
ರಾಣೆಬೆನ್ನೂರಿನಲ್ಲಿ ಪತಂಜಲಿ ಯೋಗ ಸಮಿತಿಯಿಂದ ರಕ್ಷಾ ಬಂಧನ ಆಚರಣೆ
ರಾಣೆಬೆನ್ನೂರು: ಇಲ್ಲಿಯ ಮೇಡ್ಲೇರಿ ರಸ್ತೆಯ ಆದಿಶಕ್ತಿ ದೇವಸ್ಥಾನದ ಗುಪ್ತಾ ಸಮುದಾಯ ಭವನದ ಧ್ಯಾನಮಂದಿರದಲ್ಲಿ ಸೋಮವಾರ ಪತಂಜಲಿ ಯೋಗ ಸಮಿತಿಯಿಂದ ರಕ್ಷಾ ಬಂಧನ ಹಾಗೂ ಅಗ್ನಿಹೋತ್ರ ಹೋಮ ಕಾರ್ಯಕ್ರಮವು ಶ್ರದ್ಧಾ– ಭಕ್ತಿಯಿಂದ ನೆರವೇರಿತು.
ಪತಂಜಲಿ ಸಮಿತಿಯ ಮಹಿಳಾ ಸದಸ್ಯೆಯರು ಎಲ್ಲ ಸದಸ್ಯರಿಗೆ ರಾಖಿ ಕಟ್ಟಿ ಸಿಹಿ ಹಂಚುವ ಮೂಲಕ ಹಬ್ಬದ ಸೌಹಾರ್ದ ಮೆರೆದರು.
ಈಚೆಗೆ ನಡೆದ ರಾಜ್ಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿ ಪ್ರಶಸ್ತಿ ಪಡೆದ ಯೋಗ ಪಟು ಅನಂತ ಪದ್ಮನಾಭ ಭಾನುಹಳ್ಳಿ ಅವರನ್ನು ಸನ್ಮಾನಿಸಲಾಯಿತು.
ರವೀಂದ್ರ ಬಿಜಾಪುರ, ಆರ್.ಎನ್. ರಾಠೋಡ, ಕೆ.ಸಿ. ಕೋಮಲಾಚಾರ, ರೇವಣ್ಣ ಪಿ.ಎಂ, ಬಸವರಾಜ್ ವೈ, ಪ್ರಕಾಶ ಸಿ.ಎಂ, ಸುನಿಲ ಎಂ.ಎಲ್, ವಜ್ರೇಶ್ವರಿ ಲದ್ವಾ, ಕವಿತಾ ಪಿ. ಕುಬಸದ್, ಕವಿತಾ ಎಸ್. ಚಿನ್ನಿಕಟ್ಟಿ, ರೂಪಾ ಕೆ. ಪವಾರ್, ರಾಜಶ್ರೀ ಉಡಗಟ್ಟಿ, ಪಾರ್ವತಿ ಹುಲಿಹಳ್ಳಿ, ಪೂರ್ಣಿಮಾ ಲದ್ವಾ ಇದ್ದರು.