ಮೈಸೂರು ಅರಮನೆ ಆವರಣ: ಇಂದು ಕುಶಾಲತೋಪು ಫಿರಂಗಿ ಗಾಡಿ ಪೂಜೆ

ಮೈಸೂರು ಅರಮನೆ ಆವರಣ: ಇಂದು ಕುಶಾಲತೋಪು ಫಿರಂಗಿ ಗಾಡಿ ಪೂಜೆ

ಮೈಸೂರು ಅರಮನೆ ಆವರಣ: ಇಂದು ಕುಶಾಲತೋಪು ಫಿರಂಗಿ ಗಾಡಿ ಪೂಜೆ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಇಲ್ಲಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ‘ಕುಶಾಲತೋಪು’ ಸಿಡಿಸುವ ಫಿರಂಗಿ ಗಾಡಿಗಳಿಗೆ ಪೂಜಾ ಕಾರ್ಯಕ್ರಮವನ್ನು ಶುಕ್ರವಾರ (ಸೆ.25) ಬೆಳಿಗ್ಗೆ 9.30ಕ್ಕೆ ಹಮ್ಮಿಕೊಳ್ಳಲಾಗಿದೆ.

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್ ನೇತೃತ್ವದಲ್ಲಿ 11 ಫಿರಂಗಿಗಳಿಗೆ ಪೂಜೆ ನೆರವೇರಲಿದೆ. ಕುಶಾಲತೋಪು ಸಿಡಿಸುವಾಗ ಯಾವುದೇ ಅವಘಡ ಉಂಟಾಗದಂತೆ ನೋಡಿಕೊಳ್ಳಲು ಪೂಜೆ ಸಲ್ಲಿಸುವುದು ಸಂಪ್ರದಾಯವಾಗಿದೆ.

ಜಂಬೂಸವಾರಿ ದಿನದಂದು ಅಂಬಾರಿಯಲ್ಲಿರುವ ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸುವ ಸಂದರ್ಭದಲ್ಲಿ 21 ಕುಶಾಲತೋಪು ಸಿಡಿಸುವುದು ಸಂಪ್ರದಾಯ. ಅದಕ್ಕಾಗಿ ಪೂರ್ವಭಾವಿಯಾಗಿ ಆನೆಗಳು ಹಾಗೂ ಕುದುರೆಗಳು ಶಬ್ದಕ್ಕೆ ಬೆಚ್ಚದಂತೆ ಮಾಡಲು ತಾಲೀಮು ನೀಡಲಾಗುತ್ತದೆ.

ಕುಶಾಲತೋಪು ತಾಲೀಮು ನಡೆಸುವ ದಿನಗಳು ಸಮೀಪಿಸುತ್ತಿರುವುದರಿಂದಾಗಿ, ಫಿರಂಗಿಗಳನ್ನು ಗುರುವಾರ ಸ್ವಚ್ಛಗೊಳಿಸಿದ ಪೊಲೀಸ್‌ ಸಿಬ್ಬಂದಿ ಪೂಜೆಗೆ ಅಣಿಗೊಳಿಸಿದ್ದಾರೆ.

ಕುಶಾಲತೋಪು ಸಿಡಿಸುವ ಅಣಕು ಅಭ್ಯಾಸ (ಒಣತಾಲೀಮ್) ಮೊದಲಿಗೆ ನಡೆಯಲಿದೆ. ನಗರ ಸಶಸ್ತ್ರ ಮೀಸಲು ಪಡೆಯ 35ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸುವರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ