ಹಿಂದುತ್ವ ಇನ್‌ಫ್ಲ್ಯುಯೆನ್ಸರ್ ಭಾರದ್ವಾಜ್ ವಿರುದ್ಧ ಚಿರಾಗ್ ಪಾಸ್ವಾನ್ ದೂರು

ಹಿಂದುತ್ವ ಇನ್‌ಫ್ಲ್ಯುಯೆನ್ಸರ್ ಭಾರದ್ವಾಜ್ ವಿರುದ್ಧ ಚಿರಾಗ್ ಪಾಸ್ವಾನ್ ದೂರು

ಹಿಂದುತ್ವ ಇನ್‌ಫ್ಲ್ಯುಯೆನ್ಸರ್ ಭಾರದ್ವಾಜ್ ವಿರುದ್ಧ ಚಿರಾಗ್ ಪಾಸ್ವಾನ್ ದೂರು

ಪಾಟ್ನಾ: ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿಯೊಬ್ಬರ ತಂದೆಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುತ್ವ ಇನ್‌ಫ್ಲ್ಯುಯೆನ್ಸರ್ ಸ್ವತಂತ್ರ ಭಾರದ್ವಾಜ್ ಅವರು ತಮ್ಮ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪಾಸ್ವಾನ್‌, ‘ಭಾರದ್ವಾಜ್ ಅವರು ನನ್ನ ಹಾಗೂ ಇತರ ನಾಯಕರ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಸಂಬಂಧ ಅವರ ವಿರುದ್ಧ ದೂರು ದಾಖಲಿಸಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ’ ಎಂದಿದ್ದಾರೆ.

‘ಜನಪ್ರತಿನಿಧಿಯಾಗಿರುವ ನನ್ನನ್ನು ಭೇಟಿಯಾಗಲು ಹಲವರು ಬರುತ್ತಾರೆ. ಈ ವೇಳೆ ಫೋಟೊಗಳನ್ನು ತೆಗೆದುಕೊಳ್ಳುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ‘ಅವರು ನಮ್ಮ ಪರಿಚಯಸ್ಥರು’ ಎಂದು ಹೇಳಿಕೊಳ್ಳುವುದು ಹೆಸರಿನ ದುರುಪಯೋಗವಾಗಿದೆ. ತನ್ನ ವಿರುದ್ಧ ದೂರು ದಾಖಲಾಗದಂತೆ ನಾನು ಹಾಗೂ ನಮ್ಮ ಪಕ್ಷ ರಕ್ಷಣೆ ನೀಡಿದ್ದೇವೆ ಎಂದೂ ಆತ(ಭಾರದ್ವಾಜ್) ಹೇಳಿಕೊಂಡಿದ್ದಾನೆ. ಈ ಹೇಳಿಕೆ ವಿರುದ್ಧವೂ ದೂರು ದಾಖಲಿಸಲಾಗಿದೆ’ ಎಂದು ಪಾಸ್ವಾನ್ ತಿಳಿಸಿದ್ದಾರೆ.

‘ಕಾನೂನನ್ನು ಗೇಲಿ ಮಾಡುವಂತಾಗಬಾರದು’

‘ಒಬ್ಬ ವ್ಯಕ್ತಿಯನ್ನು ಸಾಯುವಂತೆ ಹೊಡೆದಿದ್ದೇನೆ ಎಂದು ಆತ(ಭಾರದ್ವಾಜ್) ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾನೆ. ಇಂತಹ ಹೇಳಿಕೆಗಳ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಅದು ದೇಶಕ್ಕೆ ಮತ್ತು ಜನರಿಗೆ ತಪ್ಪು ಸಂದೇಶ ನೀಡಲಿದೆ’ ಎಂದು ಪಾಸ್ವಾನ್ ಹೇಳಿದ್ದಾರೆ.

‘ನಾವು ಸಂತ್ರಸ್ತ ಕುಟುಂಬದೊಂದಿಗಿದ್ದೇವೆ. ಅವರಿಗೆ ನ್ಯಾಯ ದೊರಕುವಂತೆ ಮಾಡುವುದು ನನ್ನ ಜವಾಬ್ದಾರಿ. ಕಾನೂನನ್ನು ಬಹಿರಂಗವಾಗಿ ಗೇಲಿ ಮಾಡುತ್ತಿರುವ ವ್ಯಕ್ತಿಯ ವಿರುದ್ಧ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳುತ್ತೇವೆ’ ಎಂದಿದ್ದಾರೆ.

ಜುಲೈನಲ್ಲಿ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ನಿಶು ಆಜಾದ್‌ ತಂದೆ ಸಂಜಯ್‌ ಕುಮಾರ್ ಮೇಲೆ ಹಲ್ಲೆ ನಡೆಸಿದ್ದಾಗಿ ಭಾರದ್ವಾಜ್ ಅವರು ಪಾಡ್‌ಕಾಸ್ಟ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

‘ಅವರ ತಲೆಬುರುಡೆ ಒಡೆದಿದ್ದೆ. ಇದರಿಂದಾಗಿ ಅವರಿಗೆ 60 ಹೊಲಿಗೆಗಳು ಬಿದ್ದಿದ್ದವು. ಆದರೂ ನಾನು ಜೈಲಿಗೆ ಹೋಗುವುದರಿಂದ ಪಾರಾಗಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಇದೀಗ ಭಾರದ್ವಾಜ್‌ ವಿರುದ್ಧ ಪೋಕ್ಸೊ, ಕೊಲೆ ಯತ್ನ, ಕ್ರಿಮಿನಲ್‌ ಬೆದರಿಕೆ ಹಾಗೂ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ