ಏಷ್ಯಾಕಪ್‌ ಹಾಕಿ ಟೂರ್ನಿ: ಜೂನಿಯರ್‌ ಮಹಿಳೆಯರ ಗೆಲುವಿನ ಓಟ

ಏಷ್ಯಾಕಪ್‌ ಹಾಕಿ ಟೂರ್ನಿ: ಜೂನಿಯರ್‌ ಮಹಿಳೆಯರ ಗೆಲುವಿನ ಓಟ

ಏಷ್ಯಾಕಪ್‌ ಹಾಕಿ ಟೂರ್ನಿ: ಜೂನಿಯರ್‌ ಮಹಿಳೆಯರ ಗೆಲುವಿನ ಓಟ

ಮೋಖಿ (ಚೀನಾ), (ಪಿಟಿಐ): ಗೆಲುವಿನ ಓಟ ಮುಂದುವರಿಸಿದ ಭಾರತ ಜೂನಿಯರ್‌ ಮಹಿಳೆಯರ ತಂಡವು ಏಷ್ಯಾಕಪ್‌ ಹಾಕಿ ಟೂರ್ನಿಯ ಎಲೀಟ್‌ ಗುಂಪಿನ ಪಂದ್ಯದಲ್ಲಿ ಮಂಗಳವಾರ 7–0ಯಿಂದ ಜಪಾನ್‌ ವಿರುದ್ಧ ಏಕಪಕ್ಷೀಯ ಗೆಲುವು ಸಾಧಿಸಿತು. ಹ್ಯಾಟ್ರಿಕ್‌ ಜಯದೊಂದಿಗೆ ಕ್ವಾರ್ಟರ್‌ಫೈನಲ್‌ ಟಿಕೆಟ್‌ ಖಚಿತಪಡಿಸಿಕೊಂಡಿತು.

ಭಾರತದ ಆಟಗಾರ್ತಿಯರು ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕಿಳಿದರು. 5ನೇ ನಿಮಿಷದಲ್ಲಿ ಕೃಷ್ಣಾ ಶರ್ಮಾ ಗೋಲಿನ ಖಾತೆ ತೆರೆದರು. ಸುಪ್ರಿಯಾ (9ನೇ ನಿ.) ಮತ್ತು ಪೂರ್ಣಿಮಾ ಯಾದವ್‌ (14ನೇ ನಿ.) ಗೋಲು ಹೊಡೆದಿದ್ದರಿಂದ ಭಾರತ ವನಿತೆಯರು ಮೊದಲ ಕ್ವಾರ್ಟರ್‌ನಲ್ಲಿ 3–0 ಮುನ್ನಡೆ ಗಳಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಪೂಜಾ ಮಲಿಕ್‌ (27ನೇ ನಿ.) ಗೋಲು ಗಳಿಸಿದರು. ದ್ವಿತೀಯಾರ್ಧದಲ್ಲಿ ಗೀತಾ ಯಾದವ್‌ (41ನೇ ಮತ್ತು 45ನೇ ನಿ.), ಪೂರ್ಣಿಮಾ (46ನೇ ನಿ.) ಮತ್ತು ಸಾನಿಕಾ ಚಂದ್ರಕಾಂತ್‌ ಮಾನೆ (50ನೇ ನಿ.) ಪ್ರಾಬಲ್ಯ ಮೆರೆದರು. ಪೂರ್ಣಿಮಾ ಅವರು ಪಂದ್ಯದ ಆಟಗಾರ್ತಿ ಗೌರವ ಪಡೆದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ