ಚಿಮುಲ್: ರದ್ದಾಗಿ ತಿಂಗಳಾದರೂ ಹೊಸ ನಾಮನಿರ್ದೇಶನವಿಲ್ಲ

ಚಿಮುಲ್: ರದ್ದಾಗಿ ತಿಂಗಳಾದರೂ ಹೊಸ ನಾಮನಿರ್ದೇಶನವಿಲ್ಲ

ಚಿಮುಲ್: ರದ್ದಾಗಿ ತಿಂಗಳಾದರೂ ಹೊಸ ನಾಮನಿರ್ದೇಶನವಿಲ್ಲ

ಚಿಕ್ಕಬಳ್ಳಾಪುರ: ರಾಜಕೀಯ ಜಟಾಪಟಿ ಕಾರಣಕ್ಕೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಸರ್ಕಾರದ ನಾಮನಿರ್ದೇಶಿತ ನಿರ್ದೇಶಕ ಸ್ಥಾನದ ನೇಮಕ ರದ್ದಾಗಿ ಒಂದು ತಿಂಗಳಾದರೂ ಹೊಸ ನಿರ್ದೇಶಕ ನೇಮಕ ಸಾಧ್ಯವಾಗಿಲ್ಲ. 

ಮತ್ತೊಂದು ಕಡೆ ಕೆ.ಆರ್. ರಾಜಣ್ಣ (ಕಾಕಲಚಿಂತ ರಾಜಣ್ಣ) ಅವರ ನಾಮನಿರ್ದೇಶನ ರದ್ದಾಗಿ ಒಂದು ತಿಂಗಳಾದರೂ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ವೆಬ್‌ಸೈಟ್‌ನಲ್ಲಿ ಸರ್ಕಾರದ ನಾಮ ನಿರ್ದೇಶಿತ ನಿರ್ದೇಶಕರ ಎಂದು ಕೆ.ಆರ್. ರಾಜಣ್ಣ ಅವರ ಹೆಸರು ಮತ್ತು ಭಾವಚಿತ್ರವೇ ಇದೆ.

ನಾಮನಿರ್ದೇಶಿತ ನಿರ್ದೇಶಕರಾಗಿದ್ದ ಕೆ.ಆರ್. ರಾಜಣ್ಣ ಅವರ ನೇಮಕವನ್ನು  ಆ.18ರಂದು ಸರ್ಕಾರ ರದ್ದುಗೊಳಿಸಿತ್ತು. ಮರು ದಿನವೇ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ರಮೇಶ್ ಅವರನ್ನು ನೇಮಿಸಿತ್ತು. ಹೀಗೆ ನೇಮಕವಾದ ಕೆಲವೇ ಗಂಟೆಗಳಲ್ಲಿ ರಮೇಶ್ ನಾಮನಿರ್ದೇಶನವನ್ನೂ ರದ್ದುಗೊಳಿಸಲಾಯಿತು.

ಜಟಾಪಟಿ ಮತ್ತು ರಾಜಕೀಯ ವಿವಾದದ ಕಾರಣ ಸರ್ಕಾರದ ನಾಮನಿರ್ದೇಶನ ರದ್ದುಗೊಂಡು ಒಂದು ತಿಂಗಳಾಗಿದೆ. ಇಲ್ಲಿಯವರೆಗೂ ಹೊಸ ನೇಮಕ ಸಾಧ್ಯವಾಗಿಲ್ಲ. ರಾಜಕೀಯ ಜಟಾಪಟಿಯ ಕಾರಣದಿಂದಲೇ ತಿಂಗಳಾದರೂ ನಾಮನಿರ್ದೇಶನ ಸಾಧ್ಯವಾಗಿಲ್ಲ. 

ಸರ್ಕಾರ ಕೆ.ಆರ್. ರಾಜಣ್ಣ ಅವರನ್ನೇ ಮುಂದುವರಿಸುತ್ತದೆಯೇ ಅಥವಾ ಹೊಸದಾಗಿ ಮತ್ತೊಬ್ಬರನ್ನು ಆ ಸ್ಥಾನಕ್ಕೆ ನಾಮನಿರ್ದೇಶನ ಮಾಡುತ್ತದೆಯೇ, ಜಿಲ್ಲಾ ಮಟ್ಟದ ಈ ಹುದ್ದೆ ಯಾರಿಗೆ ಒಲಿಯುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. 

ಚಿಮುಲ್ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಪೆರೇಸಂದ್ರ ಕ್ಷೇತ್ರದಿಂದ ಕೆ.ಆರ್. ರಾಜಣ್ಣ ಕಣಕ್ಕೆ ಇಳಿದಿದ್ದರು. ‘ನಾನು ಡಾ.ಎಂ.ಸಿ ಸುಧಾಕರ್ ಬೆಂಬಲಿತ ಅಭ್ಯರ್ಥಿ’ ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದರು. ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಅಸಮಾಧಾನ ಸಹ ವ್ಯಕ್ತಪಡಿಸಿದ್ದರು.

ರಾಜಣ್ಣ ಚುನಾವಣೆಯಲ್ಲಿ ಸೋತ ತರುವಾಯವೂ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.  ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್, ಚುನಾವಣೆಯಲ್ಲಿ ಸೋತ ಕೆ.ಆರ್. ರಾಜಣ್ಣ ಅವರನ್ನು ಚಿಮುಲ್‌ಗೆ ಸರ್ಕಾರದ ನಾಮನಿರ್ದೇಶನ ನಿರ್ದೇಶಕರನ್ನಾಗಿ ನೇಮಿಸಿದರು. 

ಡಾ.ಎಂ.ಸಿ ಸುಧಾಕರ್ ಜಿಲ್ಲಾ ಉಸ್ತುವಾರಿಯಿಂದ ಕೆಳಕ್ಕೆ ಇಳಿಯುತ್ತಿದ್ದಂತೆ ರಾಜಣ್ಣ ಅವರ ನೇಮಕವನ್ನು ರದ್ದುಗೊಳಿಸಿ, ಆ ಸ್ಥಾನಕ್ಕೆ ಯಲುವಳ್ಳಿ ರಮೇಶ್ ಅವರನ್ನು ನೇಮಿಸಲಾಯಿತು.  ರಮೇಶ್ ಮನೆಯಲ್ಲಿ ಸಂಭ್ರಮ ಆಚರಣೆಯೂ ನಡೆಯಿತು. ಈ ಸಂಭ್ರಮದ ನಡುವೆಯೇ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ ರಮೇಶ್ ನೇಮಕವನ್ನೂ ರದ್ದುಗೊಳಿಸಿತು. ಈ ಎಲ್ಲ ಪ್ರಕ್ರಿಯೆಗಳು ಆ.18 ಮತ್ತು 19ರಂದು ನಡೆದವು.

ಇದು ಜಿಲ್ಲಾ ಮಟ್ಟದ ಹುದ್ದೆಯಾದ ಕಾರಣ ಕಾಂಗ್ರೆಸ್ ಶಾಸಕರು ಮತ್ತು ಮುಖಂಡರನ್ನು ವಿಶ್ವಾಸಕ್ಕೆ ಪಡೆದು ಮತ್ತು ಅವರ ಜೊತೆ ಚರ್ಚಿಸಿಯೇ ನೇಮಕ ಮಾಡಬೇಕಿದೆ. 

ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿಯಲ್ಲಿ ಕಾಂಗ್ರೆಸ್ ಶಾಸಕರು ಮತ್ತು ಗೌರಿಬಿದನೂರಿನಲ್ಲಿ ಕಾಂಗ್ರೆಸ್ ಬೆಂಬಲಿಸಿರುವ ಪಕ್ಷೇತರ ಶಾಸಕರು ಇದ್ದಾರೆ. ಈ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ನ ಪ್ರಮುಖ ಮುಖಂಡರಿಗೆ ಅಥವಾ ಶಿಡ್ಲಘಟ್ಟ ಕ್ಷೇತ್ರದ ಕಾಂಗ್ರೆಸ್ ಮುಖಂಡರಿಗೆ ನಾಮನಿರ್ದೇಶನ ಹುದ್ದೆ ದೊರೆಯುತ್ತದೆಯೇ, ಜಿಲ್ಲಾ ಉಸ್ತುವಾರಿ ಸಚಿವರು ಯಾರಿಗೆ ಶಿಫಾರಸು ಮಾಡುವರು –ಹೀಗೆ ಜಿಲ್ಲೆಯ ಸಹಕಾರ ವಲಯದಲ್ಲಿ ನಾನಾ ಚರ್ಚೆಗಳು ಗರಿಗೆದರಿವೆ. 

ರಾಜಕೀಯ ಜಟಾಪ‍ಟಿ ಕಾರಣಕ್ಕೆ ರಾಜಣ್ಣ ನೇಮಕ ರದ್ದು ಯಾವ ಶಾಸಕರ ಬೆಂಬಲಿಗರಿಗೆ ಒಲಿಯದೆ ಹುದ್ದೆ ಜಿಲ್ಲಾ ಉಸ್ತುವಾರಿ ಸಚಿವರ ನಡೆಯತ್ತ ಚಿತ್ತ

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ