ಪ್ರತಿಮೆ ತೆರವುಗೊಳಿಸಿ ಸಿದ್ದರಾಮಯ್ಯಗೆ ಅವಮಾನ: ಖಂಡನೆ

ಪ್ರತಿಮೆ ತೆರವುಗೊಳಿಸಿ ಸಿದ್ದರಾಮಯ್ಯಗೆ ಅವಮಾನ: ಖಂಡನೆ

ಪ್ರತಿಮೆ ತೆರವುಗೊಳಿಸಿ ಸಿದ್ದರಾಮಯ್ಯಗೆ ಅವಮಾನ: ಖಂಡನೆ

ಹೊಸಪೇಟೆ (ವಿಜಯನಗರ): ಕಲಬುರ್ಗಿಯಲ್ಲಿ ಈಚೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ತೆರವುಗೊಳಿಸುವ ಮೂಲಕ ಅವರಿಗೆ ಅವಮಾನ ಮಾಡಲಾಗಿದೆ. ಇದೇ 23ರೊಳಗೆ ಪ್ರತಿಮೆ ಮರುಸ್ಥಾಪಿಸದಿದ್ದರೆ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಕುರುಬ ಸಮಾಜದ ಮುಖಂಡರು ಎಚ್ಚರಿಸಿದ್ದಾರೆ.

ಇಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಕುರುಬ ಸಮಾಜದ ಮುಖಂಡ ಸಿದ್ದನಗೌಡ ಮತ್ತು ರಾಜ್ಯ ಕುರುಬರ ಸಂಘದ ನಿರ್ದೆಶಕ ಕೆ.ಎಂ.ಹಾಲಪ್ಪ ಈ ಎಚ್ಚರಿಕೆ ನೀಡಿದ್ದಲ್ಲದೆ, ಹೊಸಪೇಟೆ ಸಹಿತ ಪ್ರತಿ ಜಿಲ್ಲೆಯಲ್ಲೂ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸುವ ಮೂಲಕ ತಕ್ಕ ಉತ್ತರ ನೀಡುವ ಸಂಕಲ್ಪ ಮಾಡಿದರು.

‘ರಾಜ್ಯ ಕಂಡ ಅಪ್ರತಿಮ ನಾಯಕ ಸಿದ್ದರಾಮಯ್ಯ ಅವರು ದೀರ್ಘ ಕಾಲ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿ ಅಧಿಕಾರ ಚಲಾಯಿಸಿದವರು. ಅಹಿಂದ ಸಮುದಾಯದ ಏಳಿಗೆ ಸಹಿತ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದ ಅವರ ಪ್ರತಿಮೆ ಸ್ಥಾಪನೆಗೆ ಅಡ್ಡಿ ಉಂಟುಮಾಡಿರುವುದು ಸರಿಯಾದ ಕ್ರಮವಲ್ಲ. ಸೂಕ್ತ ಅನುಮತಿ ಪಡೆದು ಮತ್ತೆ ಕಲಬುರ್ಗಿಯಲ್ಲಿ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸುವುದು ನಿಶ್ಚಿತ’ ಎಂದು ಸಿದ್ದನಗೌಡ ಹೇಳಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೇ ಈ ರೀತಿಯ ಬೆಳವಣಿಗೆ ಅಗಿದೆ. ಸಿದ್ದರಾಮಯ್ಯ ಅವರು ತಮ್ಮ ಪ್ರತಿಮೆ ಸ್ಥಾಪಿಸಿ ಎಂದು ಕೇಳಲಾರರು, ಆದರೆ ಅವರ ಮೇಲಿನ ಅಭಿಮಾನದಲ್ಲಿ ಈ ಪ್ರತಿಮೆ ಸ್ಥಾಪಿಸಲಾಗಿತ್ತು. ಸ್ಥಳೀಯ ಆಡಳಿತದಿಂದ ಸೂಕ್ತ ಅನುಮತಿ ಪಡೆಯದೆ ಪ್ರತಿಮೆ ಸ್ಥಾಪಿಸಲಾಗಿದೆ ಎಂಬ ಆರೋಪವೂ ಸರಿಯಲ್ಲ’ ಎಂದು ಅವರು ಹೇಳಿದರು.

ಕೆ.ಎಂ.ಹಾಲಪ್ಪ ಮಾತನಾಡಿ, ಹೊಸಪೇಟೆಯಲ್ಲಿ ಸಹ ಮುಂದಿನ ಆರು ತಿಂಗಳ ಒಳಗೆ ಸಿದ್ದರಾಮಯ್ಯ ಅವರ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಹೇಳಿದರು.

ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಂಚಿಗಿ, ಮುಖಂಡರಾದ ಗಂಟೆ ಸೋಮಶೇಖರ, ಕೆ.ಬಸವರಾಜ್‌, ಪಂಪಾಪತಿ, ಕೆ.ಆರ್.ವೆಂಕಟೇಶ್‌, ಜ್ಞಾನದೇವ, ಆರ್‌.ಆರ್.ತಾಯಪ್ಪ, ಮರಿರಾಮಣ್ಣ ಇದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ