ಸೌಜನ್ಯಾ ಪ್ರಕರಣ: ನಾಪತ್ತೆಯಿಂದ ಸುಪ್ರೀಂ ಕೋರ್ಟ್‌ ಆದೇಶದವರೆಗೆ..

ಸೌಜನ್ಯಾ ಪ್ರಕರಣ: ನಾಪತ್ತೆಯಿಂದ ಸುಪ್ರೀಂ ಕೋರ್ಟ್‌ ಆದೇಶದವರೆಗೆ..

ಸೌಜನ್ಯಾ ಪ್ರಕರಣ: ನಾಪತ್ತೆಯಿಂದ ಸುಪ್ರೀಂ ಕೋರ್ಟ್‌ ಆದೇಶದವರೆಗೆ..

ಧರ್ಮಸ್ಥಳದ ಪಿಯುಸಿ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಅದಕ್ಕಾಗಿ ಮೂರು ತಿಂಗಳ ಗಡುವನ್ನೂ ನೀಡಿದೆ. ಸೌಜನ್ಯಾ ತಾಯಿ ಕುಸುಮಾವತಿ ಅವರ ಅರ್ಜಿಯನ್ನು ವಿಚಾರಣೆ ನಡೆಸಿದ ಕೋರ್ಟ್‌ ಈ ಆದೇಶ ನೀಡಿದೆ. ಈ ಮೂಲಕ 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ ಬಂದಿದೆ.
  • 2012, ಅಕ್ಟೋಬರ್‌ 9: ಉಜಿರೆಯ ಎಸ್‌ಡಿಎಂ ಕಾಲೇಜಿನಿಂದ ಬಸ್‌ನಲ್ಲಿ ಬಂದ ಸೌಜನ್ಯ ಸಂಜೆ 4.15ಕ್ಕೆ ಧರ್ಮಸ್ಥಳದ ಸ್ನಾನಘಟ್ಟದ ಬಳಿಯ ಮಣ್ಣಸಂಕದಲ್ಲಿ ಇಳಿದು ಪಾಂಗಳದಲ್ಲಿರುವ ಮನೆಯತ್ತ ಹೊರಟಿದ್ದಾಗ ನಾಪತ್ತೆ. ಅದೇ ದಿನ ರಾತ್ರಿ 11 ಗಂಟೆಗೆ ತಂದೆ ಚಂದಪ್ಪ ಗೌಡ ಅವರಿಂದ ಬೆಳ್ತಂಗಡಿ ಪೊಲೀಸರಿಗೆ ದೂರು, ಎಫ್‌ಐಆರ್‌ ದಾಖಲು    

  • 2012, ಅಕ್ಟೋಬರ್‌ 10: ಸೌಜನ್ಯಳಿಗಾಗಿ ಮನೆಯವರು, ಸಂಬಂಧಿಕರಿಂದ ಸ್ನಾನಘಟ್ಟ, ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ. ಮಧ್ಯಾಹ್ನ 12.30ರ ಸುಮಾರಿಗೆ ಮಣ್ಣಸಂಕದಲ್ಲಿ ಪೊದೆಗಳ ನಡುವೆ ಸೌಜನ್ಯಳ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆ. ಆಕೆಯ ಸಮವಸ್ತ್ರ ಹರಿದಿತ್ತು. ಕೈಗಳನ್ನು ಸಮವಸ್ತ್ರದ ಶಾಲಿನಿಂದ ಮರಕ್ಕೆ ಕಟ್ಟಿಹಾಕಲಾಗಿತ್ತು. ನಾಲ್ಕೈದು ಮಂದಿ ಆಕೆಯನ್ನು ಎಳೆದೊಯ್ದು, ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಕೃತ್ಯ ಎಸಗುವಾಗ ಆಕೆ ತೀವ್ರವಾಗಿ ಪ್ರತಿರೋಧ ತೋರಿದ್ದಳು ಎಂಬುದಕ್ಕೆ ಹಲವು ಸುಳಿವುಗಳು ಆಕೆಯ ದೇಹ ಪತ್ತೆಯಾಗಿದ್ದ ಸ್ಥಳದಲ್ಲಿ ಸಿಕ್ಕಿದ್ದವು.

    ವಿದ್ಯಾರ್ಥಿನಿಯ ಕೊಲೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಸಮುದಾಯದಿಂದ ವ್ಯಾಪಕ ಆಕ್ರೋಶ.

  • 2012, ಅಕ್ಟೋಬರ್‌ 13: ಸಂತೋಷ್‌ ರಾವ್‌ ಬಂಧನ, ವಿಚಾರಣೆಯ ವೇಳೆ, ಕೃತ್ಯ ಎಸಗಿರುವುದರ ಬಗ್ಗೆ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರಿಂದ ಹೇಳಿಕೆ. ಆದರೆ, ಸೌಜನ್ಯ ಪೋಷಕರಿಂದ ಇದರ ನಿರಾಕರಣೆ

  • 2012, ಡಿಸೆಂಬರ್‌ 12: ಸಾರ್ವಜನಿಕವಾಗಿಯೂ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಸಿಐಡಿ) ವಹಿಸಿ ರಾಜ್ಯ ಸರ್ಕಾರದ ಆದೇಶ. ತನಿಖೆ ನಡೆಸಿದ ಸಿಐಡಿಯಿಂದ ಸಂತೋಷ್‌ ರಾವ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ. ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಸಾಕ್ಷ್ಯಗಳನ್ನೂ ನಾಶ ಮಾಡಿದ್ದಾರೆ ಎಂದು ಉಲ್ಲೇಖ

  • 2013 ನವೆಂಬರ್‌ 6: ತನಿಖೆ ನ್ಯಾಯಯುತವಾಗಿ ನಡೆದಿಲ್ಲ ಎಂದು ಸೌಜನ್ಯ ಕುಟುಂಬದವರು ಮತ್ತು ಸಾರ್ವಜನಿಕರ ಆಕ್ರೋಶದ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ  

  • 2014ರ ಮಾರ್ಚ್‌ 7: ಎಫ್‌ಐಆರ್‌ ದಾಖಲಿಸಿಕೊಂಡ ಸಿಬಿಐ. ಪ್ರಕರಣದ ಇತರ ಶಂಕಿತರಾದ ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌ ಮತ್ತು ಉದಯ ಕುಮಾರ್ ಜೈನ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಬಿಐ ಅಧಿಕಾರಿಗಳು, ಸುಳ್ಳು ಪತ್ತೆ ಪರೀಕ್ಷೆ, ಬ್ರೈನ್‌ ಮ್ಯಾಪಿಂಗ್‌ ನಡೆಸಿದ್ದರು. ತನಿಖೆಯಲ್ಲಿ ಈ ಮೂವರನ್ನು ದೋಷಮುಕ್ತಗೊಳಿಸಿದ್ದ  ಸಿಬಿಐ, ಸಂತೋಷ್‌ ರಾವ್‌ ಅವರೇ ಕೃತ್ಯ ಎಸಗಿದ್ದಾರೆ ಎಂದು ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ 

  • 2016, ನವೆಂಬರ್‌ 11: ವಿಚಾರಣೆಯ ಹಂತದಲ್ಲಿ ಸೌಜನ್ಯ ಕುಟುಂಬದವರು (ತಾಯಿ), ಪ್ರಕರಣದಲ್ಲಿ ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌ ಮತ್ತು ಉದಯ ಕುಮಾರ್ ಜೈನ್‌ ಅವರು ಭಾಗಿಯಾಗಿದ್ದಾರೆ ಎಂದು ಹೇಳಲು ದಾಖಲೆಗಳಿದ್ದು, ಅವರಿಗೆ ಸಮನ್ಸ್‌ ನೀಡಲು ಮನವಿ ಮಾಡಿ ಸಲ್ಲಿದ್ದ ರಿಟ್‌ ಅರ್ಜಿಯನ್ನು ಮಾನ್ಯ ಮಾಡಿದ ಸಿಬಿಐ ಸೆಷನ್ಸ್‌ ಕೋರ್ಟ್‌ನಿಂದ ಮೂವರಿಗೂ ಸಮನ್ಸ್‌ ಜಾರಿ. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೂವರಿಂದ ಅರ್ಜಿ 

  • 2021, ಜನವರಿ 27: ಪ್ರಕರಣದ ಮರು ತನಿಖೆಗೆ ಕೋರಿ ಸೌಜನ್ಯ ಕುಟುಂಬ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌; ಈ ಮೂವರು ‌ಸಲ್ಲಿಸಿದ ಅರ್ಜಿ ಮಾನ್ಯ 

  • 2021, ಅಕ್ಟೋಬರ್‌ 4: ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ, ಸಿಬಿಐ‌ನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರು ಮಲ್ಲಿಕ್‌ ಜೈನ್‌, ಧೀರಜ್‌ ಜೈನ್‌ ಮತ್ತು ಉದಯ್‌ ಜೈನ್‌ ಅವರನ್ನೂ ಮೂಲ ದಾವೆಯಲ್ಲಿ ಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ಸೆಷನ್ಸ್‌ ಕೋರ್ಟ್‌

  • 2023, ಜೂನ್‌ 16: ಆರೋಪಿ ಸಂತೋಷ್‌ ರಾವ್‌ ನಿರ್ದೋಷಿ ಎಂದು ಘೋಷಿಸಿದ ಸಿಬಿಐ ಕೋರ್ಟ್‌. ‘ಕೃತ್ಯವನ್ನು ಸಂತೋಷ್‌ ರಾವ್‌ ಎಸಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಸಿಬಿಐ ವಿಫಲವಾಗಿದೆ. ಆರೋಪಿಯೇ ಕೃತ್ಯ ಎಸಗಿದ್ದಾರೆ ಎಂದು ಹೇಳುವುದಕ್ಕೆ ಯಾವ ಸಾಕ್ಷ್ಯವೂ ಇಲ್ಲ’ ಎಂದು ಹೇಳಿಕೆ. ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲೂ ಸೂಚನೆ. ‘ಗೋಲ್ಡನ್‌ ಅವರ್‌’ನಲ್ಲಿ ತನಿಖೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಆಕ್ಷೇಪ 

  • 2024, ಆಗಸ್ಟ್‌ 30: ವಿಶೇಷ ತನಿಖಾ ತಂಡದ ಮೂಲಕ ಪ್ರಕರಣದ ಮರುತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಸೌಜನ್ಯ ಕುಟುಂಬ ಸಲ್ಲಿಸಿದ್ದ ಅರ್ಜಿ ಹಾಗೂ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಸಿಬಿಐ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ಹೈಕೋರ್ಟ್‌. ಆದರೆ, ಈ ಕೃತ್ಯವನ್ನು ಸಂತೋಷ್‌ ರಾವ್‌ ಎಸಗಿಲ್ಲ ಎಂದಾದರೆ, ಬೇರೆ ಯಾರಾದರೂ ಮಾಡಿರಲೇ ಬೇಕು. ಹಾಗಾಗಿ, ಈ ಪ್ರಕರಣವನ್ನು ಮರುತನಿಖೆ ಮಾಡುವ ಅಗತ್ಯವಿದೆ ಎಂದು ಪ್ರತಿಪಾದನೆ

  • 2026: ಸೌಜನ್ಯ ತಾಯಿಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ; ಮರುತನಿಖೆಗೆ ಕೋರಿಕೆ

2012, ಅಕ್ಟೋಬರ್‌ 9: ಉಜಿರೆಯ ಎಸ್‌ಡಿಎಂ ಕಾಲೇಜಿನಿಂದ ಬಸ್‌ನಲ್ಲಿ ಬಂದ ಸೌಜನ್ಯ ಸಂಜೆ 4.15ಕ್ಕೆ ಧರ್ಮಸ್ಥಳದ ಸ್ನಾನಘಟ್ಟದ ಬಳಿಯ ಮಣ್ಣಸಂಕದಲ್ಲಿ ಇಳಿದು ಪಾಂಗಳದಲ್ಲಿರುವ ಮನೆಯತ್ತ ಹೊರಟಿದ್ದಾಗ ನಾಪತ್ತೆ. ಅದೇ ದಿನ ರಾತ್ರಿ 11 ಗಂಟೆಗೆ ತಂದೆ ಚಂದಪ್ಪ ಗೌಡ ಅವರಿಂದ ಬೆಳ್ತಂಗಡಿ ಪೊಲೀಸರಿಗೆ ದೂರು, ಎಫ್‌ಐಆರ್‌ ದಾಖಲು    

2012, ಅಕ್ಟೋಬರ್‌ 10: ಸೌಜನ್ಯಳಿಗಾಗಿ ಮನೆಯವರು, ಸಂಬಂಧಿಕರಿಂದ ಸ್ನಾನಘಟ್ಟ, ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಾಟ. ಮಧ್ಯಾಹ್ನ 12.30ರ ಸುಮಾರಿಗೆ ಮಣ್ಣಸಂಕದಲ್ಲಿ ಪೊದೆಗಳ ನಡುವೆ ಸೌಜನ್ಯಳ ಮೃತದೇಹ ಅರೆನಗ್ನ ಸ್ಥಿತಿಯಲ್ಲಿ ಪತ್ತೆ. ಆಕೆಯ ಸಮವಸ್ತ್ರ ಹರಿದಿತ್ತು. ಕೈಗಳನ್ನು ಸಮವಸ್ತ್ರದ ಶಾಲಿನಿಂದ ಮರಕ್ಕೆ ಕಟ್ಟಿಹಾಕಲಾಗಿತ್ತು. ನಾಲ್ಕೈದು ಮಂದಿ ಆಕೆಯನ್ನು ಎಳೆದೊಯ್ದು, ಸಾಮೂಹಿಕ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಕೃತ್ಯ ಎಸಗುವಾಗ ಆಕೆ ತೀವ್ರವಾಗಿ ಪ್ರತಿರೋಧ ತೋರಿದ್ದಳು ಎಂಬುದಕ್ಕೆ ಹಲವು ಸುಳಿವುಗಳು ಆಕೆಯ ದೇಹ ಪತ್ತೆಯಾಗಿದ್ದ ಸ್ಥಳದಲ್ಲಿ ಸಿಕ್ಕಿದ್ದವು.

ವಿದ್ಯಾರ್ಥಿನಿಯ ಕೊಲೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು, ಸಮುದಾಯದಿಂದ ವ್ಯಾಪಕ ಆಕ್ರೋಶ.

2012, ಅಕ್ಟೋಬರ್‌ 13: ಸಂತೋಷ್‌ ರಾವ್‌ ಬಂಧನ, ವಿಚಾರಣೆಯ ವೇಳೆ, ಕೃತ್ಯ ಎಸಗಿರುವುದರ ಬಗ್ಗೆ ಅವರು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರಿಂದ ಹೇಳಿಕೆ. ಆದರೆ, ಸೌಜನ್ಯ ಪೋಷಕರಿಂದ ಇದರ ನಿರಾಕರಣೆ

2012, ಡಿಸೆಂಬರ್‌ 12: ಸಾರ್ವಜನಿಕವಾಗಿಯೂ ಸರ್ಕಾರದ ಮೇಲೆ ಹೆಚ್ಚಿದ ಒತ್ತಡ. ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಸಿಐಡಿ) ವಹಿಸಿ ರಾಜ್ಯ ಸರ್ಕಾರದ ಆದೇಶ. ತನಿಖೆ ನಡೆಸಿದ ಸಿಐಡಿಯಿಂದ ಸಂತೋಷ್‌ ರಾವ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ. ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ. ಸಾಕ್ಷ್ಯಗಳನ್ನೂ ನಾಶ ಮಾಡಿದ್ದಾರೆ ಎಂದು ಉಲ್ಲೇಖ

2013 ನವೆಂಬರ್‌ 6: ತನಿಖೆ ನ್ಯಾಯಯುತವಾಗಿ ನಡೆದಿಲ್ಲ ಎಂದು ಸೌಜನ್ಯ ಕುಟುಂಬದವರು ಮತ್ತು ಸಾರ್ವಜನಿಕರ ಆಕ್ರೋಶದ ಬಳಿಕ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ ರಾಜ್ಯ ಸರ್ಕಾರ  

2014ರ ಮಾರ್ಚ್‌ 7: ಎಫ್‌ಐಆರ್‌ ದಾಖಲಿಸಿಕೊಂಡ ಸಿಬಿಐ. ಪ್ರಕರಣದ ಇತರ ಶಂಕಿತರಾದ ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌ ಮತ್ತು ಉದಯ ಕುಮಾರ್ ಜೈನ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಸಿಬಿಐ ಅಧಿಕಾರಿಗಳು, ಸುಳ್ಳು ಪತ್ತೆ ಪರೀಕ್ಷೆ, ಬ್ರೈನ್‌ ಮ್ಯಾಪಿಂಗ್‌ ನಡೆಸಿದ್ದರು. ತನಿಖೆಯಲ್ಲಿ ಈ ಮೂವರನ್ನು ದೋಷಮುಕ್ತಗೊಳಿಸಿದ್ದ  ಸಿಬಿಐ, ಸಂತೋಷ್‌ ರಾವ್‌ ಅವರೇ ಕೃತ್ಯ ಎಸಗಿದ್ದಾರೆ ಎಂದು ಬೆಂಗಳೂರಿನ ಸಿಬಿಐ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಕೆ 

2016, ನವೆಂಬರ್‌ 11: ವಿಚಾರಣೆಯ ಹಂತದಲ್ಲಿ ಸೌಜನ್ಯ ಕುಟುಂಬದವರು (ತಾಯಿ), ಪ್ರಕರಣದಲ್ಲಿ ಧೀರಜ್‌ ಜೈನ್‌, ಮಲ್ಲಿಕ್‌ ಜೈನ್‌ ಮತ್ತು ಉದಯ ಕುಮಾರ್ ಜೈನ್‌ ಅವರು ಭಾಗಿಯಾಗಿದ್ದಾರೆ ಎಂದು ಹೇಳಲು ದಾಖಲೆಗಳಿದ್ದು, ಅವರಿಗೆ ಸಮನ್ಸ್‌ ನೀಡಲು ಮನವಿ ಮಾಡಿ ಸಲ್ಲಿದ್ದ ರಿಟ್‌ ಅರ್ಜಿಯನ್ನು ಮಾನ್ಯ ಮಾಡಿದ ಸಿಬಿಐ ಸೆಷನ್ಸ್‌ ಕೋರ್ಟ್‌ನಿಂದ ಮೂವರಿಗೂ ಸಮನ್ಸ್‌ ಜಾರಿ. ಈ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಮೂವರಿಂದ ಅರ್ಜಿ 

2021, ಜನವರಿ 27: ಪ್ರಕರಣದ ಮರು ತನಿಖೆಗೆ ಕೋರಿ ಸೌಜನ್ಯ ಕುಟುಂಬ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್‌; ಈ ಮೂವರು ‌ಸಲ್ಲಿಸಿದ ಅರ್ಜಿ ಮಾನ್ಯ 

2021, ಅಕ್ಟೋಬರ್‌ 4: ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ, ಸಿಬಿಐ‌ನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರು ಮಲ್ಲಿಕ್‌ ಜೈನ್‌, ಧೀರಜ್‌ ಜೈನ್‌ ಮತ್ತು ಉದಯ್‌ ಜೈನ್‌ ಅವರನ್ನೂ ಮೂಲ ದಾವೆಯಲ್ಲಿ ಸೇರ್ಪಡೆಗೆ ಅವಕಾಶ ನೀಡಬೇಕು ಎಂದು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ ಸೆಷನ್ಸ್‌ ಕೋರ್ಟ್‌

2023, ಜೂನ್‌ 16: ಆರೋಪಿ ಸಂತೋಷ್‌ ರಾವ್‌ ನಿರ್ದೋಷಿ ಎಂದು ಘೋಷಿಸಿದ ಸಿಬಿಐ ಕೋರ್ಟ್‌. ‘ಕೃತ್ಯವನ್ನು ಸಂತೋಷ್‌ ರಾವ್‌ ಎಸಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಸಿಬಿಐ ವಿಫಲವಾಗಿದೆ. ಆರೋಪಿಯೇ ಕೃತ್ಯ ಎಸಗಿದ್ದಾರೆ ಎಂದು ಹೇಳುವುದಕ್ಕೆ ಯಾವ ಸಾಕ್ಷ್ಯವೂ ಇಲ್ಲ’ ಎಂದು ಹೇಳಿಕೆ. ತಪ್ಪೆಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲೂ ಸೂಚನೆ. ‘ಗೋಲ್ಡನ್‌ ಅವರ್‌’ನಲ್ಲಿ ತನಿಖೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಆಕ್ಷೇಪ 

2024, ಆಗಸ್ಟ್‌ 30: ವಿಶೇಷ ತನಿಖಾ ತಂಡದ ಮೂಲಕ ಪ್ರಕರಣದ ಮರುತನಿಖೆ ನಡೆಸಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಸೌಜನ್ಯ ಕುಟುಂಬ ಸಲ್ಲಿಸಿದ್ದ ಅರ್ಜಿ ಹಾಗೂ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ, ಸಿಬಿಐ ಸಲ್ಲಿಸಿದ್ದ ಮೇಲ್ಮನವಿಗಳನ್ನು ವಜಾಗೊಳಿಸಿದ ಹೈಕೋರ್ಟ್‌. ಆದರೆ, ಈ ಕೃತ್ಯವನ್ನು ಸಂತೋಷ್‌ ರಾವ್‌ ಎಸಗಿಲ್ಲ ಎಂದಾದರೆ, ಬೇರೆ ಯಾರಾದರೂ ಮಾಡಿರಲೇ ಬೇಕು. ಹಾಗಾಗಿ, ಈ ಪ್ರಕರಣವನ್ನು ಮರುತನಿಖೆ ಮಾಡುವ ಅಗತ್ಯವಿದೆ ಎಂದು ಪ್ರತಿಪಾದನೆ

2026: ಸೌಜನ್ಯ ತಾಯಿಯಿಂದ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ; ಮರುತನಿಖೆಗೆ ಕೋರಿಕೆ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ