ಬೆಳಗಾವಿ| ಕೆಆರ್‌ಸಿಯುನಲ್ಲಿ ₹30 ಲಕ್ಷ ದುರ್ಬಳಕೆ; ಮೂವರು ನೌಕರರು ಅಮಾನತು

ಬೆಳಗಾವಿ| ಕೆಆರ್‌ಸಿಯುನಲ್ಲಿ ₹30 ಲಕ್ಷ ದುರ್ಬಳಕೆ; ಮೂವರು ನೌಕರರು ಅಮಾನತು

ಬೆಳಗಾವಿ| ಕೆಆರ್‌ಸಿಯುನಲ್ಲಿ ₹30 ಲಕ್ಷ ದುರ್ಬಳಕೆ; ಮೂವರು ನೌಕರರು ಅಮಾನತು

ಬೆಳಗಾವಿ: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ(ಕೆಆರ್‌ಸಿಯು) ₹30 ಲಕ್ಷ ದುರ್ಬಳಕೆ ಮಾಡಿ ವಂಚಿಸಿದ ಆರೋಪ ಎದುರಿಸುತ್ತಿರುವ ಐವರು ನೌಕರರ ಪೈಕಿ, ಮೂವರು ‘ಸೇವಾ ಅಮಾನತು’ ಶಿಕ್ಷೆಗೆ ಗುರಿಯಾಗಿದ್ದಾರೆ.

ಕೆಆರ್‌ಸಿಯು ಹಣಕಾಸು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಕುಲಸಚಿವರಾದ ಎಚ್.ಎಂ.ಮುರುಗೇಶ, ಮಹೇಶ ವಾಲಿ, ಪ್ರಥಮ ದರ್ಜೆ ಸಹಾಯಕ ಸಂದೀಪ ಬುರ್ಲಿ ಅವರನ್ನು ಮಂಗಳವಾರ ಸೇವೆಯಿಂದ ಅಮಾನತು ಮಾಡಲಾಗಿದೆ.

ಪ್ರಥಮ ದರ್ಜೆ ಸಹಾಯಕ ರಾಮು ಹಂಚಿನಾಳ, ಡೇಟಾ ಎಂಟ್ರಿ ಆಪರೇಟರ್‌ ಮಂಗಲಾ ಆರ್‌. ಅವರ ವಿಚಾರಣೆ ನಡೆಸಿ, ಮುಂದಿನ ಕ್ರಮ ಜರುಗಿಸುವ ಪ್ರಕ್ರಿಯೆ ನಡೆದಿದೆ.

ಹೇಗೆ ದುರ್ಬಳಕೆ?: ವಿಶ್ವವಿದ್ಯಾಲಯದಲ್ಲಿ ಸಂಚಿತ ವೇತನದಡಿ ಕೆಲಸ ಮಾಡುವ ನೌಕರರ ‘ಪಿಎಫ್‌’ ಹಣವನ್ನು, ಅವರ ಬ್ಯಾಂಕ್‌ ಖಾತೆ ಬದಲಿಗೆ ತಮ್ಮ ವೈಯಕ್ತಿಕ ಜಮೆ ಮಾಡಿಕೊಂಡಿದ್ದಾರೆ.

‘ಬೇರೆ ನೌಕರರ ವೇತನದಲ್ಲಿ ಶೇ 10ರಷ್ಟು ಮೊತ್ತ ಕಡಿತಗೊಳಿಸಲಾಗಿದೆ. ಇದಕ್ಕೆ ವಿಶ್ವವಿದ್ಯಾಲಯದ ಶೇ 10ರಷ್ಟು ಮೊತ್ತ ಸೇರಿಸಿ, ಶೇ 20ರಷ್ಟು ಮೊತ್ತವನ್ನು ಆಯಾ ನೌಕರರ ಎನ್‌ಪಿಎಸ್‌ ಖಾತೆಗೆ ಜಮೆ ಮಾಡಬೇಕಿತ್ತು. ಆದರೆ, ವಿಶ್ವವಿದ್ಯಾಲಯದ ಪಾಲಿನ ಶೇ 10ರಷ್ಟು ಮೊತ್ತವನ್ನು ಮೂರು ಪಟ್ಟು ಅಧಿಕ ಪಡೆದು, ತಮ್ಮ ವೈಯಕ್ತಿಕ ಎನ್‌ಪಿಎಸ್‌ ಖಾತೆಗಳಿಗೆ ಜಮೆ ಮಾಡಿಕೊಂಡು ವಂಚಿಸಿದ್ದಾರೆ’ ಎಂದು ವಿಶ್ವವಿದ್ಯಾಲಯದ ಕುಲಸಚಿವ ಸಂತೋಷ ಕಾಮಗೌಡ ತಿಳಿಸಿದರು.

‘ಇದಲ್ಲದೆ ಬೇರೆ ಬೇರೆ ಭತ್ಯೆಗಳ ಹೆಸರಿನಲ್ಲಿ ₹3 ಲಕ್ಷ ಕಬಳಿಸಿದ್ದಾರೆ. ಐಟಿ ಕೇಸ್‌ ಹೆಸರಿನಲ್ಲೂ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260902-26-706339736

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ