ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ‘ಉದ್ಯೋಗ ನಿಧಿ’: ಸಂಪುಟ ಸಭೆ ನಿರ್ಣಯ

ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ‘ಉದ್ಯೋಗ ನಿಧಿ’: ಸಂಪುಟ ಸಭೆ ನಿರ್ಣಯ

ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಗೆ ‘ಉದ್ಯೋಗ ನಿಧಿ’: ಸಂಪುಟ ಸಭೆ ನಿರ್ಣಯ

ಬೆಂಗಳೂರು: ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸಲು ಕೈಗಾರಿಕೆಗಳಿಗೆ ನೆರವಾಗುವ ಉದ್ದೇಶದಿಂದ ‘ಉದ್ಯೋಗ ನಿಧಿ’ ಕಾರ್ಯಕ್ರಮ ಜಾರಿಗೆ ತರಲು ಸಂಪುಟ ಸಭೆ ನಿರ್ಣಯ ತೆಗೆದುಕೊಂಡಿದೆ.

ಬುಧವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ‘ರಾಜ್ಯದಲ್ಲಿ ಕಡಿಮೆ ಅಭಿವೃದ್ಧಿ ಹೊಂದಿದ 10 ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿಸುವ ಕೈಗಾರಿಕೆಗಳಿಗೆ ಪ್ರತಿ ಉದ್ಯೋಗಿಗೆ ತಿಂಗಳಿಗೆ ₹ 2,500 ಸಹಾಯಧನ ನೀಡಲಾಗುವುದು. ಎರಡೂವರೆ ವರ್ಷ ಈ ನೆರವು ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ₹ 300 ಕೋಟಿ ಮೀಸಲಿಡಲಾಗಿದೆ’ ಎಂದರು.

‘ಉದ್ಯೋಗ ನೀಡಿದ ಕಂಪನಿ ಉದ್ಯೋಗಿಯ ಭವಿಷ್ಯ ನಿಧಿ ಕಟ್ಟಬೇಕು. ಈಗಾಗಲೇ ಅಸ್ತಿತ್ವದಲ್ಲಿರುವ ಕಂಪನಿಗಳೂ ಉದ್ಯೋಗ ಸೃಷ್ಟಿ ಮಾಡಬಹುದು. ಬೆಳಗಾವಿ, ಯಾದಗಿರಿ, ಬೀದರ್, ರಾಯಚೂರು, ಕಲಬುರಗಿ, ಕೊಪ್ಪಳ, ವಿಜಯನಗರ, ಗದಗ, ಹಾವೇರಿ, ವಿಜಯಪುರ ಜಿಲ್ಲೆಗಳಿಗೆ ಈ ಕಾರ್ಯಕ್ರಮ ಅನ್ವಯ ಆಗಲಿದೆ. ಈ ಜಿಲ್ಲೆಗಳಲ್ಲಿ ಉದ್ಯೋಗ ಸೃಷ್ಟಿ ಆಗಬೇಕು ಎನ್ನುವುದು ಸರ್ಕಾರದ ಉದ್ದೇಶ’ ಎಂದರು.

‘ಹಿಂದುಳಿದ ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಡಿ.ಎಂ. ನಂಜುಂಡಪ್ಪ ಅವರ ನೇತೃತ್ವದ ಸಮಿತಿ ವರದಿ ನೀಡಿತ್ತು. ಇತ್ತೀಚೆಗೆ ಪ್ರೊ. ಗೋವಿಂದರಾವ್ ಸಮಿತಿ ವರದಿ ನೀಡಿದೆ. ಈ ವರದಿಯಲ್ಲಿ ಗುರುತಿಸಿದ ಹಿಂದುಳಿದ ಮತ್ತು ಅತ್ಯಂತ ಹಿಂದುಳಿದ ತಾಲ್ಲೂಕುಗಳಲ್ಲಿ ಕೈಗಾರಿಕೆ‌ಗಳನ್ನು ಸ್ಥಾಪಿಸಿ, ಉದ್ಯೋಗ ಸೃಜನೆಗೆ ಉತ್ತೇಜನ ನೀಡಲು ಈ ಕಾರ್ಯಕ್ರಮ ರೂಪಿಸಲಾಗಿದೆ’ ಎಂದರು.

‘ವೈಮಾಂತರಿಕ್ಷ, ರಕ್ಷಣೆ, ಆಟೋ‌ಮೊಬೈಲ್ಸ್, ಎಲೆಕ್ಟ್ರಾನಿಕ್ಸ್‌, ಟೆಲಿಮೆಡಿಸಿನ್, ಜೈವಿಕ ತಂತ್ರಜ್ಞಾನ ಉತ್ಪಾದನೆಯ ಕೈಗಾರಿಕೆಗಳನ್ನು ಹಿಂದುಳಿದ ಪ್ರದೇಶದಲ್ಲಿ ಸ್ಥಾಪಿಸಿದರೆ ಶೇ 10ರಷ್ಟು ಹಾಗೂ ಅತ್ಯಂತ ಹಿಂದುಳಿದ ಪ್ರದೇಶದಲ್ಲಿ ಸ್ಥಾಪಿಸಿದರೆ ಶೇ 20ರಷ್ಟು ಸಹಾಯಧನ ನೀಡಲಾಗುವುದು. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಎರಡು ತಾಲ್ಲೂಕುಗಳನ್ನು ಆಯ್ಕೆ ಮಾಡಿಕೊಳ್ಳಲು ಕಂಪನಿಗಳಿಗೆ ಅವಕಾಶವಿದೆ’ ಎಂದರು.

‘ಶಕ್ತಿ’ಗೆ ಸ್ಮಾರ್ಟ್‌ ಕಾರ್ಡ್: ‘ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ಯಡಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ನೀಡಲು‌ ತೀರ್ಮಾನಿಸಲಾಗಿದೆ. ಇದಕ್ಕೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ಎಂದು ಹೆಸರಿಸಲಾಗಿದ್ದು, ₹237 ಕೋಟಿ ಖರ್ಚಾಗಲಿದೆ.‌ ಈ ಮೊತ್ತದಲ್ಲಿ ₹100 ಕೋಟಿ ಸರ್ಕಾರ ನೀಡಲಿದೆ. ಪಿಪಿಪಿ ಮಾದರಿಯಲ್ಲಿ ಕಾರ್ಡ್‌ ನೀಡಲಾಗುವುದು. ಕಾರ್ಡ್ ಉಚಿತವಾಗಿ ನೀಡಲಾಗುವುದು’ ಎಂದು ಪರಮೇಶ್ವರ ಹೇಳಿದರು.

‘ತೇಗ ಸಿರಿ’ ಯೋಜನೆ: ಮುಖ್ಯ ರಸ್ತೆಯ ಪಕ್ಕದ ಜಮೀನಿನ ರೈತರಿಗೆ ತೇಗದ ಸಸಿ ನೀಡುವ ‘ತೇಗ ಸಿರಿ’ ಯೋಜನೆ ಜಾರಿಗೆ ಸಂಪುಟ ಅನುಮೋದನೆ ನೀಡಿದೆ. ಇದಕ್ಕೆ ‘ವೃಕ್ಷ ಪಟ್ಟಾ’ ಎಂದು ಹೆಸರಿಡಲಾಗಿದೆ. ‘ರೈತರಿಗೆ ಸರ್ಕಾರದಿಂದಲೇ ತೇಗದ ಸಸಿ ನೀಡಲಾಗುವುದು. ಸಸಿಗಳನ್ನು ರೈತರು ಪೋಷಿಸುವ ಜೊತೆಗೆ 15 ವರ್ಷದವರೆಗೆ ಕಡಿಯುವಂತಿಲ್ಲ. ಮರ ಮಾರಾಟದ ಹಣದಲ್ಲಿ ಶೇ 70ರಷ್ಟು ರೈತನಿಗೆ ಸಿಗಲಿದೆ. ಮರವನ್ನು ಸರ್ಕಾರ ಅಥವಾ ಖಾಸಗಿಯವರಿಗೆ ಮಾರಬಹುದು. ಈ ಯೋಜನೆಗೆ ₹ 493 ಕೋಟಿ ವೆಚ್ಚ ಮಾಡಲು ತೀರ್ಮಾನಿಸಲಾಗಿದೆ’ ಎಂದು ಪರಮೇಶ್ವರ ಹೇಳಿದರು.

ವಿದ್ಯಾರ್ಥಿ ಚುನಾವಣೆಗೆ ಅಸ್ತು

ಬಜೆಟ್‌ನಲ್ಲಿ ಈಗಾಗಲೇ ಘೋಷಿಸಿದಂತೆ, ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಪ್ರಜಾಪ್ರಭುತ್ವ ಮೌಲ್ಯ ಬೆಳೆಸುವ ಉದ್ದೇಶದಿಂದ ‘ವಿದ್ಯಾರ್ಥಿ ಚುನಾವಣೆ’ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿದ್ಯಾರ್ಥಿ ಅಧ್ಯಕ್ಷ, ಉಪಾಧ್ಯಕ್ಷರು 2 (1 ಮಹಿಳೆ), ಪ್ರಧಾನ ಕಾರ್ಯದರ್ಶಿ 1, ಜಂಟಿ ಕಾರ್ಯದರ್ಶಿ 2 (1 ಮಹಿಳೆ), ಕಾರ್ಯಕಾರಿ ಸದಸ್ಯರು 6 (2 ಮಹಿಳೆಯರು) ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು. ಚುನಾವಣೆ ನಡೆಸುವುದರ ಬಗ್ಗೆ ವಿದ್ಯಾರ್ಥಿಗಳು ಅಂತಿಮ ತೀರ್ಮಾನ ತೆಗೆದುಕೊಳ್ಳಬಹುದು’ ಎಂದು ಪರಮೇಶ್ವರ ಹೇಳಿದರು.

‘ವಿದ್ಯಾರ್ಥಿ ಚುನಾವಣೆ ನಡೆಸುವಂತೆ ಶಿಫಾರಸು ಮಾಡಲು ಸಚಿವ‌ ಶರಣ‌ಪ್ರಕಾಶ‌ ಪಾಟೀಲರ ಅಧ್ಯಕ್ಷತೆಯಲ್ಲಿ‌ ಸಮಿತಿ‌ ರಚಿಸಲಾಗಿತ್ತು. ಈ ಸಮಿತಿಯ ವರದಿ ಆಧರಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಚುನಾವಣೆಯಲ್ಲಿ ಯಾವುದೇ ವಿದ್ಯಾರ್ಥಿ ಸಂಘಟನೆ ಅಥವಾ ರಾಜಕೀಯ ಪಕ್ಷಗಳಿಗೆ ಭಾಗವಹಿಸಲು ಅವಕಾಶ ಇರುವುದಿಲ್ಲ. ಬೇರೆಯವರನ್ನು ಕರೆಸಿ ಭಾಷಣ ಮಾಡಿಸುವಂತೆಯೂ ಇಲ್ಲ. ಪ್ರಸಕ್ತ ಸಾಲಿನಿಂದಲೇ ಚುನಾವಣೆ ಆರಂಭವಾಗಲಿದೆ’ ಎಂದರು.

ನೂತನ ಜವಳಿ ನೀತಿಗೆ ಒಪ್ಪಿಗೆ

ನೂತನ ‘ಜವಳಿ ಮತ್ತು ಸಿದ್ಧ ಉಡುಪು ನೀತಿ 2026–31’ಕ್ಕೆ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ನೀತಿಯ ಮೂಲಕ ಮುಂದಿನ ಐದು ವರ್ಷಗಳಲ್ಲಿ ₹20 ಸಾವಿರ ಕೋಟಿ ಬಂಡವಾಳ ಹೂಡಿಕೆ ಆಕರ್ಷಣೆಯ ಗುರಿ ಹೊಂದಲಾಗಿದೆ. ಜವಳಿ ಉದ್ಯಮಗಳು ಹೆಚ್ಚಾಗಿ ಬೆಂಗಳೂರಿನಲ್ಲೇ ಇವೆ. ಈ ಉದ್ಯಮಗಳು ಬೇರೆ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿಯೂ ಕಾರ್ಯನಿರ್ವಹಿಸಬೇಕು ಎಂಬ ಉದ್ದೇಶ ಹೊಂದಲಾಗಿದ್ದು, ಈ ನೀತಿಯಡಿ 33 ತಾಲ್ಲೂಕುಗಳಲ್ಲಿ ಸರ್ಕಾರದಿಂದ ಸಹಾಯಧನ ನೀಡಲಾಗುವುದು’ ಎಂದರು.

‘ಹಿಂದೆಯೂ ನೀತಿ ಇತ್ತು. ಆದರೆ, ಅದರಲ್ಲಿ ರೇಷ್ಮೆ ಉದ್ಯಮ ಸೇರಿರಲಿಲ್ಲ. ಈ ಬಾರಿ ಅದನ್ನೂ ಸೇರಿಸಿದ್ದೇವೆ. ಹೊಸ ನೀತಿಯಡಿ ಸರ್ಕಾರ ₹ 4 ಸಾವಿರ ಕೋಟಿ ಹೂಡಿಕೆ ಮಾಡಲಿದೆ’ ಎಂದರು.

ಸಂಪುಟ ಸಭೆಯ ಇತರ ನಿರ್ಣಯಗಳು

  • ಬೆಂಗಳೂರಿನ ಖನಿಜ ಭವನದಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಆನ್‌ಲೈನ್ ವಿವಾದ ಪರಿಹಾರ ವೇದಿಕೆ ಸ್ಥಾಪನೆ

  • ತಾಲ್ಲೂಕು ಕೇಂದ್ರಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು, ಪ್ರತಿ ತಾಲ್ಲೂಕುಗಳಲ್ಲಿ ರಿಂಗ್ ರೋಡ್ (ಹೊರವರ್ತುಲ ರಸ್ತೆ) ನಿರ್ಮಾಣ. 172 ಸ್ಥಳೀಯ ಯೋಜನಾ ಪ್ರದೇಶಗಳಲ್ಲಿ ಯೋಜನೆ ಜಾರಿಗೆ ಒಪ್ಪಿಗೆ

  • ₹20.39 ಕೋಟಿ ವೆಚ್ಚದಲ್ಲಿ 50 ತಾಲ್ಲೂಕುಗಳಲ್ಲಿ ಶ್ರವಣ ಶಸ್ತ್ರಚಿಕಿತ್ಸೆ, ಶ್ರವಣ ದೋಷ ಇರುವವರ ತಪಾಸಣೆಗೆ ಅಗತ್ಯ ಉಪಕರಣ‌ಗಳ ಖರೀದಿ

  • ‘ಭಾರತ್ ಜೋಡೊ’ ಯುವ ಸಂಘದ ಸದಸ್ಯತ್ವ ನೋಂದಣಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತವಾಗಿತ್ತು. ‌ಸದಸ್ಯತ್ವ ನೋಂದಣಿ ಮಂಗಳವಾರದಿಂದ ಮತ್ತೆ ಆರಂಭ. ಎಲ್ಲ ಜಿಲ್ಲಾಧಿಕಾರಿಗಳಿಗೆ ಅರ್ಜಿ ಕಳುಹಿಸಲಾಗುವುದು. ಸದ್ಯ 7.36 ಲಕ್ಷ ಸಂಘಗಳು ನೋಂದಣಿ ಆಗಿವೆ. 10 ಲಕ್ಷ ನೋಂದಣಿ ಆದ ನಂತರ ಚಾಲನೆ ನೀಡಲಾಗುವುದು.

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೊನಿ ಅಭಿವೃದ್ಧಿಪಡಿಸಲು ನಿರ್ಧಾರ

  • ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದಾದ್ಯಂತ 10 ಸಾವಿರ ಕ್ಯಾಬ್ ವಾಹನ ಸಹಾಯಧನದಡಿ ವಿತರಣೆ

  • ದೇಶದಲ್ಲಿ‌ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ‌ ₹42.83 ಕೋಟಿ ವೆಚ್ಚದಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಆರಂಭ

  • ಕೃತಕ ಬುದ್ದಿಮತ್ತೆ (ಎಐ) ವಿಶ್ವವಿದ್ಯಾಲಯ ಆರಂಭಿಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ಅದಕ್ಕೆ‌ ಪೂರಕವಾಗಿ ಐಐಐಟಿಯಲ್ಲಿ ₹ 35 ಕೋಟಿಯಲ್ಲಿ ಎಐ ಹಬ್ ಆರಂಭಿಸಲಾಗುವುದು

ಬೆಂಗಳೂರಿನ ಖನಿಜ ಭವನದಲ್ಲಿ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಆನ್‌ಲೈನ್ ವಿವಾದ ಪರಿಹಾರ ವೇದಿಕೆ ಸ್ಥಾಪನೆ

ತಾಲ್ಲೂಕು ಕೇಂದ್ರಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸಲು, ಪ್ರತಿ ತಾಲ್ಲೂಕುಗಳಲ್ಲಿ ರಿಂಗ್ ರೋಡ್ (ಹೊರವರ್ತುಲ ರಸ್ತೆ) ನಿರ್ಮಾಣ. 172 ಸ್ಥಳೀಯ ಯೋಜನಾ ಪ್ರದೇಶಗಳಲ್ಲಿ ಯೋಜನೆ ಜಾರಿಗೆ ಒಪ್ಪಿಗೆ

₹20.39 ಕೋಟಿ ವೆಚ್ಚದಲ್ಲಿ 50 ತಾಲ್ಲೂಕುಗಳಲ್ಲಿ ಶ್ರವಣ ಶಸ್ತ್ರಚಿಕಿತ್ಸೆ, ಶ್ರವಣ ದೋಷ ಇರುವವರ ತಪಾಸಣೆಗೆ ಅಗತ್ಯ ಉಪಕರಣ‌ಗಳ ಖರೀದಿ

‘ಭಾರತ್ ಜೋಡೊ’ ಯುವ ಸಂಘದ ಸದಸ್ಯತ್ವ ನೋಂದಣಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತವಾಗಿತ್ತು. ‌ಸದಸ್ಯತ್ವ ನೋಂದಣಿ ಮಂಗಳವಾರದಿಂದ ಮತ್ತೆ ಆರಂಭ. ಎಲ್ಲ ಜಿಲ್ಲಾಧಿಕಾರಿಗಳಿಗೆ ಅರ್ಜಿ ಕಳುಹಿಸಲಾಗುವುದು. ಸದ್ಯ 7.36 ಲಕ್ಷ ಸಂಘಗಳು ನೋಂದಣಿ ಆಗಿವೆ. 10 ಲಕ್ಷ ನೋಂದಣಿ ಆದ ನಂತರ ಚಾಲನೆ ನೀಡಲಾಗುವುದು.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಾಲೊನಿ ಅಭಿವೃದ್ಧಿಪಡಿಸಲು ನಿರ್ಧಾರ

ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ರಾಜ್ಯದಾದ್ಯಂತ 10 ಸಾವಿರ ಕ್ಯಾಬ್ ವಾಹನ ಸಹಾಯಧನದಡಿ ವಿತರಣೆ

ದೇಶದಲ್ಲಿ‌ ಮೊದಲ ಬಾರಿಗೆ ಚಿಕ್ಕಬಳ್ಳಾಪುರದಲ್ಲಿ‌ ₹42.83 ಕೋಟಿ ವೆಚ್ಚದಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಆರಂಭ

ಕೃತಕ ಬುದ್ದಿಮತ್ತೆ (ಎಐ) ವಿಶ್ವವಿದ್ಯಾಲಯ ಆರಂಭಿಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ಅದಕ್ಕೆ‌ ಪೂರಕವಾಗಿ ಐಐಐಟಿಯಲ್ಲಿ ₹ 35 ಕೋಟಿಯಲ್ಲಿ ಎಐ ಹಬ್ ಆರಂಭಿಸಲಾಗುವುದು

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ