
ಬೈಂದೂರಿನಲ್ಲಿ ಪುಟಾಣಿಗಳಿಂದ ರಾಧಾ ಕೃಷ್ಣ ನೃತ್ಯ ಕಾರ್ಯಕ್ರಮ
ಬೈಂದೂರು: ಸೇವಾ ಸಂಗಮ ಶಿಶು ಮಂದಿರದ ಪುಟಾಣಿಗಳಿಂದ 42ನೇ ವರ್ಷದ ಮುದ್ದು ರಾಧಾ ಕೃಷ್ಣ ನೃತ್ಯ ಕಾರ್ಯಕ್ರಮ ಶಾರದಾ ವೇದಿಕೆಯಲ್ಲಿ ನಡೆಯಿತು.
ಮುಖ್ಯ ಶಿಕ್ಷಕ ಪ್ರಕಾಶ್ ಮಾಕೋಡಿ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣದ ಜೊತೆಗೆ ಸಂಸ್ಕಾರಯುತ ಶಿಕ್ಷಣವು ಶಿಶುಮಂದಿರದಲ್ಲಿ ಸಿಗುತ್ತಿದೆ ಎಂದರು.
ಕುಂದಾಪುರ ಸೇವಾ ಸಂಗಮ ಟ್ರಸ್ಟ್ ವಿಶ್ವಸ್ಥ ಕಾಶಿನಾಥ್ ಪೈ ಗಂಗೊಳ್ಳಿ, ಮಕ್ಕಳಿಗೆ ಬಾಲ್ಯದಲ್ಲೇ ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಕಲಿಸಿದರೆ ಮುಂದೆ ಒಳ್ಳೆಯ ವ್ಯಕ್ತಿಯಾಗಿ ಸಮಾಜದಲ್ಲಿ ಬೆಳೆಯುತ್ತಾರೆ ಎಂದರು. ಮಾತಾಜಿ ಸುಜಾತಾ, ಮಾತಾಜಿ ಸೌಮ್ಯ, ಸುಮನಾ ಉಪಸ್ಥಿತರಿದ್ದರು.
ಸೇವಾ ಸಂಗಮದ ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ರಾಜೇಶ್ ಐತಾಳ್, ಸದಸ್ಯರಾದ ದಿನೇಶ್ ಕೆ., ರವೀಂದ್ರ ಶಾನುಭೋಗ್ ಇದ್ದರು. ನಿರ್ಮಲಾ ರವೀಂದ್ರ ಕಿಣಿ ಸ್ವಾಗತಿಸಿದರು. ಆಶಾ ಕಿಶೋರ್ ವಂದಿಸಿದರು. ಆಶಾ ದಿನೇಶ್ ನಿರೂಪಿಸಿದರು. ಮಕ್ಕಳಿಂದ ನೃತ್ಯ ವೈವಿಧ್ಯ ನಡೆಯಿತು.