ಔರಾದ್ | ಬರದ ನಡುವೆ ಕೈಹಿಡಿದ ಚೆಕ್‌ಡ್ಯಾಂ: ಅಂತರ್ಜಲ ಹೆಚ್ಚಳ

ಔರಾದ್ | ಬರದ ನಡುವೆ ಕೈಹಿಡಿದ ಚೆಕ್‌ಡ್ಯಾಂ: ಅಂತರ್ಜಲ ಹೆಚ್ಚಳ

ಔರಾದ್ | ಬರದ ನಡುವೆ ಕೈಹಿಡಿದ ಚೆಕ್‌ಡ್ಯಾಂ: ಅಂತರ್ಜಲ ಹೆಚ್ಚಳ

ಔರಾದ್: ಮಳೆ ಕೈಕೊಟ್ಟಿದೆ... ಬೆಳೆಗಳು ಮೊಳಕೆಯಲ್ಲೇ ಒಣಗುತ್ತಿವೆ... ಇಂತಹ ಸಂಕಷ್ಟದ ನಡುವೆಯೂ ಔರಾದ್ ತಾಲ್ಲೂಕಿನ ಮುಂಗನಾಳ ಗ್ರಾಮದ ಕೆಲ ರೈತರ ಜಮೀನುಗಳಿಗೆ ಚೆಕ್‌ಡ್ಯಾಂ ನೀರಿನ ಆಸರೆಯಾಗಿದೆ.

ಮಳೆ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಡೆದು, ಅದನ್ನು ಭೂಮಿಯೊಳಗೆ ಇಂಗಿಸುವ ಉದ್ದೇಶದಿಂದ ಮಹಾರಾಷ್ಟ್ರ ಮೂಲದ ವಾಟರ್ ಸಂಸ್ಥೆಯೊಂದು ಗಡಿ ಭಾಗದ ಆಯ್ದ ಗ್ರಾಮಗಳಲ್ಲಿ ಕಲ್ಲು ಜಾಲಿ ತಡೆಗೋಡೆ (ಚೆಕ್‌ಡ್ಯಾಂ) ನಿರ್ಮಿಸುತ್ತಿದೆ. ಈ ಪ್ರಯತ್ನದಿಂದ ಬರದ ನಡುವೆಯೂ ಕೆಲ ರೈತರ ಬಾವಿಗಳಲ್ಲಿ ನೀರಿನ ಒಳ ಹರಿವು ಹೆಚ್ಚಿದೆ.

ಮುಂಗನಾಳ ಗ್ರಾಮದ ರೈತರ ಜಮೀನಿನ ಬಳಿ ಸುಮಾರು 500 ಮೀಟರ್ ಉದ್ದ, 12 ಮೀಟರ್ ಅಗಲ ಹಾಗೂ 3.5 ಮೀಟರ್ ಆಳದ ಚೆಕ್‌ಡ್ಯಾಂ ನಿರ್ಮಿಸಲಾಗಿದೆ. ಸದ್ಯ ಮಳೆ ಕೊರತೆಯಿದ್ದರೂ ಚೆಕ್‌ಡ್ಯಾಂನಲ್ಲಿ ನೀರು ಸಂಗ್ರಹವಾಗಿದ್ದು, ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಲು ಸಹಕಾರಿಯಾಗಿದೆ.

‘ಚೆಕ್‌ಡ್ಯಾಂನಿಂದ ನಮ್ಮ ಬಾವಿಯಲ್ಲಿ ನೀರಿನ ಒಳಹರಿವು ಹೆಚ್ಚಿದೆ. ಬರದ ನಡುವೆಯೂ ನಾಲ್ಕು ಎಕರೆ ಜಮೀನಿಗೆ ನೀರುಣಿಸುತ್ತಿದ್ದೇನೆ. ಸೋಯಾಬಿನ್, ತೊಗರಿ ಮೊಳಕೆಯೇ ಬಾರದ ಖಾಲಿ ಜಾಗದಲ್ಲಿ ತರಕಾರಿ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದೇನೆ’ ಎಂದು ರೈತ ಗೋವಿಂದ ಇಂಗಳೆ ತಿಳಿಸಿದ್ದಾರೆ.

ಚೆಕ್‌ಡ್ಯಾಂ ನಿರ್ಮಾಣಕ್ಕೆ ಒಟ್ಟು ₹3.5 ಲಕ್ಷ ವೆಚ್ಚವಾಗಿದ್ದು, ಅದರಲ್ಲಿ ₹15 ಸಾವಿರವನ್ನು ತಾವು ವಂತಿಗೆಯಾಗಿ ನೀಡಿದ್ದು, ಉಳಿದ ಮೊತ್ತವನ್ನು ಸಂಸ್ಥೆ ಭರಿಸಿದೆ ಎಂದು ಅವರು ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ