ಬೆಲ್ಲಕ್ಕೆ ಹೆಚ್ಚಿದ ಬೇಡಿಕೆ: ದುಬಾರಿಯಾದ ದರ

ಬೆಲ್ಲಕ್ಕೆ ಹೆಚ್ಚಿದ ಬೇಡಿಕೆ: ದುಬಾರಿಯಾದ ದರ

ಬೆಲ್ಲಕ್ಕೆ ಹೆಚ್ಚಿದ ಬೇಡಿಕೆ: ದುಬಾರಿಯಾದ ದರ

ಬೆಳಗಾವಿ: ಒಂದೆಡೆ ಸಕ್ಕರೆ ದರ ಹೆಚ್ಚಿದ್ದರಿಂದ, ಮತ್ತೊಂದೆಡೆ ಬೆಲ್ಲಕ್ಕೆ ಭಾರಿ ಬೇಡಿಕೆ ಬಂದಿದೆ. ಸಕ್ಕರೆ ಬೆರೆಸದೆ ತಯಾರಿಸಿದ ಬೆಲ್ಲ ಪ್ರತಿ ಕ್ವಿಂಟಲ್‌ಗೆ ₹5 ಸಾವಿರದಿಂದ ₹5,800ಕ್ಕೆ ಮಾರಾಟವಾಗುತ್ತಿದೆ.

ಜಿಲ್ಲೆಯಲ್ಲಿ 3 ಲಕ್ಷ ಹೆಕ್ಟೇರ್‌ಗಿಂತ ಅಧಿಕ ಜಮೀನಿನಲ್ಲಿ ಕಬ್ಬು ಬೆಳೆಯಲಾಗುತ್ತದೆ. ಹೆಚ್ಚಿನ ರೈತರು ತಾವು ಬೆಳೆದ ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಕಳುಹಿಸುತ್ತಾರೆ. ಉಳಿದವರು ತಮ್ಮೂರಿನ ಆಲೆಮನೆಗಳಲ್ಲಿ ಬೆಲ್ಲ ತಯಾರಿಸಿ ಮಾರುತ್ತಾರೆ.

ಕಬ್ಬು ಹೆಚ್ಚಾಗಿ ಬೆಳೆಯುವ ಪ್ರದೇಶಗಳಲ್ಲಿ ಪ್ರತಿವರ್ಷ ನವರಾತ್ರಿ ಹಬ್ಬದ ನಂತರ ಆರಂಭವಾಗುವ ಆಲೆಮನೆಗಳು, ಜನವರಿಯವರೆಗೂ ಬೆಲ್ಲ ತಯಾರಿಸುತ್ತವೆ.

ಆದರೆ, ವರ್ಷವಿಡೀ ಬೆಲ್ಲ ತಯಾರಿಸುವ ಕೆಲ ಆಲೆಮನೆಗಳೂ ಜಿಲ್ಲೆಯಲ್ಲಿವೆ. ಅವು ತಯಾರಿಸಿದ ಬೆಲ್ಲಕ್ಕೀಗ ಉತ್ತಮ ದರ ಸಿಗುತ್ತಿದೆ.

‘ವರ್ಷದ ಹನ್ನೆರಡು ತಿಂಗಳು ನಾವು ಬೆಲ್ಲ ತಯಾರಿಸುತ್ತೇವೆ. ಪ್ರತಿದಿನ 1 ಟನ್‌ ಬೆಲ್ಲ ತಯಾರಾಗುತ್ತದೆ. ನಮ್ಮಲ್ಲಿ ತಯಾರಾದ ಉತ್ಪನ್ನವನ್ನು ಬೆಳಗಾವಿ ಎಪಿಎಂಸಿ ಜತೆಗೆ, ಜಿಲ್ಲೆಯ ವಿವಿಧ ಪಟ್ಟಣ ಮತ್ತು ಮಹಾರಾಷ್ಟ್ರಕ್ಕೂ ಕಳುಹಿಸುತ್ತೇವೆ. ನಾವು ಸಕ್ಕರೆ ಬೆರೆಸೆದ ಬೆಲ್ಲ ತಯಾರಿಸುತ್ತೇವೆ. ಪ್ರತಿ ಕ್ವಿಂಟಲ್‌ ₹5,800ರವರೆಗೂ ಮಾರುತ್ತಿದೆ. ಪ್ರತಿದಿನ ದರ ವ್ಯತ್ಯಾಸವಾಗುತ್ತಿದೆ. ಸಕ್ಕರೆ ದರ ಹೆಚ್ಚಿದ್ದರಿಂದ ಬೆಲ್ಲಕ್ಕೆ ಬೇಡಿಕೆ ಬಂದಿದೆ’ ಎಂದು ಬೆಳಗಾವಿ ತಾಲ್ಲೂಕಿನ ಕಲಖಾಂಬದ ಯುವರಾಜ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೆಲ್ಲಕ್ಕೆ ಕ್ವಿಂಟಲ್‌ಗೆ ₹5 ಸಾವಿರ ದರವಿತ್ತು. ಈಗ ₹5,800ರವರೆಗೂ ಮಾರಾಟವಾಗುತ್ತಿದೆ. ಸಕ್ಕರೆ ದರ ಹೆಚ್ಚಿದ್ದರಿಂದ ಬೆಲ್ಲ ಖರೀದಿಗೆ ಜನರು ಒಲವು ತೋರುತ್ತಿದ್ದಾರೆ’ ಎಂದು ಬೆಳಗಾವಿ ಎಪಿಎಂಸಿ ವ್ಯಾಪಾರಿ ಸಚಿನ ಭೈರಪ್ಪನವರ ಹೇಳಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ