
ಬೆಂಗಳೂರು ದಕ್ಷಿಣ, ಮಂಡ್ಯ ಜಿಲ್ಲೆಯಲ್ಲಿ ಹೆಚ್ಚಿನ ಮಳೆ, ಯಾವ ಭಾಗದಲ್ಲಿ ಎಷ್ಟು?
ಬೆಂಗಳೂರು: ಗೌರಿ ಗಣೇಶನ ಹಬ್ಬದ ದಿನದಂದು ಬಿಸಿಲಿನ ಝಳದಿಂದ ಬಸವಳಿದಿದ್ದ ಜನರಿಗೆ ಮರು ದಿನ ಸುರಿದ ಭಾರಿ ಮಳೆ ನಿರಾಳತೆ ತಂದಿದೆ. ಬೆಂಗಳೂರು ದಕ್ಷಿಣ ಹಾಗೂ ಮಂಡ್ಯ ಜಿಲ್ಲೆ ಸಹಿತ ಕರ್ನಾಟಕದ ವಿವಿಧ ಭಾಗಗಳಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಉತ್ತಮ ಮಳೆಯಾಗಿದೆ.
ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಚನ್ನಪಟ್ಟಣ ತಾಲ್ಲೂಕಿನ ಕೂಡ್ಲೂರಿನಲ್ಲಿ ಅತ್ಯಧಿಕ 145.5 ಮಿ.ಮೀ ಮಳೆಯಾಗಿದೆ.
ಇದೇ ತಾಲ್ಲೂಕಿನ ಹೊಂಗನೂರಿನಲ್ಲಿ 128 ಮಿ.ಮೀ, ಮಾಗಡಿ ತಾಲ್ಲೂಕಿನ ತಗ್ಗಿಕುಪ್ಪೆಯಲ್ಲಿ 126.5 ಮಿ.ಮೀ, ನೇತನಹಳ್ಳಿಯಲ್ಲಿ 119 ಮಿ.ಮೀ, ಮಾಗಡಿಯಲ್ಲಿ 118 ಮಿ.ಮೀ, ಮಡಬಾಳದಲ್ಲಿ 116.5 ಮಿ.ಮೀ ಮಳೆಯಾಗಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಭೂಹಳ್ಳಿಯಲ್ಲಿ 114 ಮಿ.ಮೀ, ಬೆಳಕವಾಡಿಯಲ್ಲಿ 111.5 ಮಿ.ಮೀ, ಬಂಡೂರಿನಲ್ಲಿ 119 ಮಿ.ಮೀ, ಮದ್ದೂರು ತಾಲ್ಲೂಕಿನ ಕೂಳಗೆರೆಯಲ್ಲಿ 103 ಮಿ.ಮೀ, ಮಳವಳ್ಳಿ ತಾಲ್ಲೂಕಿನ ಕಗ್ಗಲಿಪುರದಲ್ಲಿ 98.5 ಮಿ.ಮೀ ಮಳೆಯಾಗಿದೆ.
ಮೈಸೂರು ಜಿಲ್ಲೆ ತಿ.ನರಸೀಪುರ ತಾಲ್ಲೂಕಿನ ಟಿ.ದೊಡ್ಡಪುರ, ಕನಕಪುರ ತಾಲ್ಲೂಕಿನ ದೊಡ್ಡಮರಳವಾಡಿ ಹಾಗೂ ಮಂಡ್ಯ ತಾಲ್ಲೂಕಿನ ಹೊಡಾಘಟ್ಟದಲ್ಲಿ ತಲಾ 98 ಮಿ.ಮೀ, ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ನಿಡಸಾಲೆಯಲ್ಲಿ 95 ಮಿ.ಮೀ ಮಳೆಯಾಗಿದೆ.
ಕೋಲಾರದಲ್ಲಿ 93.6 ಮಿ.ಮೀ, ತಿ.ನರಸೀಪುರ ತಾಲ್ಲೂಕಿನ ಬೆನಕನಹಳ್ಳಿಯಲ್ಲಿ 93.5 ಮಿ.ಮೀ, ಕೊಳತ್ತೂರಿನಲ್ಲಿ 92.5 ಮಿ.ಮೀ, ಕನಕಪುರ ತಾಲ್ಲೂಕಿನ ಕೊಳಗೊಂಡನಹಳ್ಳಿಯಲ್ಲಿ 90.5 ಮಿ.ಮೀ, ಮಂಡ್ಯ ತಾಲ್ಲೂಕಿನ ಹುಲಿವಾನದಲ್ಲಿ 90 ಮಿ.ಮೀ ಹಾಗೂ ಹುಲುವಾಡಿಯಲ್ಲಿ 88 ಮಿ.ಮೀ ಮಳೆಯಾಗಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೆಳ್ಳೂರಿನಲ್ಲಿ 87.5 ಮಿ.ಮೀ, ಚನ್ನಪಟ್ಟಣ ತಾಲ್ಲೂಕಿನ ಇಗ್ಗಲೂರಿನಲ್ಲಿ 85.5 ಮಿ.ಮೀ, ಕೋಲಾರ ಜಿಲ್ಲೆ ಮುಳುಬಾಗಿಲು ತಾಲ್ಲೂಕಿನ ಧೂಳಪಲ್ಲಿಯಲ್ಲಿ 83.5 ಮಿ.ಮೀ, ಬಂಗಾರ ಪೇಟೆ ತಾಲ್ಲೂಕಿನ ಎನ್.ಜಿ.ಹುಲ್ಕೂರಿನಲ್ಲಿ 82.5 ಮಿ.ಮೀ ಮಳೆಯಾಗಿದೆ.
ಮಳವಳ್ಳಿ ತಾಲ್ಲೂಕಿನ ಹಲಗೂರು, ಕನಕಪುರ ತಾಲ್ಲೂಕಿನ ಅಚಲು, ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸದ್ದಿಯಮ್‌ನಲ್ಲಿ 81 ಮಿ.ಮೀ, ತಿ.ನರಸೀಪುರ ತಾಲ್ಲೂಕಿನ ಉಕ್ಕಲಗೆರೆಯಲ್ಲಿ 80.5 ಮಿ.ಮೀ ಮಳೆಯಾಗಿದೆ.
ಮದ್ದೂರು ತಾಲ್ಲೂಕಿನ ಕ್ಯಾತಘಟ್ಟದಲ್ಲಿ 77.5 ಮಿ.ಮೀ, ಮಳವಳ್ಳಿ ತಾಲ್ಲೂಕಿನ ರಾಗಿ ಬೊಮ್ಮನಹಳ್ಳಿಯಲ್ಲಿ 77 ಮಿ.ಮೀ, ಚನ್ನಪಟ್ಟಣ ತಾಲ್ಲೂಕಿನ ಸುಳ್ಳೇರಿಯಲ್ಲಿ 76 ಮಿ.ಮೀ, ಕನಕಪುರ ತಾಲ್ಲೂಕಿನ ಚಾಕನಹಳ್ಳಿಯಲ್ಲಿ 75.5 ಮಿ.ಮೀ, ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ತಾವರೆಕೆರೆಯಲ್ಲಿ 70.5 ಮಿ.ಮೀ ಮಳೆಯಾಗಿದೆ.
ಬೆಂಗಳೂರಿನ ಬೊಮ್ಮೇನಹಳ್ಳಿಯಲ್ಲಿ 68.5 ಮಿ.ಮೀ. ಆನೇಕಲ್ ತಾಲ್ಲೂಕಿನ ಮಂಟಪದಲ್ಲಿ 67 ಮಿ.ಮೀ, ಮದ್ದೂರು ತಾಲ್ಲೂಕಿನ ಹೊನ್ನಲಗೆರೆಯಲ್ಲಿ 67 ಮಿ.ಮೀ ಮಳೆಯಾಗಿದೆ.