ಬಾಗಲಕೋಟೆ | ಈರುಳ್ಳಿ ಬೆಲೆ ಹೆಚ್ಚಳ: ಗ್ರಾಹಕರಿಗೆ ಭಾರಿ ಹೊರೆ

ಬಾಗಲಕೋಟೆ | ಈರುಳ್ಳಿ ಬೆಲೆ ಹೆಚ್ಚಳ: ಗ್ರಾಹಕರಿಗೆ ಭಾರಿ ಹೊರೆ

ಬಾಗಲಕೋಟೆ | ಈರುಳ್ಳಿ ಬೆಲೆ ಹೆಚ್ಚಳ: ಗ್ರಾಹಕರಿಗೆ ಭಾರಿ ಹೊರೆ

ಬಾಗಲಕೋಟೆ: ಈರುಳ್ಳಿ ಬೆಲೆಯು ಪ್ರತಿ ಕೆ.ಜಿಗೆ ವಾರದಿಂದ ವಾರಕ್ಕೆ ಹೆಚ್ಚುತ್ತಿದ್ದು, ಗ್ರಾಹಕರ ಜೇಬಿಗೆ ದಿನದಿಂದ ದಿನಕ್ಕೆ ಭಾರವಾಗುತ್ತಿದೆ. ಸಕ್ಕರೆ, ಬೆಲ್ಲ, ಹೂ, ಹಣ್ಣುಗಳ ಜೊತೆಗೆ ಈಗ ಈರುಳ್ಳಿಯ ಬೆಲೆಯೂ ಹೆಚ್ಚಳವಾಗಿದೆ.

ಬಹುತೇಕ ಅಡುಗೆಯಲ್ಲಿ ಬಳಸುವ ಈರುಳ್ಳಿ ನಾಲ್ಕೈದು ವಾರದಿಂದ ಬೆಲೆ ಹೆಚ್ಚುತ್ತಿದ್ದು, ಈಗ ಪ್ರತಿ ಕೆ.ಜಿಗೆ ₹60ರಂತೆ ಮಾರಾಟ ಮಾಡಲಾಗುತ್ತಿದೆ. ಈರುಳ್ಳಿ ಬಳಕೆ ಮಾಡುವುದಕ್ಕೂ ಗ್ರಾಹಕರು ಯೋಚಿಸುವಂತಾಗಿದೆ.

ನಾಲ್ಕು ವಾರದಿಂದ ಪ್ರತಿ ಕೆಜಿಗೆ ₹20 ರಿಂದ ₹30 ಇತ್ತು. ಎರಡು ವಾರಗಳಿಂದ ಪ್ರತಿ ಕೆಜಿಗೆ ₹50ಕ್ಕೆ ಏರಿಕೆಯಾಗಿತ್ತು. ಈಗ ಮತ್ತೇ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಲೆ ಏರಿಕೆಯಾಗಲಿದೆಯಾ ಎಂಬ ಆತಂಕ ಗ್ರಾಹಕರನ್ನು ಕಾಡುತ್ತಿದೆ.

ಮಾರುಕಟ್ಟೆಯಲ್ಲಿ ಈರುಳ್ಳಿಯ ಆವಕ ಕಡಿಮೆಯಾಗಿದೆ. ಬಹುತೇಕ ರೈತರ ಬಳಿ ಈರುಳ್ಳಿಯಿಲ್ಲ. ಪರಿಣಾಮ ಬೆಲೆಯ ಏರಿಕೆಯ ಲಾಭ ರೈತರಿಗೆ ದಕ್ಕುತ್ತಿಲ್ಲ. ಗ್ರಾಹಕರಿಗೆ ಮಾತ್ರ ಹೊರೆಯಾಗಿದೆ.

ರಾಜ್ಯದಲ್ಲಿ ಈರುಳ್ಳಿಯ ಪ್ರಮಾಣ ಕಡಿಮೆ ಇದೆ. ಮಹಾರಾಷ್ಟ್ರದಿಂದ ಹೆಚ್ಚಿನ ಈರುಳ್ಳಿ ಆವಕವಾಗುತ್ತಿತ್ತು. ಈ ಬಾರಿ ಆ ಪ್ರಮಾಣದಲ್ಲಿ ಆವಕವಾಗುತ್ತಿಲ್ಲ. ಬೇಡಿಕೆ ಮಾತ್ರ ಹಾಗೆಯೇ ಇದೆ. ಪರಿಣಾಮ ಈರುಳ್ಳಿಯ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಬಿತ್ತನೆಯೂ ಕಡಿಮೆ: ಮುಂಗಾರು ಮಳೆ ಚೆನ್ನಾಗಿ ಆಗದ್ದರಿಂದ ಈರುಳ್ಳಿ ಬೆಳೆಯ ಬಿತ್ತನೆ ಪ್ರಮಾಣ ಕಡಿಮೆಯಾಗಿದೆ.

ಜೂನ್‌ ಆರಂಭದಲ್ಲಿ ಬಿದ್ದ ಮಳೆಗೆ ಹಲವರು ಈರುಳ್ಳಿ ಬಿತ್ತನೆ ಮಾಡಿದ್ದರು. ನಂತರದಲ್ಲಿ ಮಳೆಯಾಗದ್ದರಿಂದ ಈರುಳ್ಳಿ ನೆಲಬಿಟ್ಟು ಏಳಲೇ ಇಲ್ಲ. ಅದನ್ನು ಕಿತ್ತು ಹೊಸದಾಗಿ ಮತ್ತೆ ಈರುಳ್ಳಿ ಬೆಳೆಯಲಾಗಿದೆ. ಮಳೆ ಕೊರತೆಯಿಂದ ಬೆಳವಣಿಗೆ ಕುಂಠಿತವಾಗಿದೆ. ಇದರ ಪರಿಣಾಮ ಇಳುವರಿಯ ಮೇಲೆಯೂ ಆಗಲಿದೆ.

‘ರಾಜ್ಯದಲ್ಲಿಯೂ ಈರುಳ್ಳಿ ಹೆಚ್ಚು ಬೆಳೆ ಬೆಳೆದಿಲ್ಲ. ಮಹಾರಾಷ್ಟ್ರದ ನಾಸಿಕ್‌ ಭಾಗದಲ್ಲಿಯೂ ಈ ಬಾರಿ ಈರುಳ್ಳಿ ಬೆಳೆ ಬಿತ್ತನೆ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಕೊರತೆಯಾಗುವ ಹಿನ್ನಲೆಯಲ್ಲಿ ಬೆಲೆ ಹೆಚ್ಚಾಗುತ್ತಿದೆ’ ಎಂದು ಈರುಳ್ಳಿ ವ್ಯಾಪಾರಿ ಅಬ್ದುಲ್‌ ಭಾಗವಾನ ಹೇಳಿದರು.

‘ಒಂದಾದ ಮೇಲೆ ಒಂದು ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇವೆ. ಅದಕ್ಕೆ ತಕ್ಕಂತೆ ಆದಾಯ ಹೆಚ್ಚಾಗುತ್ತಿಲ್ಲ. ಕುಟುಂಬ ಸಾಗಿಸುವುದಕ್ಕೆ ಕಷ್ಟಪಡಬೇಕಾದ ಸ್ಥಿತಿ ಇದೆ. ಬಡ ಹಾಗೂ ಮಧ್ಯಮ ವರ್ಗದವರ ಸಂಕಷ್ಟಕ್ಕೆ ಬೆಲೆ ಇಳಿಕೆ ಮೂಲಕ ಸ್ಪಂದಿಸುವ ಕೆಲಸ ಆಗಬೇಕಿದೆ’ ಎನ್ನುತ್ತಾರೆ ನವನಗರದ ಮಂಜುಳಾ ಪಾಟೀಲ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ