
ಕಲಬುರಗಿ ಮಹಾನಗರ ಪಾಲಿಕೆ: ಮೇಯರ್ ಗೋಲಾ, ಉಪಮೇಯರ್ ಫರ್ಹನಾಜ್ ಪದಗ್ರಹಣ
ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಆಗಿ ಶೇಕ್ ಅಜ್ಮಲ್ ಗೋಲಾ ಹಾಗೂ ಉಪಮೇಯರ್ ಫರ್ಹಾನಾಜ್ ಖುಸ್ರೂ ಜಾಗೀರದಾರ ಅವರು ಮಂಗಳವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು.
ಅವರ ಬೆಂಬಲಿಗರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ಈ ಕ್ಷಣಕ್ಕೆ ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತಿಮಾ , ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಪಾಲಿಕೆ ಆಯುಕ್ತ ಅವಿನಾಶ ಶಿಂದೆ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕಿರಣ್ ದೇಶಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.