
ನರಗುಂದ | ಊರಿಗೆ ಹೋಗುವ ವಿಚಾರಕ್ಕೆ ಜಗಳ: ತಾಯಿ–ಮಗಳು ಆತ್ಮಹತ್ಯೆ
ನರಗುಂದ: ತಾಲ್ಲೂಕಿನ ಬೈರನಹಟ್ಟಿ ಗ್ರಾಮದಲ್ಲಿ ತಾಯಿ, ಮಗಳು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಗಳು ಜಯಲಕ್ಷ್ಮೀ ಸುರೇಶಗೌಡ ಪಾಟೀಲ (17) ಹಾಗೂ ತಾಯಿ ಕಸ್ತೂರೆವ್ವ ಸುರೇಶಗೌಡ ಪಾಟೀಲ (41) ಇವರಿಬ್ಬರೂ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಊರಿಗೆ ಹೋಗುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದರು ಎನ್ನಲಾಗಿದೆ.
ಇಬ್ಬರನ್ನೂ ನರಗುಂದ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭದಲ್ಲಿ ದಾರಿ ಮಧ್ಯೆಯೇ ಇಬ್ಬರೂ ಮೃತಪಟ್ಟಿದ್ದಾರೆ. ನರಗುಂದ ಪೊಲೀಸ್ ಠಾಣೆಯಲ್ಲಿ ಭಾನುವಾರ ಪ್ರಕರಣ ದಾಖಲಾಗಿದೆ.