ಪ್ರಜಾಸೇವೆ ಅಭಿಯಾನಕ್ಕೆ ಕ್ಷಣಗಣನೆ: ಕೌಂಟರ್‌ಗಳಲ್ಲಿ ಅರ್ಜಿ ಸ್ವೀಕಾರ ಆರಂಭ

ಪ್ರಜಾಸೇವೆ ಅಭಿಯಾನಕ್ಕೆ ಕ್ಷಣಗಣನೆ: ಕೌಂಟರ್‌ಗಳಲ್ಲಿ ಅರ್ಜಿ ಸ್ವೀಕಾರ ಆರಂಭ

ಪ್ರಜಾಸೇವೆ ಅಭಿಯಾನಕ್ಕೆ ಕ್ಷಣಗಣನೆ: ಕೌಂಟರ್‌ಗಳಲ್ಲಿ ಅರ್ಜಿ ಸ್ವೀಕಾರ ಆರಂಭ

ಕೂಡ್ಲಿಗಿ (ವಿಜಯನಗರ ಜಿಲ್ಲೆ): ರಾಜ್ಯ ಸರ್ಕಾರ ಹೊಸದಾಗಿ ಆರಂಭಿಸಿರುವ ಪ್ರಜಾಸೇವೆ ಇಲಾಖೆಗೆ ಅಧಿಕೃತ ಚಾಲನೆ ನೀಡುವುದಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಕೌಂಟರ್‌ಗಳಲ್ಲಿ ಅರ್ಜಿ ಸ್ವೀಕಾರ ಶುರುವಾಗಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 10.45ರ ಬಳಿಕ ಸ್ಥಳಕ್ಕೆ ಆಗಮಿಸುವ ನಿರೀಕ್ಷೆ ಇದ್ದು, ಸಾರ್ವಜನಿಕರು ವೇದಿಕೆ ಸಮೀಪಕ್ಕೆ ಬರತೊಡಗಿದ್ದಾರೆ.

ಒಟ್ಟು 30 ಕೌಂಟರ್‌ಗಳಲ್ಲಿ ಜನರ ಅಹವಾಲು ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಕೂಡ್ಲಿಗಿ ಪಟ್ಟಣ ಪಂಚಾಯತಿಯ ವಾರ್ಡ್‌ಗಳಿಗೆ 5 ಕೌಂಟರ್‌ಗಳು ಹಾಗೂ ಗ್ರಾಮ ಪಂಚಾಯಿತಿಗಳಿಗೆ 25 ಕೌಂಟರ್ ಗಳನ್ನು ಮೀಸಲಿಡಲಾಗಿದೆ. ಆಯಾ ಗ್ರಾಮ ಪಂಚಾಯಿತಿಗಳ ಮಂದಿ ಆ ಹೆಸರಿನ ಕೌಂಟರ್‌ನಲ್ಲಿ ತಮ್ಮ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಂಡು, ಸ್ಥಳದಲ್ಲೇ ಪರಿಹಾರ ಪಡೆದುಕೊಳ್ಳುವ ಅವಕಾಶ ಸಿಗಲಿದೆ.

ವೇದಿಕೆಯ ಇನ್ನೊಂದು ಬದಿಯಲ್ಲಿ ಸರ್ಕಾರದ ಸಾಧನೆಗಳನ್ನು ಬಿಂಬಿಸಲು 32 ಮಳಿಗೆಗಳನ್ನು ಸ್ಥಾಪಿಸಲಾಗಿದೆ.

ಸುಮಾರು 10,000 ಜನರು ಇಲ್ಲಿ ಸೇರುವ ನಿರೀಕ್ಷೆ ಇದ್ದು, ಸಂಜೆಯವರೆಗೂ ಸಿಎಂ ಅವರು ಇಲ್ಲಿ ಇರುವ ಸಾಧ್ಯತೆ ಇದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸವಂತಪ್ಪ ಅವರು ಈಗಾಗಲೇ ಸ್ಥಳಕ್ಕೆ ಬಂದಿದ್ದು, ಅಂತಿಮ ಹಂತದ ಸಿದ್ಧತೆ ಪರಿಶೀಲಿಸಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ