
ಪರಿಶ್ರಮ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಸಭೆ
ರಾಮದುರ್ಗ: ಪಟ್ಟಣದ ಪರಿಶ್ರಮ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ 2ನೇ ವರ್ಷದ ಸರ್ವ ಸಾಧಾರಣ ಸಭೆಯಲ್ಲಿ ಸಾಧಕರು ಮತ್ತು ಪ್ರತಿಭಾವಂತ ಮಕ್ಕಳಿಗೆ ಸನ್ಮಾನ ಹಮ್ಮಿಕೊಂಡಿದೆ ಎಂದು ಅಧ್ಯಕ್ಷ ಆರ್.ಎಚ್. ತೋಳಗಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 317 ಸದಸ್ಯರ ₹90 ಲಕ್ಷ ಹಣದಲ್ಲಿ ಆರಂಭಗೊಂಡ ಸಂಘವು ಈಗ ಒಟ್ಟು ₹ 2.32 ಕೋಟಿ ವಹಿವಾಟು ನಡೆಸುತ್ತಿದೆ. ಒಟ್ಟು ₹20.12 ಲಕ್ಷ ಷೇರು ಬಂಡವಾಳ, ₹ 1.65 ಕೋಟಿ ಸಾಲ ನೀಡಿ ರೈತ ಸಂಕುಲಕ್ಕೆ ಸಹಾಯ ಮಾಡುತ್ತಿದೆ ಎಂದು ತಿಳಿಸಿದರು. ಸಭೆಯನ್ನು ಶಾಸಕ ಬಾಲಚಂದ್ರ ಉದ್ಘಾಟಿಟಿಸುವರು.