ಶಿರಾ: ಶೇಂಗಾ ಮಾರುಕಟ್ಟೆ ವೈಭವಕ್ಕೆ ಮುಸುಕು

ಶಿರಾ: ಶೇಂಗಾ ಮಾರುಕಟ್ಟೆ ವೈಭವಕ್ಕೆ ಮುಸುಕು

ಶಿರಾ: ಶೇಂಗಾ ಮಾರುಕಟ್ಟೆ ವೈಭವಕ್ಕೆ ಮುಸುಕು

ಶಿರಾ: ಸುಗ್ಗಿ ಸಮಯದಲ್ಲಿ ಎತ್ತ ನೋಡಿದರೂ ದವಸ, ಧಾನ್ಯಗಳಿಂದ ತುಂಬಿ ತುಳುಕುತ್ತಿದ್ದ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸತತ ಬರದಿಂದಾಗಿ ಕಳೆಗುಂದಿದೆ.

ಶೇಂಗಾ ಮಾರುಕಟ್ಟೆಗೆ ರಾಜ್ಯದಲ್ಲಿ ಹೆಸರು ವಾಸಿಯಾಗಿತ್ತು. ಯಾವುದೇ ಮೂಲೆ ನೋಡಿದರೂ ಶೇಂಗಾ ಕಾಣುತ್ತಿತ್ತು. ಆದರೆ ಈಚಿನ ವರ್ಷಗಳಲ್ಲಿ ಶೇಂಗಾ ಹುಡುಕಬೇಕಿದೆ.

2022-23ರಲ್ಲಿ ₹37.25 ಲಕ್ಷ, 2024-25ರಲ್ಲಿ ₹1.86 ಕೋಟಿ, 2025-26ರಲ್ಲಿ ₹1.79 ಕೋಟಿ ಶುಲ್ಕ ವಸೂಲಾಗಿದೆ.

ಹಳೆ ರಾಷ್ಟ್ರೀಯ ಹೆದ್ದಾರಿ-4ಕ್ಕೆ ಹೊಂದಿಕೊಂಡಂತೆ 28 ಎಕರೆಯಲ್ಲಿ ಎಪಿಎಂಸಿ ಮಾರುಕಟ್ಟೆ ಇದ್ದು, ಮತ್ತೆ ಮಾನಂಗಿಯಲ್ಲಿ 18.14 ಎಕರೆ ಜಾಗ ನೀಡಿದ್ದು, ಅಲ್ಲಿ ₹10.30 ಕೋಟಿ ವೆಚ್ಚದಲ್ಲಿ ಶಿಥಲೀಕರಣ ಘಟಕದ ಕಾಮಗಾರಿ ನಡೆದಿದೆ.

ಅಂಗಡಿ ಪಡೆಯಲು ಹಿಂದೇಟು: ಎಪಿಎಂಸಿ ಮಾರುಕಟ್ಟೆಯ ಮುಂಭಾಗದಲ್ಲಿ 31 ಅಂಗಡಿ ಮಳಿಗೆಗಳಿದ್ದು ಇದರಲ್ಲಿ 8 ಖಾಲಿ ಇವೆ. ಇದರಿಂದ ₹2.50 ಲಕ್ಷ ಬಾಡಿಗೆ ಬರುತ್ತಿದೆ. ಮಾರುಕಟ್ಟೆಯಲ್ಲಿ 42 ಸಣ್ಣ ಅಂಗಡಿಗಳಿದ್ದು, ಇದರಲ್ಲಿ 17 ಮಾತ್ರ ಬಾಡಿಗೆ ಪಡೆದಿದ್ದು ಉಳಿದವು ಖಾಲಿ ಉಳಿದಿವೆ. ಮಂಗಳವಾರ ಒಂದು ದಿನ ಮಾತ್ರ ಮಾರುಕಟ್ಟೆ ವಹಿವಾಟು ನಡೆಯುವುದರಿಂದ ಬೇರೆ ದಿನಗಳಲ್ಲಿ ಕನಿಷ್ಠ ಪ್ರಮಾಣದ ವಹಿವಾಟು ನಡೆಯುವುದಿಲ್ಲ. ಇದರಿಂದ ಮಳಿಗೆ ಬಾಡಿಗೆ ಪಡೆಯಲು ವ್ಯಾಪಾರಸ್ಥರು ಹಿಂದೇಟು ಹಾಕುತ್ತಿದ್ದಾರೆ.

ಮಾರುಕಟ್ಟೆಯಲ್ಲಿ 5 ಸಾವಿರ ಹಾಗೂ ಒಂದು ಸಾವಿರ ಮೆಟ್ರಿಕ್ ಟನ್‌ನ ತಲಾ ಒಂದೊಂದು ಗೋದಾಮಿದ್ದು, ಇವುಗಳನ್ನು ಬಾಡಿಗೆ ನೀಡಿದ್ದು ಇದರಿಂದ ಆದಾಯದ ಮೂಲ ಹೆಚ್ಚಿದೆ.

ಸಿಬ್ಬಂದಿ ಕೊರತೆ: ನಗರದ ಎಪಿಎಂಸಿ ಮಾರುಕಟ್ಟೆಗೆ 11 ಹುದ್ದೆ ಮಂಜೂರಾಗಿದ್ದು, ಕಾರ್ಯದರ್ಶಿ ಮತ್ತು ಸಹ ಕಾರ್ಯದರ್ಶಿ ಮಾತ್ರ ಇದ್ದಾರೆ. ಹೊರಗುತ್ತಿಗೆ ಮೇಲೆ 7ಜನರನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಿಬ್ಬಂದಿ ಕೊರತೆಯಿಂದ ರೈತರಿಗೆ ಸೌಲಭ್ಯ ಒದಗಿಸಲು ಕಷ್ಟವಾಗುತ್ತಿದೆ.

ನೀರಿನ ಸಮಸ್ಯೆಯಿಂದ ಶೌಚಾಲಯ ಮುಚ್ಚಲಾಗಿದೆ. ಇದರಿಂದ ರೈತರು, ವ್ಯಾಪಾರಿಗಳಿಗೆ ಕಷ್ಟವಾಗಿದೆ. ತಕ್ಷಣವೇ ಶೌಚಾಲಯದ ಬಾಗಿಲು ತೆಗೆಯುವಂತೆ ರೈತ ಹನುಮಂತರಾಯಪ್ಪ ಒತ್ತಾಯಿಸಿದರು.

ಕ್ಯಾಂಟೀನ್ ಸೌಲಭ್ಯವಿಲ್ಲದೆ ಬೀದಿ ಬದಿಯ ಹೊಟೇಲ್‌ನಲ್ಲಿ ಊಟ ಮಾಡಬೇಕಿದೆ ಎನ್ನುತ್ತಾರೆ ರೈತ ಲಕ್ಕಪ್ಪ.

ಕಾವಲು ಹಾಗೂ ಸ್ವಚ್ಛತಾ ಸಿಬ್ಬಂದಿ ಕೊರತೆಯಿದೆ. ಇರುವ ಸಿಬ್ಬಂದಿಯಿಂದ ಸ್ವಚ್ಛತಾ ಕಾರ್ಯ ನಡೆಸಿದರೂ ಸಹ ವಿಶಾಲವಾದ ಮಾರುಕಟ್ಟೆ ಸ್ವಚ್ಛಗೊಳಿಸುವುದು ಕಷ್ಟವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-17-1435366047

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ