
ಕಾರ್ಕಳ ಪೆರ್ವಾಜೆ ಶಾಲೆಯಲ್ಲಿ ಕಣ್ಣಿನ ತಪಾಸಣೆ ಶಿಬಿರ ಆಯೋಜನೆ
ಕಾರ್ಕಳ: ಪೆರ್ವಾಜೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಕಳ ರೋಟರಿ ಕ್ಲಬ್, ಡಾ. ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಹಾಗೂ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ಕಣ್ಣಿನ ತಪಾಸಣೆ ಶಿಬಿರ ನಡೆಯಿತು.
ಶಿಬಿರದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಕೆ. ವಿಜೇಂದ್ರ ಕುಮಾರ್, ಸಹಾಯಕ ಗವರ್ನರ್ ಕೆ. ಸುರೇಶ್ ನಾಯಕ್, ಮಾಜಿ ಜಿಲ್ಲಾ ಗವರ್ನರ್ ಭರತೇಶ್ ಆದಿರಾಜ್, ಡಿಆರ್‌ಸಿಸಿ ಸುರೇಶ್ ಶೆಣೈ, ರೋಟರ‍್ಯಾಕ್ಟ್ ಕ್ಲಬ್ ಸಭಾಪತಿ ಬಾಲಕೃಷ್ಣ ದೇವಾಡಿಗ, ಅಧ್ಯಕ್ಷೆ ಪ್ರಾಪ್ತಿ ಪೂಜಾರಿ, ಕಾರ್ಯದರ್ಶಿ ಲಕ್ಷ್ಮಿಕಾಮತ್, ಆ್ಯನ್ಸ್ ಕ್ಲಬ್ ಅಧ್ಯಕ್ಷೆ ಜ್ಯೋತಿ ಶೆಟ್ಟಿ, ಕಾರ್ಯದರ್ಶಿ ಉದಯಕುಮಾರ್ ಕಡಂಬ, ಇಕ್ಬಾಲ್ ಅಹಮ್ಮದ್ ಪಾಲ್ಗೊಂಡಿದ್ದರು