
ನಾಳೆ ಕೊಪ್ಪಳ, ಕಿನ್ನಾಳದಲ್ಲಿ ವಿದ್ಯುತ್ ವ್ಯತ್ಯಯ
ಕೊಪ್ಪಳ: ಜೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗ ವ್ಯಾಪ್ತಿಗೆ ಬರುವ 110 ಕೆ.ವಿ ಕೊಪ್ಪಳ ಹಾಗೂ 33 ಕೆ.ವಿ ಕಿನ್ನಾಳ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣೆ ಕೆಲಸದ ನಿಮಿತ್ತ ಸೆ.12ರಂದು ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 2ರ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕೊಪ್ಪಳ ಉಪಕೇಂದ್ರದ ವ್ಯಾಪ್ತಿಯ ಕಾಮನೂರ, ಕೆಡಬ್ಲ್ಯುಎಸ್, ಎಸ್.ಜಿ.ಕಾಲೇಜು, ಬಗನಾಳ, ಬಸಾಪುರ, ಭಾಗ್ಯನಗರ, ಬನ್ನಿಕಟ್ಟಿ, ಗವಿಮಠ, ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಪಂಚಾಯಿತಿ, ಕಾಳಿದಾಸ ನಗರ, ಕಿನ್ನಾಳ ಫೀಡರ್ ವ್ಯಾಪ್ತಿಯ ದೇವಲಾಪುರ, ಕಿನ್ನಾಳ, ಓಜನಹಳ್ಳಿ, ಕಲಕೇರಿ, ಬುಡಶೆಟ್ನಾಳ, ಯತ್ನಟ್ಟಿ ಎನ್.ಜೆ.ವೈ ಪ್ರದೇಶದಲ್ಲಿ ವಿದ್ಯುತ್ ಇರುವುದಿಲ್ಲ.