ ಸರ್ಕಾರವಾಗಿದೆ. ರಾಜ್ಯದ ಸಾಲದ ಮೊತ್ತವನ್ನು ₹ 8 ಲಕ್ಷ ಕೋಟಿಗೆ ತಲುಪಿಸಿದ್ದು, ಸಾಲ ಮಾಡಿರುವುದೇ ರಾಜ್ಯ ಸರ್ಕಾರದ ಸಾಧನೆ ಎಂದು ಟೀಕಿಸಿದರು.

‌ಅಂಗವಿಕಲರಿಗೆ, ವೃದ್ಧಾಪ್ಯ ವೇತನ, ವಿಧವೆಯರಿಗೆ ಪಿಂಚಣಿ ಪಾವತಿ ಆಗುತ್ತಿಲ್ಲ. ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ರಾಜ್ಯದ ಹಣಕಾಸಿನ ವಾಸ್ತವ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ‘ಹತ್ತು ಪೈಸೆಯೂ ಕೊಡಲು ಆಗದೆ ಕರಾವಳಿ ಭಾಗಕ್ಕೆ ₹ 32 ಸಾವಿರ ಕೋಟಿ ಕೊಡುವುದಾಗಿ ಸುಳ್ಳು ಹೇಳಿದ್ದಾರೆ’ ಎಂದರು.

‘ಯಡಿಯೂರಪ್ಪ ಅವರ ಸರ್ಕಾರ ಇದ್ದಾಗ ಎನ್‌ಡಿಆರ್‌ಎಫ್ ಹಾಗೂ ರಾಜ್ಯ ಸರ್ಕಾರದ ಹಣ ಸೇರಿ ಒಂದು ಹೆಕ್ಟೇರ್‌ಗೆ ₹ 18 ಸಾವಿರ ಕೊಟ್ಟಿತ್ತು. ಈ ಸರ್ಕಾರದ ಸ್ಥಿತಿ ಗಂಭೀರವಾಗಿ ಪ್ರತಿ ರೈತರಿಗೆ ₹ 2,500 ಜಮೆ ಮಾಡುವುದಾಗಿ ಹೇಳಿ ರೈತರಿಗೆ ಅವಮಾನ ಮಾಡುತ್ತಿದೆ. ಇದರಿಂದ ಯಾರಿಗೂ ಲಾಭವಾಗುವುದಿಲ್ಲ’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಮುಖಂಡರಾದ ಅಡಿವೆಪ್ಪ ಜಾಕ್, ಪ್ರಭಾವತಿ ಕಲಾಲ್, ವೆಂಕಟಪ್ಪ ಅವಂಗಾಪುರ, ನರಸಿಂಹಲು ನಿರೇಟಿ, ಬಸವರಾಜ ಸೋನದ, ಶಿವರಾಜ್ ದೇಶಮುಖ, ಸಿದ್ದನಗೌಡ ವಡಗೇರಾ, ರಾಜಶೇಖರ್ ಕಾಡಮನೂರು, ಮಲ್ಲಿಕಾರ್ಜುನ ಕಟ್ಟಿಮನಿ, ರಮೇಶ್ ದೊಡ್ಡಮನಿ, ಲಕ್ಷ್ಮಿಪುತ್ರ ಮಾಲಿ ಪಾಟೀಲ, ಸ್ವಾಮಿದೇವ ದಾಸನ ಕೇರಿ, ಚಂದ್ರಶೇಖರ ಕಡೆಸೂರ್ ಸೇರಿ ಹಲವರು ಪಾಲ್ಗೊಂಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ