BBK13: ಹುಚ್ಚಿ ಅನ್ನೋದಕ್ಕೆ ನೀನು ಯಾರು? ಕಿರಣ್ ಶಾಸ್ತ್ರಿ ವಿರುದ್ಧ ವೈಷ್ಣವಿ ಗರಂ

BBK13: ಹುಚ್ಚಿ ಅನ್ನೋದಕ್ಕೆ ನೀನು ಯಾರು? ಕಿರಣ್ ಶಾಸ್ತ್ರಿ ವಿರುದ್ಧ ವೈಷ್ಣವಿ ಗರಂ

BBK13: ಹುಚ್ಚಿ ಅನ್ನೋದಕ್ಕೆ ನೀನು ಯಾರು? ಕಿರಣ್ ಶಾಸ್ತ್ರಿ ವಿರುದ್ಧ ವೈಷ್ಣವಿ ಗರಂ

ಬಿಗ್ ಬಾಸ್ ಸೀಸನ್ 13 ಆರಂಭವಾಗಿ ಒಂದು ದಿನ ಕಳೆದಿದೆ. ಬಿಗ್ ಬಾಸ್ ಮನೆಗೆ ಕಾಲಿಡುವ ಮೊದಲೇ ಸ್ಪರ್ಧಿಗಳ ನಡುವೆ ವೈಮನಸ್ಸು, ಗಲಾಟೆ ಶುರುವಾಗಿದೆ. ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೋಮೊವೊಂದನ್ನು ಬಿಡುಗಡೆ ಮಾಡಿದೆ.

ಅದರಲ್ಲಿ ಕಿರಣ್ ಶಾಸ್ತ್ರಿ ಹಾಗೂ ವೈಷ್ಣವಿ ನಡುವೆ ಬಾತ್​ರೂಮ್ ಬಳಕೆಯ ವಿಚಾರಕ್ಕೆ ಗಲಾಟೆಯಾಗಿದೆ. ಮನೆಯ ನಿಯಮದ ಪ್ರಕಾರ, ಸ್ನಾನಗೃಹವನ್ನು ಬಳಸಲು ಎಲ್ಲರಿಗೂ ಒಟ್ಟಾಗಿ ಒಂದೂವರೆ ಗಂಟೆಗಳ ಕಾಲಾವಕಾಶ ನೀಡಲಾಗಿತ್ತು. ಆದರೆ, ಕಿರಣ್ ಶಾಸ್ತ್ರಿ ಅವರು ಒಬ್ಬರೇ ಹೆಚ್ಚು ಸಮಯ ತೆಗೆದುಕೊಂಡ ಕಾರಣಕ್ಕೆ ಇತರರಿಗೂ ತೊಂದರೆಯಾಗಿದೆ.

ಇನ್ನೂ, ಸ್ನಾನಗೃಹದಿಂದ ಹೊರಬರಲು ತಡ ಮಾಡಿದ್ದ ಕಿರಣ್ ಶಾಸ್ತ್ರಿ ವಿರುದ್ಧ ವೈಷ್ಣವಿ ಅವರು ರೇಗಾಡಿದ್ದಾರೆ. ಕೋಪದಲ್ಲಿ ವೈಷ್ಣವಿ, ‘ಕಿರಣ್ ಶಾಸ್ತ್ರಿ ಅವರಿಗೆ ಬೇಗ ಬರೋದಕ್ಕೆ ಹೇಳಿ. ಇನ್ನು ಎಷ್ಟೊತ್ತು ಮಾಡೋದು? ನಿಮ್ಮಿಂದ ಎಲ್ಲರಿಗೂ ತೊಂದರೆ ಆಗುತ್ತೆ’ ಎಂದು ಗರಂ ಆಗಿದ್ದಾರೆ.

ಆಗ ಕಿರಣ್ ಶಾಸ್ತ್ರಿ ಅವರು ವೈಷ್ಣವಿಗೆ ‘ಹುಚ್ಚಿ ತರ ಆಡುತ್ತಿದ್ದಿರಲ್ಲಾ’ ಎಂದಿದ್ದಾರೆ. ಆ ಕೂಡಲೇ ಕಿರಣ್‌ಗೆ ವೈಷ್ಣವಿ, ‘ಹುಚ್ಚಿ ಅನ್ನೋದಕ್ಕೆ ನೀನು ಯಾರು?’ ಎಂದು ಕೂಗಾಡಿದ್ದಾರೆ. ಇದೇ ವೇಳೆ ವೈಷ್ಣವಿ ಜೊತೆಗೆ ಸೌಂದರ್ಯ ಶೆಟ್ಟಿ, ಪ್ರಥಮಾ ಅವರು ಕೂಡ ಕಿರಣ್ ವಿರುದ್ಧ ಕೂಗಾಡಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ